Get Updates
Get notified of breaking news, exclusive insights, and must-see stories!

ಕರ್ನಾಟಕ ಬಜೆಟ್‌ 2022: ಯಾವ ಇಲಾಖೆಗೆ ಎಷ್ಟು ಅನುದಾನ, ಇಲ್ಲಿದೆ ವಿವರ

ಬೆಂಗಳೂರು, ಮಾರ್ಚ್ 04: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022-2023ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಎಲ್ಲಾ ಇಲಾಖೆಗಳಿಗೆ ಅನುದಾನವನ್ನು ಘೋಷಣೆ ಮಾಡಿದ್ದಾರೆ. ಬಜೆಟ್ ಗಾತ್ರ ಕಳೆದ ಬಾರಿಗಿಂತ ಶೇ. 7.7 ಹೆಚ್ಚಳವಾಗಿದೆ.

ಈ ಬಾರಿ 2,53,165 ಕೋಟಿ ರೂ. ಬಜೆಟ್​ ಮಂಡನೆ ಆಗಿದ್ದು, ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರವನ್ನು ಹೊಂದಿದೆ. ಸಮಗ್ರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ದುರ್ಬಲ ವರ್ಗದ ರಕ್ಷಣೆ ಮತ್ತು ಏಳಿಗೆ - ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಸಬಲೀಕರಣ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಲಯವಾರು ವಿಂಗಡಣೆ ಮಾಡಿ ಬಜೆಟ್‌ ಮಂಡನೆ ಮಾಡಿದ್ದಾರೆ. ಈ ಬಜೆಟ್‌ನಲ್ಲಿ ಯಾವ ವಲಯಕ್ಕೆ ಎಷ್ಟು ಅನುದಾನ ನೀಡಿದ್ದಾರೆ ಎಂಬ ಬಗ್ಗೆ ಇಲ್ಲಿ ವಿವರ ಇದೆ. ಮುಂದೆ ಓದಿ....

Karnataka Budget 2022: Sector-Wise Funds Allocations Highlights and Key Takeaways

ಯಾವ ಇಲಾಖೆಗೆ ಎಷ್ಟು ಮೊತ್ತ ಹಂಚಿಕೆ?

* ಶಿಕ್ಷಣ ಇಲಾಖೆ - 31,980 ಕೋಟಿ ರೂಪಾಯಿ ಅನುದಾನ
* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ - 17,325 ಕೋಟಿ ರೂಪಾಯಿ
* ಕಂದಾಯ ಇಲಾಖೆ - 16,388 ಕೋಟಿ ರೂಪಾಯಿ ಅನುದಾನ
* ಇಂಧನ ಇಲಾಖೆ - 12,655 ಕೋಟಿ ರೂಪಾಯಿ ಅನುದಾನ
* ವಸತಿ ಇಲಾಖೆ - 3,594 ಕೋಟಿ ರೂಪಾಯಿ ಅನುದಾನ
* ಕೃಷಿ ಮತ್ತು ತೋಟಗಾರಿಕೆ ಇಲಾಖೆ - 8,457 ಕೋಟಿ ರೂ ಅನುದಾನ,
* ಲೋಕೋಪಯೋಗಿ ಇಲಾಖೆ - 10,447 ಕೋಟಿ ರೂ ಅನುದಾನ
* ಜಲ ಸಂಪನ್ಮೂಲ ಇಲಾಖೆ - 20,601 ಕೋಟಿ ರೂ ಅನುದಾನ
* ನಗರಾಭಿವೃದ್ಧಿ ಇಲಾಖೆ - 16,076 ಕೋಟಿ ರೂಪಾಯಿ ಅನುದಾನ
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ - 13,982 ಕೋಟಿ ರೂಪಾಯಿ ಅನುದಾನ
* ಆಹಾರ ಇಲಾಖೆ - 2,288 ಕೋಟಿ ರೂಪಾಯಿ ಅನುದಾನ
* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ - 4,713 ಕೋಟಿ ಅನುದಾನ
* ಸಮಾಜ ಕಲ್ಯಾಣ ಇಲಾಖೆ - 9,389 ಕೋಟಿ ರೂ ಅನುದಾನ
* ಒಳಾಡಳಿತ ಮತ್ತು ಸಾರಿಗೆ ಇಲಾಖೆ - 11,222 ಕೋಟಿ ರೂ ಅನುದಾನ

ಇನ್ನುಳಿದಂತೆ ರಾಜ್ಯಗಳ ಕೆರೆಗಳ ಅಭಿವೃದ್ದಿಗೆ 500 ಕೋಟಿ ರೂ, ತಾಲೂಕುಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ರೂಪಾಯಿ ಹಾಗೂ ರಾಜಧಾನಿ ಬೆಂಗಳೂರು ಅಭಿವೃದ್ಧಿಗೆ 8409 ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+