ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ : ಸಿದ್ದು ಸರ್ಕಾರಕ್ಕೊಂದಷ್ಟು ಮೆಚ್ಚುಗೆ, ಮತ್ತಷ್ಟು ತರಾಟೆ!

|
Google Oneindia Kannada News

Recommended Video

ಕರ್ನಾಟಕ ಬಜೆಟ್ 2018 : ಸಿದ್ದರಾಮಯ್ಯನವರ ಬಗ್ಗೆ ಟ್ವಿಟ್ಟರ್ ಪ್ರತಿಕ್ರಿಯೆ | Oneindia Kannada

ಬೆಂಗಳೂರು, ಫೆಬ್ರವರಿ 16: ಇನ್ನು ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ಬಜೆಟ್ ಬಗ್ಗೆ ಜನರು ಹೆಚ್ಚೇನೂ ತಲೆಕೆಡಿಸಿಕೊಳ್ಳುತ್ತಿಲ್ಲ.

ಬಜೆಟ್ ಯೋಜನೆಗಳು ಅನುಷ್ಠಾನಕ್ಕೆ ಬರುವ ಹೊತ್ತಿಗೆ ರಾಜ್ಯದಲ್ಲಿ ಚುನಾವಣೆ ನಡೆಯುವುದರಿಂದ ಇದು ಪೂರ್ಣಪ್ರಮಾಣದ ಬಜೆಟ್ ಅಲ್ಲ.

Live : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳುLive : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 13 ನೇ ಬಜೆಟ್ ಮಡಿಸುತ್ತಿರುವುದು ವಿಶೇಷ. ಬಜೆಟ್ ನಲ್ಲಿ ಘೋಷಿಸಲಾದ ಪ್ರಮುಖ ಯೋಜನೆಗಳು ಮುಂಬರುವ ಚುನಾವಣೆಯಲ್ಲೂ ಮಹತ್ವದ ಪಾತ್ರ ವಹಿಸಬಹುದ್ದಾರಿಂದ ಈ ಬಜೆಟ್ ಕುರಿತು ಟ್ವಿಟ್ಟರ್ ನಲ್ಲಿ ಚರ್ಚೆ ಎದ್ದಿದೆ.

Array

ಕಾಂಗ್ರೆಸ್ ಸರ್ಕಾರ ಉದ್ಯಮಿಗಳ ಪರವಲ್ಲ, ರೈತರ ಪರ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಪರವೇ ಹೊರತು, ಉದ್ಯಮಿಗಳ ಪರವಲ್ಲ ಎಂಬುದು 2018ರ ಕರ್ನಾಟಕ ಬಜೆಟ್ ನಿಂದ ಸಾಬೀತಾಗಿದೆ ಎಂದಿದ್ದಾರೆ ವಿವೇಕ್.

ಬಜೆಟ್ 2018: ಅಬಕಾರಿ ಸುಂಕ ಏರಿಕೆ, ತುಟಿ ಸುಡಲಿದೆ ಸಿಗರೇಟುಬಜೆಟ್ 2018: ಅಬಕಾರಿ ಸುಂಕ ಏರಿಕೆ, ತುಟಿ ಸುಡಲಿದೆ ಸಿಗರೇಟು

Array

ಈ ರಾಜ್ಯಕ್ಕೆ ಸಿದ್ದರಾಮಯ್ಯ ಏನು ಕೊಟ್ಟಿದ್ದಾರೆ?

11-12 ಬಾರಿ ಬಜೆಟ್ ಓದಿದರೂ ಸಿದ್ದರಾಮಯ್ಯ ಅವರಿಗೆ ಈ ರಾಜ್ಯಕ್ಕೆ ಸಹಾಯ ಮಾಡಲು ಸಾಧ್ಯವಾಗಿಲ್ಲ. ಅವರು ಏನು ಬದಲಾವಣೆ ತರಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ ರವಿ ಎಂಬುವವರು.

ಅಂತರ್ಜಾತಿ ವಿವಾಹ: ಎಸ್ ಸಿ ಯವಕರಿಗೆ 3 ಲಕ್ಷ, ಯುವತಿಯರಿಗೆ 5 ಲಕ್ಷಅಂತರ್ಜಾತಿ ವಿವಾಹ: ಎಸ್ ಸಿ ಯವಕರಿಗೆ 3 ಲಕ್ಷ, ಯುವತಿಯರಿಗೆ 5 ಲಕ್ಷ

Array

ಸಿದ್ದರಾಮಯ್ಯ ವಿದ್ಯಾರ್ಥಿಗಳ ಪರವಿದ್ದಾರೆ

ವಿದ್ಯಾರ್ಥಿಗಳಿಗೆ ಉಚಿತ ಪಾಸ್ ವಿತರಿಸು ನಿರ್ಧಾರ ಕೈಗೊಂಡಿದ್ದಕ್ಕೆ ಧನ್ಯವಾದಗಳು ಸಿದ್ದರಾಮಯ್ಯನವರೇ. ನೀವು ಕರ್ನಾಟಕದ ಯುವಕರು ಮತ್ತು ವಿದ್ಯಾರ್ಥಿಗಳ ಪರವಾಗಿ ನಿಂತಿದ್ದೀರಾ ಎಂದು ಕೃತಜ್ಞತೆ ಅರ್ಪಿಸಿದ್ದಾರೆ ದೀಪಕ್ ಚಾವಣ್.

ಪತ್ರಕರ್ತರಿಗೆ ಬಜೆಟ್ ನಲ್ಲಿ 'ಮಾಧ್ಯಮ ಸಂಜೀವಿನಿ' ಜೀವ ವಿಮೆ ಘೋಷಣೆಪತ್ರಕರ್ತರಿಗೆ ಬಜೆಟ್ ನಲ್ಲಿ 'ಮಾಧ್ಯಮ ಸಂಜೀವಿನಿ' ಜೀವ ವಿಮೆ ಘೋಷಣೆ

Array

ಕನ್ನಡಿಗರಿಗೇನು ಸಿಕ್ಕಿದೆ?

ಬೆಂಗಳೂರು ಈಗಾಗಲೇ ಕನ್ನಡೇತರರಿಗೆ ಹಂಚಿಹೋಗಿದೆ. ಈ ಬಜೆಟ್ ಏನೇ ಕೊಟ್ಟರೂ ಅದು ಕನ್ನಡಿಗರಿಗೆ ದಕ್ಕುವುದಕ್ಕೆ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ ದರ್ಶನ್ ಕುಮಾರ್.

ಬಜೆಟ್ 2018: ಸರ್ಕಾರಿ ನೌಕರರಿಗೆ ತಕ್ಷಣಕ್ಕೆ ಸಿಹಿ ಸುದ್ದಿ ಇಲ್ಲಬಜೆಟ್ 2018: ಸರ್ಕಾರಿ ನೌಕರರಿಗೆ ತಕ್ಷಣಕ್ಕೆ ಸಿಹಿ ಸುದ್ದಿ ಇಲ್ಲ

ಬಜೆಟ್ ಪ್ರತಿಯನ್ನು ವಿತ್ತ ಸಚಿವರು ಓದಿದರೆ ಸಾಲದು!

ನನ್ನ ಪ್ರಕಾರ ಬಜೆಟ್ ಪ್ರತಿಯನ್ನು ಕೇವಲ ವಿತ್ತ ಸಚಿವರು ಓದಿದರೆ ಸಾಲದು. ಅವರು ಆರಂಭದಲ್ಲಿ, ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಗುರಿಯ ಬಗ್ಗೆ ಹೇಳಿದರೆ ಸಾಕು. ಉಳಿದಂತೆ ಎಲ್ಲಾ ಸಚಿವರೂ ತಮ್ಮ ತಮ್ಮ ಇಲಾಖೆಯ ಸಾಧನೆ, ಗುರಿಯ ಬಗ್ಗೆ ಅವರೇ ಮಾತನಾಡುವಂತಿರಬೇಕು ಎಂಬ ಸಲಹೆ ನೀಡಿದ್ದಾರೆ ರಾಘವೇಂದ್ರ ಎನ್. ಎ.

ಅತ್ಯುತ್ತಮ ನಡೆ

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್. ನಿಜಕ್ಕೂ ಅತ್ಯುತ್ತಮ ನಡೆ ಎಂದು ಮೈಸೂರ್ ಬಾಯ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಭ್ರಷ್ಟ ಕಾಂಗ್ರೆಸ್ ನಿಂದ ಇನ್ನೇನು ನಿರೀಕ್ಷಿಸೋಕೆ ಸಾಧ್ಯ?

ನಾವು ಭ್ರಷ್ಟ ಕಾಂಗ್ರೆಸ್ ನಿಂದ ಇನ್ನೆಂಥ ಬಜೆಟ್ ನಿರೀಕ್ಷಿಸಲು ಸಾಧ್ಯ? ಬಜೆಟ್ ಘೋಷಣೆಗಳೆಲ್ಲ ಕೇವಲ ಕಾಗದದಲ್ಲಿರುತ್ತವಷ್ಟೆ, ಅನುಷ್ಠಾನಕ್ಕೆ ಬರುವವಲ್ಲ. ಕಳೆದ ಐದು ವರ್ಷಗಳಿಂದ ಕಾಂಗ್ರೆಸ್ ಮಾಡಿದ್ದು ಅದನ್ನೇ ಎಂದು ನೇಷನ್ ಫಸ್ಟ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

English summary
Karnataka Budget 2018-19 is presented by Finance and Chief Minister Siddaramaiah. This is the last budget of Siddaramaiah before Karnataka assembly elections 2018. Here are few twitter reactions on the Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X