Namma Millets Yojana; ನಮ್ಮ ಮಿಲೆಟ್ ಯೋಜನೆ ಘೋಷಣೆ

ಬೆಂಗಳೂರು, ಫೆಬ್ರವರಿ 16; ಹಣಕಾಸು ಖಾತೆ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದವರು ಎಂಬ ದಾಖಲೆಯನ್ನು ಅವರು ಮಾಡಿದ್ದಾರೆ.

ಸಿದ್ದರಾಮಯ್ಯ ಈ ಬಾರಿ ಮಂಡನೆ ಮಾಡುತ್ತಿರುವ ಬಜೆಟ್ ಗಾತ್ರ 3,71,383 ಕೋಟಿ ರೂ.ಗಳು.
ಬಜೆಟ್ ಭಾಷಣದಲ್ಲಿ ಅವರು 'ನಮ್ಮ ಮಿಲೆಟ್' ಎಂ ಘೋಷಣೆಯನ್ನು ಮಾಡಿದ್ದಾರೆ. ಈ ಮೂಲಕ ಸಿರಿಧಾನ್ಯಗಳ ಉಪಯೋಗಕ್ಕೆ ಪ್ರೋತ್ಸಾಹವನ್ನು ನೀಡುವುದಾಗಿ ಹೇಳಿದ್ದಾರೆ.

Karnataka Budget 2024: CM Siddaramaiah Announced Namma Millets Yojana Know More

ಕರ್ನಾಟಕ ಸರ್ಕಾರ ಈಗಾಗಲೇ ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯ ಪ್ರೋತ್ಸಾಹಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ವರ್ಷದ ಜನವರಿ ‌5 ರಿಂದ 7 ರವರೆಗೆ 'ಅಂತರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳ'ವನ್ನು ಸಹ ಆಯೋಜನೆ ಮಾಡಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳ ಬಳಕೆ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದೆ. ಸಿರಿಧಾನ್ಯಗಳಿಂದ ರುಚಿಕರ ಆಹಾರ ತಯಾರಿಸಬಹುದು ಎಂದು ಈಗಾಗಲೇ ವಿವಿಧ ಬಗೆಯ ಆಹಾರ ತಯಾರಿಕೆಯ ಮೂಲಕ ತೋರಿಸಿಕೊಡಲಾಗಿದೆ.

ಸಿರಿಧಾನ್ಯ ರುಚಿಕರ ಹಾಗೂ ಆರೋಗ್ಯಯುತ ಆಹಾರ. ಸಾರ್ವಜನಿಕರು ಹೆಚ್ಚು ಸಾವಯವ ಹಾಗೂ ಸಿರಿಧಾನ್ಯ ಆಹಾರ ಹೆಚ್ಚು ಬಳಸಬೇಕು ಎಂಬ ಉದ್ದೇಶದಿಂದ ಸಿರಿಧಾನ್ಯ ಬೆಳೆಯಲು ಸರ್ಕಾರ ರೈತರನ್ನು ಪ್ರೋತ್ಸಾಹಿಸುತ್ತಿದೆ. ರೈತರಿಗೂ ಸಿರಿಧಾನ್ಯ ಬೆಳೆಯಲು ಹೆಚ್ಚು ನೀರಿನ ಅವಶ್ಯಕತೆ ಇಲ್ಲ.

ಸಾವಯವ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರಿಗೆ 10 ಸಾವಿರ ಸಹಾಯಧನ ನೀಡಲಾಗುತ್ತಿದೆ. ಸಿರಿಧಾನ್ಯದ ಬೇಡಿಕೆ ಹೆಚ್ಚಿಸಲು ಹೊರದೇಶಕ್ಕೆ ರಫ್ತು ಮಾಡಲು ಚಿಂತಿಸಲಾಗುತ್ತಿದೆ. ಸಿರಿಧಾನ್ಯ ಇತ್ತೀಚೆಗೆ ಸಾರ್ವಜನಿಕರಲ್ಲಿ ಉಂಟಾಗುವ ಖಾಯಿಲೆಗಳಿಗೆ ರಾಮಬಾಣ‌‌.

ಇವುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ಇದಕ್ಕೆ ಹೆಚ್ಚಿನ ಕೀಟನಾಶಕ, ರಾಸಾಯನಿಕ ಸಿಂಪಡಣೆ ಮಾಡುವುದಿಲ್ಲ. ಹಾಗಾಗಿ ಸಿರಿಧಾನ್ಯ ರೈತ ಸ್ನೇಹಿ ಬೆಳೆ. ವಿವಿಧ ಕಾರ್ಯಕ್ರಮಗಳ ಮೂಲಕ ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯ ಪ್ರೋತ್ಸಾಹಿಸಲಾಗುತ್ತಿದೆ.

ಸಿರಿಧಾನ್ಯ ಸಂಸ್ಕರಣೆಯೇ ಅತೀ ಹೆಚ್ಚು ಸಮಸ್ಯಾತ್ಮಕ ವಿಷಯವಾಗಿದ್ದು, ಸಿರಿಧಾನ್ಯಗಳ ಪ್ರಾಥಮಿಕ ಸಂಸ್ಕರಣ ಘಟಕಗಳ ಸ್ಥಾಪನೆಗಾಗಿ ಪ್ರೋತ್ಸಾಹ ಪಡೆಯಲು ಸಿರಿಧಾನ್ಯ ಬೆಳೆಯುವ ಅರ್ಹ ರೈತರು, ನವೋದ್ಯಮಿಗಳು, ರೈತ ಸಂಘಗಳು, ನೋಂದಾಯಿತ ಸ್ವ-ಸಹಾಯ ಗುಂಪುಗಳು, ರೈತ ಉತ್ಪಾದಕರ ಸಂಸ್ಥೆಗಳು, ಖಾಸಗಿ ಉದ್ದಿಮೆದಾರರು, ಸಾರ್ವಜನಿಕ ವಲಯ ಘಟಕಗಳು, ಜಂಟಿ ವಲಯ ಘಟಕಗಳು ಮತ್ತು ಆಹಾರ ಘಟಕಗಳ ಸ್ಥಾಪನೆ ಅಥವಾ ವಿಸ್ತರಣೆ ಅಥವಾ ಆಧುನೀಕರಣ ಉದ್ದಿಮೆಯಲ್ಲಿ ಕಾರ್ಯನಿರತರು ಪ್ರತಿ ಘಟಕಕ್ಕೆ ಶೇ.50 ಸಹಾಯಧನ ಅಥವಾ ಗರಿಷ್ಠ ರೂ.10 ಲಕ್ಷದಂತೆ 2 ಕಂತುಗಳಲ್ಲಿ ನೀಡಲಾಗುತ್ತಿದೆ.

ಇದಲ್ಲದೆ ಸಿರಿಧಾನ್ಯ ಆಧಾರಿತ ಸಿದ್ಧ ಆಹಾರಗಳ ಉತ್ಪನ್ನಗಳ ಸಂಸ್ಕರಣೆ ಘಟಕಗಳನ್ನು ನಿರ್ಮಿಸಲು ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರೀಕರಣ (ಪಿ.ಎಮ.ಎಫ್.ಎಮ್.ಈ) ಯೋಜನೆಯಡಿ ಶೇ.50 ರ ಸಹಾಯಧನ ದಲ್ಲಿ ಗರಿಷ್ಟ 15 ಲಕ್ಷಗಳ ಸಹಾಯಧನ ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+