Karnataka Budget 2023 Key Highlights: ಸಿದ್ದರಾಮಯ್ಯ ಮಂಡಿಸಿದ 14ನೇ ಬಜೆಟ್‌ನ ಮುಖ್ಯಾಂಶಗಳು

ಬೆಂಗಳೂರು, ಜುಲೈ 07: ಸಿಎಂ ಸಿದ್ದರಾಮಯ್ಯ ಅವರು ಇಂದು 3 ಗಂಟೆಗಳ ಸುದೀರ್ಘ ಐತಿಹಾಸಿಕ ಬಜೆಟ್ ಮಂಡಿಸಿದರು. ಮುಖ್ಯಾಂಶಗಳೆಂದರೆ, ಆಸ್ಪತ್ರೆಗಳ ಉನ್ನತೀಕರಣ, ಡಯಾಲಿಸಿಸ್ ವ್ಯವಸ್ಥೆಗೆ ಒತ್ತು, ಹಠಾತ್ ಸಾವು ತಡೆಗೆ ಅಪ್ಪು ಹೆಸರಲ್ಲಿ ಯಂತ್ರ ಅಳವಡಿಕೆಗೆ ಸರ್ಕಾರ ನಿರ್ಧರಿಸಿದೆ. ಯುವಕರಿಗೆ ಬೆನ್ನೆಲುಭಾಗಿ 'ಯುವನಿಧಿ' ಜಾರಿ, ಹಸಿವು ಮುಕ್ತ ರಾಜ್ಯಕ್ಕಾಗಿ 'ಅನ್ನಭಾಗ್ಯ' ಜಾರಿಗೊಳಿಸುತ್ತಿದೆ. ಕೃಷಿ ಉತ್ಪನ್ನಗಳ ಸಂಸ್ಕರಣೆ, ರೈತರ ಸಾಲ ಮೀತಿ ಏರಿಕೆ ಮಾಡಿದೆ. ನಮ್ಮ ಮೆಟ್ರೋಗೆ ಯೋಜನೆ ಜತೆ 'ಬ್ರಾಂಡ್ ಬೆಂಗಳೂರು' ಉಪಕ್ರಮವನ್ನು ಸರ್ಕಾರ ಉತ್ತೇಜಿಸಿತ್ತಿದೆ. 5 ಗ್ಯಾರಂಟಿಗಳಿಗೆ ಭರಪೂರ ಹಣ ಒದಗಿಸಲಿದೆ. ಇವುಗಳ ನಿರ್ವಹಣೆಗೆ ಅಬಕಾರಿ, ಕಂದಾಯ, ನೋಂದಣಿ ಮುದ್ರಾಂಕ, ವಾಣಿಜ್ಯ ತೆರಿಗೆ ಹೆಚ್ಚಿಸಲು ಸರ್ಕಾರ ಆಸಕ್ತಿ ತೋರಿದೆ.

ಕರ್ನಾಟಕ ರಾಜ್ಯ ಬಜೆಟ್ 2023-24ರ ಪ್ರಮುಖಾಂಶಗಳು

  1. 1. ಪಂಚ ಗ್ಯಾರಂಟಿಗೆ ವಾರ್ಷಿಕ 52ಸಾವಿರ ಕೋಟಿ ತಗುಲಲಿದ್ದು, 1.3ಕೋಟಿ ಜನರಿಗೆ ಉಪಯೋಗವಾಗಲಿದೆ. ಮಾಸಿಕ 4-5ಸಾವಿರ ಕೋಟಿ ಇದಕ್ಕಾಗಿ ಮೀಸಲಿಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
  2. 2. ಅಬಕಾರಿ ಸುಂಕವನ್ನು ಬಜೆಟ್ ನಲ್ಲಿ ಶೇ. 20 ರಷ್ಟು ಹೆಚ್ಚಿಸಲಾಗಿದೆ, ಬಿಯರ್ ಮೇಲಿನ ಸುಂಕವನ್ನು ಶೇಕಡಾ 175 ರಿಂದ ಶೇ.185 ರಷ್ಟು ಗೆ ಏರಿಸಲಾಗಿದೆ.
  3. 3. ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ಕನಸಾದ 'ಬ್ರಾಂಡ್ ಬೆಂಗಳೂರು' ಉಪಕ್ರಮ ಅನುಷ್ಠಾನಕ್ಕಾಗಿ ಒಟ್ಟು 45 ಸಾವಿರ ಕೋಟಿ ರೂಪಾಯಿ ಒದಗಿಸಲಾಗಿದೆ. ನಮ್ಮ ಮೆಟ್ರೋ ಯೋಜನೆಗಳಿಗೆ ಒಟ್ಟು 30 ಸಾವಿರ ಕೋಟಿ ಹಣ ನೀಡಲು ಸರ್ಕಾರ ನಿರ್ಧರಿಸಿದೆ.
  4. 4. ಎಸ್‌ಸಿ, ಎಸ್‌ಟಿ ವರ್ಗದ ವಿದ್ಯಾರ್ಥಿಗಳು, ಬಿಸಿಯೂಟ ಯೋಜನೆ ಮುಂದುವರಿಕೆಯ ಭಾಗವಾಗಿ ಒಟ್ಟಾರೆ ಶಿಕ್ಷಣ ವಲಯಕ್ಕೆ ಕಾಂಗ್ರೆಸ್ ಸರ್ಕಾರ 37,587 ಕೋಟಿ ರೂಪಾಯಿ ಮೀಸಲಿಟ್ಟಿದೆ.
  5. 5. ಕೃಷಿಗೆ ಪೂರಕವಾದ ಯೋಜನೆಗಳಿಗೆ ವೇಗ ನೀಡಲು ಪ್ರಸಕ್ತ ಸಾಲಿನಲ್ಲಿ ಸರ್ಕಾರ 19,044 ನೀಡಲಿದೆ. ಇದರಲ್ಲಿ 940 ಕೋಟಿ ರೂ. ಬಾಕಿ ಮೊತ್ತದ 10 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ಸಾವಿರಾರು ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸಲಿದೆ.
  6. 6. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 172 ಯೋಜನೆ ರೂಪಿಸಲಾಗಿದೆ. ಅದರಡಿ 19 ಹಾಗೂ ಉತ್ತರ ಕರ್ನಾಟಕದ ಭಾಗದ ಜಿಲ್ಲೆಗಳ 899 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
  7. 7. ಕೇಂದ್ರ ಸರ್ಕಾರ 2023-24ನೇ ಸಾಲಿನ ಆಯವ್ಯಯದಲ್ಲಿ ಭದ್ರಾ ಯೋಜನೆಗೆ 5,300 ಕೋಟಿ ರೂ. ಅನುದಾನ ಘೋಷಿಸಿದೆ. ಆ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಲಿದೆ.
  8. 8. ಕಂದಾಯ ಇಲಾಖೆಗೆ ಒಟ್ಟು 16,167 ಕೋಟಿ ರೂ. ಮೀಸಲಿಟ್ಟಿರುವ ರಾಜ್ಯ ಸರ್ಕಾರವು ಈ ವಿಭಾಗದಿಂದ ಹೆಚ್ಚು ತರಿಗೆ ಸಂಗ್ರಹಕ್ಕೆ ಮುಂದಾಗಿದೆ.
  9. 9. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವೆಚ್ಚ ಸರ್ಕಾರ ಭರಿಸಲಿದೆ, ಹೀಗಿದ್ದರೂ ಒಳಾಡಳಿತ ಮತ್ತು ಸಾರಿಗೆ 16,638 ಕೋಟಿ ಒಗಿದಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
  10. 10. ಅನ್ನಭಾಗ್ಯ ಯೋಜನೆಗೆ ಸುಮಾರು 10,000 ಕೋಟಿ ರೂ. ವೆಚ್ಚವಾಗಲಿದೆ. 4.42 ಕೋಟಿ ಬಿಪಿಎಲ್ ಫಲಾನುಭವಿಗಳು ಇದರ ಲಾಭ ಪಡೆಯಲಿದ್ದಾರೆ. ಕೇಂದ್ರ ಸರ್ಕಾರ ಗುರುತಿಸದ ಪಡಿತರಿಗೂ ಸರ್ಕಾರ ತಲಾ 10 ಕೇಜಿ ಅಕ್ಕಿ ನೀಡಲಿದೆ.
  11. 11. ರಾಜ್ಯದ GSDP ಬೆಳವಣಿಗೆ ದರವನ್ನು ಶೇ. 13 ರಿಂದ ಶೇ.17ಕ್ಕೆ ಹೆಚ್ಚಿಸುವ ಮೂಲಕ ರಾಜ್ಯವನ್ನು 1 ಟ್ರಿಲಿಯನ್ ಡಾಲರ್‌ ಎಕಾನಮಿಯಾಗಿ ಏರಿಸುವ ಗುರಿ ಕಾಂಗ್ರೆಸ್ ಸರ್ಕಾರ ಹೊಂದಿದೆ.
  12. 12. ಸಹಕಾರ ಮತ್ತು ರೇಷ್ಮೆ ವಲಯಕ್ಕೆ ಬಂದರೆ, 30 ಲಕ್ಷಕ್ಕೂ ಹೆಚ್ಚು ರೈತರಿಗೆ 25,000 ಕೋಟಿ ರೂ. ಸಾಲ ವಿತರಣೆ ಗುರಿ ಇಟ್ಟುಕೊಳ್ಳಲಾಗಿದೆ.
  13. 13. ರೈತರಿಗೆ ನೀಡಲಾಗುವ ಮಧ್ಯಮ ಮತ್ತು ದೀರ್ಘಾವಧಿ ಸಾಲ ಮೀತಿ ಹೆಚ್ಚಿಸಲಾಗಿದೆ. ಒಟ್ಟಾರೆ ಕೃಷಿಗೆ 5,860 ಕೋಟಿ ರೂ. ಅನುದಾನ ನಿಗದಿ ಮಾಡಲಾಗಿದೆ. ಜೊತೆಗೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಕ್ರಮ ಕೈಗೊಳ್ಳಲಾಗಿದೆ.
  14. 14. ಆರೋಗ್ಯ ಇಲಾಖೆಗೆ ಒತ್ತು ನೀಡಿರುವ ಸರ್ಕಾರ ಕೆಲವು ಆಸ್ಪತ್ರೆಗಳನ್ನು ಉನ್ನತೀಕರಿಸಲಿದೆ. ದಿ.ಡಾ.ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಹಠಾತ್ ನಿಧನ ತಡೆಗೆ ಜಿಲ್ಲಾ ವ್ಯಾಪ್ತಿಯಲ್ಲಿ AED ಚಿಕಿತ್ಸಾ ಯಂತ್ರ ಅಳವಡಿಸುತ್ತಿದೆ. ಆರೋಗ್ಯ ಇಲಾಖೆಗೆ 14,950 ಕೋಟಿ ನಿಗದಿ ಮಾಡಿದೆ.
  15. 15. ಇನ್ನೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 24,166 ಕೋಟಿ ರೂ, ಇಂಧನ ಇಲಾಖೆಗೆ 22,773 ಕೋಟಿ ರೂಪಾಯಿ, ಗ್ರಾಮೀಣಾಭಿವೃದ್ಧಿ ಇಲಾಖೆ 18,038 ಕೋಟಿ ರೂ, ಲೋಕೋಪಯೋಗಿ ಇಲಾಖೆ 10,143 ಕೋಟಿ ರೂ. ಹಾಗೂ ಪಶುಸಂಗೋಪನೆ ಮತ್ತು ಮೀನುಗಾರಿಕೆ ವಲಯಕ್ಕೆ 3,024 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ.
Karnataka-Budget-2023-Live

Jul 07, 2023, 4:30 pm IST

ಮಾಸಿಕ 2000 ರೂ. ಆಗಸ್ಟ್ 15ಕ್ಕೆ ಜಮೆ

ಆಗಸ್ಟ್ 15ರಂದು ಒಂದು ಕುಟುಂಬದ ಮಹಿಳೆಗೆ ಮಾಸಿಕ 2,000 ರೂಪಾಯಿ ಜಮೆ ಮಾಡಲಾಗುವುದು. ಮಹಿಳೆ ದಾಖಲಾತಿ ಪಡೆಯಲು, ನೋಂದಣಿ ಸಂಬಂಧ ಗೃಹಲಕ್ಷ್ಮೀ ಯೋಜನೆ ಘೋಷನೆಯಾದರೂ ತಡವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
Jul 07, 2023, 4:25 pm IST

ರಾಜ್ಯ ಆರ್ಥಿಕ ದಿವಾಳಿಯಾಗದಂತೆ ಮಾಡಿದ್ದೇವೆ: ಸಿಎಂ

ಗ್ಯಾರಂಟಿ ಯೋಜನೆಗಳ ಬಗ್ಗೆ, ಅದನ್ನು ಅನುದಾನ ಒದಗಿಸುವ ಬಗ್ಗೆ ವಿಪಕ್ಷಗಳು ಟೀಕೆ ಮಾಡಿದ್ದವು. ನಾವು ಗ್ಯಾರಂಟಿ ಯೋಜನೆಗಳು ಜಾರಿ ತರುತ್ತೇವೆ. ಅದಕ್ಕಾಗಿ ಸೂಕ್ತವಾಗಿ ಹಣ ಹೊಂದಿಸುತ್ತೇವೆ. ನುಡಿದಂತೆ ನಡೆದುಕೊಳ್ಳುತ್ತೇವೆ. ಈಗಾಗಲೇ ಐದು ಭರವಸೆಗಳಿಗೆ ಹಣ ಹಂಚಿಕೆ ಮಾಡಿದ್ದೇವೆ. ರಾಜ್ಯ ಆರ್ಥಿಕ ದಿವಾಳಿಯಾಗದಂತೆ ನೋಡಿಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
Jul 07, 2023, 4:20 pm IST

ಸಿಎಂ ಸುದ್ದಿಗೋಷ್ಠಿ ಆರಂಭ

ಬಜೆಟ್ ಮಂಡನೆ ಮುಕ್ತಾಯ ಬಳಿಕ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸುದ್ದಿಗೋಷ್ಠಿ ಆರಂಭ. ಇದು ಗ್ಯಾರಂಟಿ ಬಜೆಟ್ ಎಂದು ಬಣ್ಣಿಸಿದ ಸಿಎಂ.
Jul 07, 2023, 3:46 pm IST

ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆ

ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯವನ್ನು ಕಲ್ಪಿಸಲು ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕೈಗೊಳ್ಳುವ ದೃಷ್ಟಿಯಿಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುವುದು. ರಾಜ್ಯದಲ್ಲಿಯೂ ದೇವಾಲಯಗಳ ನಿರ್ಮಾಣಕ್ಕಾಗಿ ನುರಿತ ಶಿಲ್ಪಿಗಳನ್ನು ತಯಾರಿಸಲು ಕೋಲಾರ ಜಿಲ್ಲೆಯಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Jul 07, 2023, 3:43 pm IST

ಸದನಕ್ಕೆ ಅನಾಮಧೇಯ ವ್ಯಕ್ತಿ ಎಂಟ್ರಿ

ವಿಧಾನಸಭೆಯಲ್ಲಿ ಬಂದು ಕುಳಿತಿದ್ದ ಅನಾಮಧೇಯ ವ್ಯಕ್ತಿ. ಶಾಸಕರಲ್ಲದ ವ್ಯಕ್ತಿ ಸುಮಾರು ಹದಿನೈದು ನಿಮಿಷಗಳ ಕಾಲ ಕೂತಿದ್ದ. ದೇವದುರ್ಗ ಶಾಸಕಿಯ ಆಸನದಲ್ಲಿ ಕೂತಿದ್ದ ವ್ಯಕ್ತಿ. ಶಾಸಕರೊಬ್ಬರು ನೋಡಿ ಹೊರ ಕಳುಹಿಸಿದ ಘಟನೆ ಬಜೆಟ್ ಮಂಡನೆ ದಿನವೇ ನಡೆದಿದೆ.
Jul 07, 2023, 3:06 pm IST

ಬಜೆಟ್ ಅಂತ್ಯ: 4 ಗಂಟೆಗೆ ಸಿಎಂ ಸುದ್ದಿಗೋಷ್ಠಿ

ಕರ್ನಾಟಕ ಬಜೆಟ್ ಮಂಡನೆ ಅಂತ್ಯಗೊಂಡ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯನವರನ್ನು ಸಂಪುಟ ಸಚಿವರು, ನಾಯಕರು ಅವರನ್ನು ಅಭಿನಂದಿಸಿದರು. ನಂತರ ಸಂಜೆ 4 ಗಂಟೆಗೆ ಬಜೆಟ್ ಕುರಿತು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿ ಮಹತ್ವದ ನಡೆಯಲಿದೆ.
Jul 07, 2023, 3:04 pm IST

ಸಿದ್ದರಾಮಯ್ಯನವರ ಐತಿಹಾಸಿಕ ಬಜೆಟ್ ಮಂಡನೆ ಅಂತ್ಯ

ಕಾಂಗ್ರೆಸ್ ನೇತೃತ್ವ ವಹಿಸಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 07ನೇ, ಹಣಕಾಸು ಇಲಾಖೆ ಸಚಿವರಾಗಿ ಒಟ್ಟು 14ನೇಯ ಐತಿಹಾಸಿ ಸುದೀರ್ಘ ಬಜೆಟ್ ಅನ್ನು ಮಂಡಿಸಿದರು. ಪ್ರಸ್ತುತ ಸರ್ಕಾರದ ಮೊದಲ ಬಜೆಟ್ ಇದಾಗಿದ್ದು, ಸುದೀರ್ಘ 3 ಗಂಟೆಗಳ ಕಾಲ ನಿರಂತರ ಬಜೆಟ್ ಮಂಡನೆ ಅಂತ್ಯವಾಗಿದೆ.
Jul 07, 2023, 2:50 pm IST

ಎಟಿಎಂ ಸರ್ಕಾರದ ಕಲೆಕ್ಷನ್ ಬಜೆಟ್: ಸಾಲ-ತೆರಿಗೆ ಬರೆ: ಬಿಜೆಪಿ

ಕರ್ನಾಟಕ ರಾಜ್ಯ ಸರ್ಕಾರದ ಸಿಎಂ ಸಿದ್ದರಾಮಯ್ಯ ಮಂಡಿಸಿದ 14 ನೇ ಬಜೆಟ್ ಕುರಿತು ಕರ್ನಾಟಕ ಬಿಜೆಪಿ ಟೀಕಿಸಿದೆ. ಇದು ATMSarkara ದ ಕಲೆಕ್ಷನ್‌ ಬಜೆಟ್!. ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮಂಡಿಸಿರುವ 2023-24ರ ಸಾಲಿನ ಬಜೆಟ್‌ನಿಂದ ಸಾಲದ ಹೊರೆ - ತೆರಿಗೆಯ ಬರೆ ಇವೆರಡೇ ಸಿಕ್ಕಿದೆ. ಅವಾಸ್ತವಿಕ ಗ್ಯಾರಂಟಿಗಳ ಅನುಷ್ಠಾನದ ಹೆಸರಿನಲ್ಲಿ ಕರ್ನಾಟಕಕ್ಕೆ ಅನಿಯಮಿತ ಸಾಲದ ಹೊರೆ ಕಾಂಗ್ರೆಸ್ ಹೇರಿದೆ. ಗ್ಯಾರಂಟಿಗಳನ್ನು ನಂಬಿ ಮೋಸ ಹೋದ ಕನ್ನಡಿಗರಿಗೆ ತೆರಿಗೆಯ ಬರೆ ಹಾಕಲಾಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.
Jul 07, 2023, 2:44 pm IST

ಈ ವಲಯಕ್ಕೆ ತೆರಿಗೆ ಹೆಚ್ಚಳದ ಬರೆ?

ರಾಜ್ಯ ಅಬಕಾರಿ ಇಲಾಖೆ, ವಾಣಿಜ್ಯ ತೆರಿಗೆ, ಆಸ್ತಿ, ನೋಂದಣಿ ಮುದ್ರಾಂಕ ಇಲಾಖೆಗಳಿಂದ ತೆರಿಗೆ ಸಂಗ್ರಹ ಗುರಿ. ಈ ನಾಲ್ಕು ಇಲಾಖೆಗಳ ತೆರಿಗೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಈಗಾಗಲೇ ಈ ಇಲಾಖೆಗಳಿಂದ ಹೆಚ್ಚು ರಾಜಸ್ವ ಸಂಗ್ರಹದ ಗುರಿ ಬಗ್ಗೆ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳೇ ತಿಳಿಸಿದ್ದಾರೆ.
Jul 07, 2023, 2:36 pm IST

ಕೇಂದ್ರ ಗುರುತಿಸದ ಪಡಿತರಿಗೂ 'ಅನ್ನಭಾಗ್ಯ' ವಿಸ್ತರಣೆ

Karnataka Budget 2023
ರಾಜ್ಯದಲ್ಲಿರುವ 4.42 ಕೋಟಿ ಜನರಿಗೆ ಅನ್ನಭಾಗ್ಯ ಬಿಪಿಎಲ್ ಫಲಾನುಭವಿಗಳಿಗೆ ತಲಾ 10 ಕೇಜಿ ಅಕ್ಕಿ ವಿತರಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ 10,000 ಕೋಟಿ ರೂಪಾಯಿ ವೆಚ್ಚವಾಗಲಿದೆ. ಕೇಂದ್ರ ಸರ್ಕಾರ ಗುರುತಿಸದ ಪಡಿತರಿಗೂ ತಲಾ 10 ಕೇಜಿ ಅಕ್ಕಿ ನೀಡಲಾಗುವುದು. ಅದಕ್ಕಾಗಿ ಸರ್ಕಾರ 1,650 ಕೋಟಿ ರೂ. ಹಣ ಭರಿಸಲಿದೆ.
Jul 07, 2023, 2:29 pm IST

ಸುಧೀರ್ಘ ಬಜೆಟ್‌ನಲ್ಲಿ 5 ಗ್ಯಾರಂಟಿಗಳಿಗೆ ಸಿಕ್ಕಿದ್ದೆಷ್ಟು?

Karnataka Budget 2023
ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ ಐದು ಗ್ಯಾಂಟಿಗಳಿಗೆ 52 ಸಾವಿರ ಕೋಟಿ ಅನುದಾನ ಮೀಸಲು ಇಟ್ಟಿರುವ ರಾಜ್ಯ ಸರ್ಕಾರ. ನಿರಂತರ 2.30 ಗಂಟೆಗೆ ಸುಧೀರ್ಘ ಬಜೆಟ್ ಮಂಡಿಸುತ್ತಿರುವ ಕಾಂಗ್ರೆಸ್ ಸರ್ಕಾರ. ಮುಂದುವರಿದ ಸಿಎಂ ಸಿದ್ದರಾಮಯ್ಯನವರ ಬಜೆಟ್ ಮಂಡನೆ.
Jul 07, 2023, 2:21 pm IST

ವಿವಿಧ ಇಲಾಖೆಗಳಿಗೆ ಸಿಕ್ಕ ಅನುದಾನವೆಷ್ಟು?

Karnataka Budget 2023
ನಗರಾಭಿವೃದ್ಧಿ ಇಲಾಖೆಗೆ 19044 ಕೋಟಿ ರೂ. ಅನುದಾನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಗೆ ಕಂದಾಯ ಇಲಾಖೆಗೆ 16167 ಕೋಟಿ ರೂ. ಅನುದಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 14950 ಕೋಟಿ ರೂ, ಅನುದಾನ ನೀಡಲಾಗುವುದು. ಸಮಾಜ ಕಲ್ಯಾಣ ಇಲಾಖೆಗೆ 11,179 ಕೋಟಿ ರೂಪಾಯಿ ಅನುದಾನ ನಿಗದಿಗೊಳಿಸಲಾಗಿದೆ. ಇಂಧನ ಇಲಾಖೆಗೆ 22,773 ಕೋಟಿ ರೂಪಾಯಿ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
Jul 07, 2023, 2:15 pm IST

ಮನೆಬಾಗಿಲಿಗೆ ಔಷಧ: 8 ಜಿಲ್ಲೆಗಳಲ್ಲಿ ಜಾರಿ

ರಾಜ್ಯದಲ್ಲಿ ಕ್ಷಯ ರೋಗ ಪತ್ತೆಗೆ ಕೈಚಾಲಿತ-ಕ್ಷ-ಕಿರಣ (Hand Held X-Ray) ಉಪಕರಣ ಒದಗಿಸಲು 3 ಕೋಟಿ ರೂ. ಅನುದಾನ ಸರ್ಕಾರ ಒದಗಿಸಲಿದೆ. ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ, ಮನೆಬಾಗಿಲಿಗೆ ಔಷಧ ವಿತರಣೆ-ಪ್ರಾಯೋಗಿಕವಾಗಿ 8 ಜಿಲ್ಲೆಗಳಲ್ಲಿ ಜಾರಿ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.
Jul 07, 2023, 2:13 pm IST

ವಿದ್ಯಾರ್ಥಿ ವೇತನ ಮರು ಜಾರಿ: ಸರ್ಕಾರ

Karnataka Budget 2023
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು 24 ಲಕ್ಷ ವಿದ್ಯಾರ್ಥಿಗಳಿಗೆ 881 ಕೋಟಿ ರೂ.ಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನವನ್ನು ಕಾಂಗ್ರೆಸ್ ಅವಧಿಯಲ್ಲಿ ಮಂಜೂರು ಮಾಡಿತ್ತು. ಆದರೆ ಬಿಜೆಪಿ ಸರ್ಕಾರವು 2020-21, 2021-22 ಮತ್ತು 2022-23ನೇ ಸಾಲಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸದೇ ನಿರ್ಲಕ್ಷಿಸಿತು. ಇದೀಗ ಕಾರ್ಯಕ್ರಮ ಪುನರ್‌ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ.
Jul 07, 2023, 2:09 pm IST

ರಾಜ್ಯದ GSDP ಶೇ.17ಕ್ಕೆ ಹೆಚ್ಚಿಸಲು ಗುರಿ

ರಾಜ್ಯದ GSDP ಬೆಳವಣಿಗೆ ದರವನ್ನು ಶೇ.13 ರಿಂದ ಶೇ.17ಕ್ಕೆ ಹೆಚ್ಚಿಸುವ ಮೂಲಕ ರಾಜ್ಯವನ್ನು 1 ಟ್ರಿಲಿಯನ್ ಡಾಲರ್‌ ಎಕಾನಮಿಯಾಗಿ ಏರಿಸುವ ಗುರಿ ಹೊಂದಲಾಗಿದೆ. ಇದರೊಂದಿಗೆ ಕೃಷಿ, ಉದ್ಯಮ ಮತ್ತು ಸೇವಾ ವಲಯಗಳ ಸಾಮರ್ಥ್ಯ ವೃದ್ಧಿ, ಮೂಲಸೌಕರ್ಯ ಬೆಂಬಲ, ಅಧಿಕಾರ ಪ್ರತ್ಯಾಯೋಜನೆ, ಆಡಳಿತ ವಿಕೇಂದ್ರೀಕರಣ ಮತ್ತಿತರ ಉಪಕ್ರಮ ಜಾರಿಗೆ ತರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Jul 07, 2023, 2:04 pm IST

ಐದನೇ ಗ್ಯಾರಂಟಿ ಯುವನಿಧಿ ಜಾರಿ: ಸರ್ಕಾರ

Karnataka Budget 2023
ಶಿಕ್ಷಣ ಪಡೆದು ಉದ್ಯೋಗ ಹಿಡಿಯುವ, ಸಾಧನೆ ಕನಸು ಕಾಣುತ್ತಿರುವ ಯುವಜನರಿಗೆ ಉದ್ಯೋಗ ಪಡೆಯಲು ಸಾಧ್ಯವಾಗದ ಸಂದರ್ಭದಲ್ಲಿ ಅವರಿಗೆ ಬೆನ್ನೆಲುಬಾಗಿ ನಿಲ್ಲಲು 5ನೇ ಗ್ಯಾರಂಟಿ ಆದ ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ನಿರುದ್ಯೋಗ ಭತ್ಯೆ ನೀಡುವ ʻಯುವನಿಧಿʼ ಯೋಜನೆ ಜಾರಿ ಮಾಡಲಾಗುವುದು. ಯುವಜನ ಅಡ್ಡದಾರಿ ಹಿಡಿಯದಂತೆ, ಅತ್ಮಸ್ತೈರ್ಯ ತುಂಬಲು ಈ ಆರ್ಥಿಕ ನೆರವನ್ನು ನೀಡುತ್ತಿದ್ದೇವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
Jul 07, 2023, 2:00 pm IST

Karnataka Budget 2023:ಹಸಿವು ಮುಕ್ತಕ್ಕೆ ಸರ್ಕಾರ ಪಣ

ಅನ್ನಭಾಗ್ಯ ಯೋಜನೆಯ ಮೂಲಕ ಬಡತನ ರೇಖೆಗಿಂತ ಕೆಳಗಿರುವ 4.42 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಇದಕ್ಕೆ ವರ್ಷಕ್ಕೆ ಸುಮಾರು 10,000 ಕೋಟಿ ರೂ.ಗಳಷ್ಟು ವೆಚ್ಚ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Jul 07, 2023, 1:53 pm IST

ಸಹಕಾರ ಮತ್ತು ರೇಷ್ಮೆ ವಲಯಕ್ಕೆ ಸಿಕ್ಕಿದ್ದೇನು?

ರಾಜ್ಯದ 30 ಲಕ್ಷಕ್ಕೂ ಹೆಚ್ಚು ರೈತರಿಗೆ 25,000 ಕೋಟಿ ರೂ. ಸಾಲ ವಿತರಣೆ ಗುರಿ ಹೊಂದಿರುವ ಕಾಂಗ್ರೆಸ್ ಸರ್ಕಾರ, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಕ್ರಮ ಕೈಗೊಂಡಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ರೈತರಿಗೆ ಸರಕು ಸಾಗಾಣಿಕೆಗೆ ಪಿಕ್‌ಅಪ್‌ ವ್ಯಾನ್‌ ಖರೀದಿಗೆ ಶೇ.4 ರ ಬಡ್ಡಿ ದರದಲ್ಲಿ 7 ಲಕ್ಷ ರೂ. ವರೆಗಿನ ಸಾಲ ಸೌಲಭ್ಯ ಒದಗಿಸಲಾಗುವುದು. ಇನ್ನು ರಾಜ್ಯದ ಆಯ್ದ 50 ತರಕಾರಿ ಮಾರುಕಟ್ಟೆಗಳಲ್ಲಿ ಮಿನಿ ಶೀತಲಗೃಹಗಳ ಸ್ಥಾಪನೆ ಮಾಡಲಾಗುವುದು.
Jul 07, 2023, 1:51 pm IST

ಸರ್ಕಾರದಿಂದ ಶಿಕ್ಷಣಕ್ಕೆ ಆದ್ಯತೆ: ಟ್ವೀಟ್

ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ನಿರ್ವಹಣಾ ವೆಚ್ಚ ಗರಿಷ್ಠ 45,000 ರೂ.ಗಳ ವರೆಗೆ ಹೆಚ್ಚಿಸಲಾಗಿದೆ. 153 ಕೋಟಿ ರೂ. ಅನುದಾನ. ಶಾಲೆ, ಕಾಲೇಜುಗಳ ಕೊಠಡಿಗಳ ನಿರ್ಮಾಣ, ದುರಸ್ತಿಗೆ 650 ಕೋಟಿ ರೂ. ಹಾಗೂ ಶೌಚಾಲಯ ಘಟಕ ನಿರ್ಮಾಣಕ್ಕೆ 200 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ.
Jul 07, 2023, 1:48 pm IST

12 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಅಭಿವೃದ್ಧಿ

ರಾಜ್ಯದಲ್ಲಿ 50 ವರ್ಷಗಳನ್ನು ಪೂರೈಸಿದ 12 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪಾರಂಪರಿಕ ಸಂಸ್ಥೆಗಳೆಂದು ಘೋಷಿಸಿ ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗುವುದು. ಈ ಸಂಬಂಧ ನಿರ್ಮಾಣ ಕಾರ್ಯ ಹಾಗೂ ಹೊಸ ಉಪಕರಣಗಳು ಮತ್ತು ಯಂತ್ರೋಪಕರಣಗಳ ಖರೀದಿಗಾಗಿ 100 ಕೋಟಿ ರೂ.ಗಳನ್ನು ವಿನಿಯೋಗಿಸಲು ಉದ್ದೇಶಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
Jul 07, 2023, 1:42 pm IST

ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಫಂಡ್

Karnataka Budget 2023 LIVE
ISEC ಸಂಸ್ಥೆಯಲ್ಲಿ Ph.D. ಮಾಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಡಾ. ಬಿ.ಆರ್. ಅಂಬೇಡ್ಕರ್‌ ಫೆಲೋಶಿಪ್‌ ನೀಡಲು ಎರಡು ಕೋಟಿ ರೂ. Corpus Fund ನೀಡಲಾಗುವುದು. 'ಸ್ವಾವಲಂಬಿ ಸಾರಥಿ' ಯೋಜನೆಯಡಿ ಎಸ್‌ಸಿ, ಎಸ್‌ಟಿ ನಿರುದ್ಯೋಗಿ ಯುವಜನರು ನಾಲ್ಕು ಚಕ್ರಗಳ ವಾಹನ ಖರೀದಿಗೆ ಪಡೆಯುವ ಸಾಲದ ಶೇ.75 ರಷ್ಟು, ಗರಿಷ್ಠ ನಾಲ್ಕು ಲಕ್ಷ ರೂ. ಸಹಾಯಧನ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಸಿಎಂ ತಿಳಿಸಿದರು.
Jul 07, 2023, 1:33 pm IST

ಬುಡಕಟ್ಟು ಪಂಗಡಗಳ ಪೌಷ್ಠಿಕತೆಗೆ ಒತ್ತು

Karnataka Budget 2023 LIVE
ರಾಜ್ಯದ 8 ಜಿಲ್ಲೆಗಳಲ್ಲಿ ವಾಸಿಸುತ್ತಿರುವ 11 ಬುಡಕಟ್ಟು ಪಂಗಡಗಳಾದ ಕೊರಗ, ಜೇನುಕುರುಬ, ಸೋಲಿಗ, ಎರವ, ಕಾಡುಕುರುಬ, ಮಲೆಕುಡಿಯ, ಸಿದ್ಧಿ, ಹಸಲರು, ಗೌಡಲು, ಗೊಂಡ ಮತ್ತು ಬೆಟ್ಟಕುರುಬ ಜನಾಂಗದ ಕುಟುಂಬಗಳಿಗೆ ಪೌಷ್ಟಿಕ ಆಹಾರ ಯೋಜನೆಯನ್ನು ವಾರ್ಷಿಕ ಆರು ತಿಂಗಳುಗಳಿಗೆ ನೀಡಲಾಗುತ್ತಿದೆ. ಇದನ್ನು 12 ತಿಂಗಳಿಗೆ ವಿಸ್ತರಿಸಲಾಗುವುದು. ಇದಕ್ಕೆ ವಾರ್ಷಿಕವಾಗಿ 50 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಒದಗಿಸಲಿದೆ.
Jul 07, 2023, 1:30 pm IST

ಸೆಸ್ ಸಂಗ್ರಹ: ಕೇಂದ್ರದ ನಡೆ ವಿರುದ್ಧ ರಾಜ್ಯ ಖಂಡನೆ

Karnataka Budget 2023
ಕೇಂದ್ರ ಸರ್ಕಾರ ವಿಧಿಸುವ ಸೆಸ್‌ (Cess) ಮತ್ತು ಸರ್‌ಚಾರ್ಜ್‌ (Surcharge) ರಾಜ್ಯಗಳಿಗೆ ಹಂಚಿಕೆ ಮಾಡದೆ ತನ್ನ ಬಳಿಯೇ ಉಳಿಸಿಕೊಳ್ಳುತ್ತದೆ. ತೆರಿಗೆಗಳ ಮೇಲೆ ವಿಧಿಸುವ ಸೆಸ್‌ ಮತ್ತು ಸರ್‌ಚಾರ್ಜ್‌ ಹೆಚ್ಚುತ್ತಿರುವುದರಿಂದ ರಾಜ್ಯಗಳಿಗೆ ಸಂದಾಯವಾಗುವ ತೆರಿಗೆ ಪಾಲು ಕಡಿಮೆಯಾಗಿರುತ್ತದೆ. ಕೇಂದ್ರದ ನಿರ್ಧಾರದಿಂದ ನಮ್ಮ ರಾಜ್ಯಕ್ಕೆ ಸುಮಾರು 7,780 ಕೋಟಿ ರೂ. ನಷ್ಟವಾಗಿರುತ್ತದೆ. ಹೀಗಾಗಿ ಕೇಂದ್ರದ ಈ ನಡೆಯನ್ನು ನಾವು ಬಲವಾಗಿ ವಿರೋಧಿಸುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.
Jul 07, 2023, 1:21 pm IST

ಅಪ್ಪು ಸ್ಮರಣಾರ್ಥ ಆಸ್ಪತ್ರೆಗಳಲ್ಲಿ AED ವ್ಯವಸ್ಥೆ

Karnataka Budget 2023
ಹಠಾತ್ ಹೃದಯಾಘಾತ ಸಾವು ತಡೆಯಲು ಸರ್ಕಾರ ಕ್ರಮಕೈಗೊಳ್ಳಲಿದೆ. ದಿ.ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ ಕುಮಾರ್ ಸ್ಮರಣಾರ್ಥ ಜಿಲ್ಲಾ-ತಾಲೂಕು ಆಸ್ಪತ್ರೆಗಳಲ್ಲಿ 06 ಕೊಟಿ ವೆಚ್ಚದಲ್ಲಿ AED ಚಿಕಿತ್ಸಾ ಯಂತ್ರ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Jul 07, 2023, 1:12 pm IST

ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕ್ರಮ

ಕೃಷ್ಣಾ ನ್ಯಾಯಾಧಿಕರಣ-2ರ ತೀರ್ಪಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಹಂಚಿಕೆಯಾಗಿರುವ 130 ಟಿ.ಎಂ.ಸಿ ನೀರಿನ ಬಳಕೆಗಾಗಿ ಯೋಜನಾ ಕಾಮಗಾರಿಗಳ ಜೊತೆಗೆ ಭೂಸ್ವಾಧೀನತೆ ಹಾಗೂ ಪುನರ್‌ ವಸತಿ ಮತ್ತು ಪುನರ್‌ ನಿರ್ಮಾಣಕ್ಕೆ ಆದ್ಯತೆ ನೀಡಿ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ.
Jul 07, 2023, 1:09 pm IST

ರೈತರ ಆದಾಯ ಹೆಚ್ಚಳಕ್ಕೆ ಸರ್ಕಾರ ಕ್ರಮ

Karnataka Budget 2023
ರೈತರ ಆದಾಯವನ್ನು ಹೆಚ್ಚಿಸುವುದರಲ್ಲಿ ತೋಟಗಾರಿಕಾ ಬೆಳೆಗಳು ಪ್ರಮುಖ ಪಾತ್ರ ವಹಿಸುತ್ತವೆ. ತೋಟಗಾರಿಕಾ ವಲಯದಲ್ಲಿನ ರಾಜ್ಯದ ಸಾಮರ್ಥ್ಯವನ್ನು ಹೆಚ್ಚಿಸಲು ತೆಂಗು, ಅಡಿಕೆ, ದ್ರಾಕ್ಷಿ, ದಾಳಿಂಬೆ, ಮಾವು ಮತ್ತಿತರ ಹಣ್ಣು, ತರಕಾರಿ, ಹೂವುಗಳು ಸೇರಿದಂತೆ ತೋಟಗಾರಿಕಾ ಬೆಳೆಗಳ ಉತ್ಪಾದನೆ, ಸಂಸ್ಕರಣೆ, ಬ್ರಾಂಡಿಂಗ್ ಮತ್ತು ರಫ್ತಿಗೆ ಹೆಚ್ಚಿನ ಒತ್ತು ನೀಡಲಾಗುವುದು. 2023-24ನೇ ಸಾಲಿನಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
Jul 07, 2023, 1:01 pm IST

ನೀರಿನ ಸಮಸ್ಯೆ ಪರಿಹಾರಕ್ಕೆ ಕೆರೆ ತುಂಬಿಸುವ ಯೋಜನೆ

Karnataka Budget 2023
ರಾಜ್ಯದಲ್ಲಿ ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಿದೆ. 172 ಯೋಜನೆಗಳ ಮೂಲಕ 19 ಕೆರೆಗಳಿಗೆ ನೀರು ತುಂಬಿಸಲು 770 ಕೋಟಿ ಹಣ ನೀಡಲಾಗುವುದು. ಉತ್ತರ ಕರ್ನಾಟಕದ ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ, ಬೀದರ್, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ, ಕಲಬುರಗಿ ಹಾಗೂ ಯಾದಗಿರಿ ಸೇರಿ ಒಟ್ಟು 823,99 ಕೆರೆಗಳನ್ನು ತುಂಬಿಸಲು ಸರ್ಕಾರ ನಿರ್ಧರಿಸಿದೆ.
Jul 07, 2023, 12:54 pm IST

1,62,000 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ:ಸಿಎಂ

ರಾಜ್ಯದ ಪ್ರಮುಖ ಮೂರು ಇಲಾಖೆಗಳಿಂದ 1,62,000 ಕೋಟಿ ರೂಪಾಯಿ ರಾಜಸ್ವ ಸಂಗ್ರಹ ಮಾಡುವ ಗುರಿ ಸರ್ಕಾರ ಹೊಂದಿದೆ. ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 1-10ನೇ ತರಗತಿ ಮಕ್ಕಳಿಗೆ ಮೊಟ್ಟೆ ವಿತರಣೆ. ಮಕ್ಕಳಿಗೆ ಬಾಳೆ ಹಣ್ಣು, ಶೇಂಗಾ ಚಕ್ಕಿ ವಿತರಣೆ ಮಾಡಲಾಗುವುದು. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೆಂಟರ್ ಸ್ಥಾಪಿಸಲು ಸರ್ಕಾರ ಕ್ರಮವಹಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Jul 07, 2023, 12:46 pm IST

ಶಾಲಾ ಕಾಲೇಜುಗಳಿಗೆ ಹೊಸ ಶೌಚಾಲಯ

Karnataka Budget 2023
ಕರ್ನಾಟಕದ ಆಹಾರ ಇಲಾಖೆಗೆ 10460 ಕೋಟಿ ರೂ. ಅನುದಾನ ಒದಗಿಸಲಿದ್ದೇವೆ. ಶಾಲಾ ಕಾಲೇಜುಗಳಲ್ಲಿ ಹೊಸ ಶೌಚಾಲಯ ನಿರ್ಮಿಸಲು ಚಿಂತನೆ ಇದ್ದು, ಅದಕ್ಕಾಗಿ 200 ಕೋಟಿ ರೂಪಾಯಿ ಮೀಸಲಿಡಲಾಗುವುದು.
Jul 07, 2023, 12:45 pm IST

ಇಂದಿರಾ ಕ್ಯಾಂಟಿನ್‌ಗೆ ವಿಶೇಷ ಆದ್ಯತೆ

Karnataka Budget 2023
ಹೊಸ ಇಂದಿರಾ ಕ್ಯಾಂಟಿನ್‌ಗಳಿಗೆ 100 ರೂ. ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು. 2ನೇ ಹಂತದಲ್ಲಿ ಹೊಸ ಬೆಂಗಳೂರು ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+