ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್‌ನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಕೊಡುಗೆಗಳು

By Gururaj
|
Google Oneindia Kannada News

ಬೆಂಗಳೂರು, ಜುಲೈ 05 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಚೊಚ್ಚಲ ಬಜೆಟ್ ಮಂಡನೆ ಮಾಡಿದರು. ತಮ್ಮ ಬಜೆಟ್‌ನಲ್ಲಿ ಕುಮಾರಸ್ವಾಮಿ ಅವರು ವಾಣಿಜ್ಯ ಮತ್ತು ಕೈಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಗುರುವಾರ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 2018-19ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಚಿತ್ರದುರ್ಗ ಜಿಲ್ಲೆಯಲ್ಲಿ ಗೃಹೋಪಯೋಗಿ LED Light ಗಳನ್ನು ಉತ್ಪಾದನೆ ಮಾಡುವ ಉದ್ಯಮ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಹೇಳಿದರು.

ಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlightsಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlights

Karnataka Budget 2018 : What for Commerce and Industry sector

ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?

* ಕರ್ನಾಟಕದಲ್ಲಿ ಕೈಗಾರಿಕಾ ವಲಯದ ಉತ್ಪಾದನಾ ಸಾಮರ್ಥ್ಯ ವೃದ್ಧಿಗೆ Compete with China ಚೀನಾ ದೇಶದೊಂದಿಗೆ ಸಕಾರಾತ್ಮಕ ಸ್ಪರ್ಧೆ ಯೋಜನೆ ಪ್ರಾರಂಭ.

* ಕಲಬುರಗಿಯನ್ನು ಸೋಲಾರ್ ಜಿಲ್ಲೆಯನ್ನಾಗಿ, ಚಿತ್ರದುರ್ಗ ಜಿಲ್ಲೆಯಲ್ಲಿ ಗೃಹೋಪಯೋಗಿ LED Lightಗಳನ್ನು ಉತ್ಪಾದನೆ ಮಾಡುವ ಉದ್ಯಮ ಅಭಿವೃದ್ಧಿ

* ಹಾಸನ ಜಿಲ್ಲೆಯನ್ನು ಸ್ನಾನಗೃಹ ನೆಲಹಾಸು ಮತ್ತು ಸ್ಯಾನಿಟರಿ ಉಪಕರಣಗಳ ಉತ್ಪಾದಕ ಜಿಲ್ಲೆಯಾಗಿ ಅಭಿವೃದ್ಧಿ. ಕೊಪ್ಪಳ ಜಿಲ್ಲೆಯಲ್ಲಿ ಆಟಿಕೆ ಸಾಮಾನುಗಳ ಉತ್ಪಾದನಾ ಕ್ಲಸ್ಟರ್, ಮೈಸೂರಿನಲ್ಲಿ ಐಸಿ ಚಿಪ್ ತಯಾರಿಕಾ ವಲಯ, ಬಳ್ಳಾರಿಯಲ್ಲಿ ವಸ್ತ್ರ ಉದ್ಯಮ, ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಫೋನ್ ಬಿಡಿಘಟಕಗಳ ಉದ್ಯಮ ಸ್ಥಾಪನೆ

* ತುಮಕೂರಿನಲ್ಲಿ ಸ್ಪೋರ್ಟ್ಸ್ ಮತ್ತು ಫಿಟ್‌ನೆಸ್ ವಸ್ತುಗಳ ಉತ್ಪಾದನೆಗೆ ಕ್ರಮ. ಬೀದರ್ ಜಿಲ್ಲೆಯಲ್ಲಿ ಕೃಷಿ ಉಪಕರಣ ಯಂತ್ರ ತಯಾರಿಕೆಗೆ ಒತ್ತು.

ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ?ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ?

* ಈ ಕಾರ್ಯಕ್ರಮದಿಂದ ಜಿಲ್ಲೆಗೆ ತಲಾ ಒಂದು ಲಕ್ಷದಂತೆ ಒಟ್ಟು 8 ಲಕ್ಷ ಉದ್ಯೋಗ ಸೃಷ್ಟಿಯ ನಿರೀಕ್ಷೆ.

* ಮುಂದಿನ ವರ್ಷಗಳಲ್ಲಿ ಸರ್ಕಾರದಿಂದ ಈ ಯೋಜನೆಗೆ 14,000 ಕೋಟಿ ರೂ. ಬಂಡವಾಳ ಹೂಡಿಕೆ.

* ಕೈಗಾರಿಕಾ ಸಂಸ್ಥೆಗಳು ಹಾಗೂ ವಿವಿಧ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ಕೇಂದ್ರೀಕೃತ ತಪಾಸಣಾ ವ್ಯವಸ್ಥೆ ರೂಪಿಸಲು ಕ್ರಮ.

* KIADB ಮತ್ತು KSIIDCಗಳು ಕೈಗಾರಿಕಾ ಪ್ರದೇಶ / ವಸಾಹತು ಅಭಿವೃದ್ಧಿಪಡಿಸಿದ ಕೂಡಲೇ ಅಂತಿಮ ಹಂಚಿಕೆ ದರ ನಿಗದಿಪಡಿಸಲು ಕ್ರಮ.

* ತೆಂಗಿನ ನಾರಿನ ವಲಯಕ್ಕೆ ಉತ್ತೇಜನ ನೀಡಲು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರತಿ ಕುಶಲಕರ್ಮಿಗೆ ವಾರ್ಷಿಕ 10,000/- ರೂ. ಪ್ರೋತ್ಸಾಹ ವೇತನ.

* ಸೂಕ್ಷ್ಮ ಮತ್ತು ಸಣ್ಣ ತೆಂಗಿನ ನಾರಿನ ಕೈಗಾರಿಕೆಗಳು ಉತ್ಪಾದಿಸುವ ಉತ್ಪನ್ನಗಳಿಗೆ ಶೇ.10ರ ದರದಲ್ಲಿ ಮಾರುಕಟ್ಟೆ ಅಭಿವೃದ್ಧಿ ಸಹಾಯಧನ.

* ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆಗಳ ಉದ್ದೇಶಕ್ಕೆ ಕೃಷಿ ಭೂಮಿ ಖರೀದಿಸುವ ಪ್ರಕ್ರಿಯೆ ಸರಳಗೊಳಿಸಲು ಕ್ರಮ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಜನೆಗೆ ಅವಕಾಶ.

* ರಾಜ್ಯದಲ್ಲಿನ ಎಲ್ಲಾ ಕಲ್ಲುಗಣಿ ಗುತ್ತಿಗೆದಾರರಿಗೆ ಗಣಿಗಾರಿಕೆ ಹಾಗೂ ಗಣಿ ಸುರಕ್ಷತ ವಿಧಾನಗಳ ತರಬೇತಿ ಕೋರ್ಸ್ ಆಯೋಜನೆಗೆ ಕ್ರಮ. ಹಾಲಿ ಚಾಲ್ತಿಯಲ್ಲಿರುವ ಕಲ್ಲು ಗಣಿಗುತ್ತಿಗೆದಾರರಿಗೆ ಹಾಗೂ ಹೊಸದಾಗಿ ಪರವಾನಗಿ ಪಡೆಯುವ ಗುತ್ತಿಗೆದಾರರಿಗೆ ಈ ತರಬೇತಿ ಕಡ್ಡಾಯ.

* ಸಾರ್ವಜನಿಕರಿಗೆ Appನಲ್ಲಿ ಕಲ್ಲು ಗಣಿಗುತ್ತಿಗೆ ಮತ್ತು ಕ್ರಷರ್ ಗಳ ಮಾಹಿತಿ ಒದಗಿಸಲು ಕ್ರಮ.; ಸಗಟು ದರದಲ್ಲಿ ಕಟ್ಟಡ ಕಲ್ಲು, ಜಲ್ಲಿ ಇತ್ಯಾದಿ ಪಡೆಯಲು ಅನುಕೂಲ.

* ಗುಣಮಟ್ಟದ ಮರಳು ಮತ್ತು ಜಲ್ಲಿ ಸ್ಪರ್ಧಾತ್ಮಕ ದರದಲ್ಲಿ ಸುಲಭವಾಗಿ ದೊರಕುವಂತೆ ಮಾಡಲು ದಾಸ್ತಾನು ಕೇಂದ್ರ ಪ್ರಾರಂಭ.

* ಸಿದ್ಧ ಉಡುಪು ವಲಯಕ್ಕೆ ಆದ್ಯತೆ ನೀಡುವ ಹೊಸ ಜವಳಿ ನೀತಿ ಘೋಷಣೆ.

* ನೇಕಾರರಿಗೆ ಹೊಸ ವಿನ್ಯಾಸ ತಂತ್ರಜ್ಞಾನ ವರ್ಗಾವಣೆಗೆ ಅತ್ಯಾಧುನಿಕ ಕೈಮಗ್ಗ ಕೇಂದ್ರ ಸ್ಥಾಪನೆ.

* ಶತಮಾನದ ಹಿನ್ನೆಲೆಯುಳ್ಳ, ಹಾಸನದ ಕರ್ನಾಟಕ ಇಂಪ್ಲಿಮೆಂಟ್ ಮ್ಯಾನ್ಯುಫಾಕ್ಚರಿಂಗ್ ಕಂಪೆನಿಯ ಪುನರುಜ್ಜೀವನ ಮತ್ತು ಆಧುನೀಕರಣಕ್ಕಾಗಿ 10 ಕೋಟಿ ರೂ.

* ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆಯಲ್ಲಿ ಪರ್ಯಾಯ ಪ್ಯಾಕಿಂಗ್ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ ಸ್ಥಾಪಿಸಲು 5 ಕೋಟಿ ರೂ. ಅನುದಾನ.

English summary
Karnataka Chief minister and Finance minister H.D.Kumaraswamy presented Karnataka budget 2018-19 on July 5, 2018. What for Commerce and Industry sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X