• search

ಕುಮಾರಸ್ವಾಮಿ ಬಜೆಟ್ ನಲ್ಲಿ ಮಹಿಳೆಯರಿಗೆ ಯಾವ ಭಾಗ್ಯ?!

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    Karnataka Budget 2018 : ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಕುಮಾರಣ್ಣನ ಕೊಡುಗೆಯೇನು?

    ಬೆಂಗಳೂರು, ಜುಲೈ 05: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಚೊಚ್ಚಲ ಬಜೆಟ್ ಅನ್ನು ಇಂದು(ಜು.05) ಮಂಡಿಸಿದ್ದಾರೆ. 2,18,488 ಕೋಟಿ ರೂ. ಗಾತ್ರದ ಆಯವ್ಯಯವನ್ನು ಮಂಡಿಸಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಯೋಜನೆಗಳೆಲ್ಲವನ್ನೂ ಹಾಗೆಯೇ ಮುಂದುವರಿಸಿದೆ.

    ಅದರೊಂದಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆಗೆ 5725 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಫೆಬ್ರವರಿಯಲ್ಲಿ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ ನಲ್ಲಿ ಈ ಇಲಾಖೆಗೆ 5371 ಕೋಟಿ ರೂ.ಮೀಸಲಿಡಲಾಗಿತ್ತು.

    ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ?

    ಮಹಿಳೆಯರಿಗೆ ಸರ್ಕಾರ ನೀಡಿದ ಕೊಡುಗೆಗಳ ಹೈಲೈಟ್ಸ್ ಇಲ್ಲಿದೆ...

    Karnataka Budget 2018: Highlights of Woman and child welfare department

    * ಮುಖ್ಯಮಂತ್ರಿ ಮಾತೃಶ್ರೀ ಯೋಜನೆ 2018ರ ನವೆಂಬರ್ 1ರಿಂದ ಜಾರಿ; ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ ಮೂರು ತಿಂಗಳು ಹಾಗೂ ಬಾಣಂತಿಯರಿಗೆ ಮೂರು ತಿಂಗಳ ಅವಧಿಗೆ ಮಾಸಿಕ 1,000 ರೂ. ನಂತೆ ಒಟ್ಟು 6,000 ರೂ. ನೀಡಲು ಕ್ರಮ; ಈ ಯೋಜನೆಗೆ 350 ಕೋಟಿ ರೂ. ಅನುದಾನ.

    * ಆಧಾರ ಸ್ವಯಂ ಉದ್ಯೋಗ ಯೋಜನೆಯ ಘಟಕ ವೆಚ್ಚ 1 ಲಕ್ಷ ರೂ.ಗಳಿಗೆ ಹೆಚ್ಚಳ; ಇದರಲ್ಲಿ ಶೇ.50ರಷ್ಟು ಬ್ಯಾಂಕ್ ಸಾಲ ಮತ್ತು ಶೇ.50ರಷ್ಟು ಸಹಾಯಧನ ಒದಗಿಸಲು ಕ್ರಮ.

    ಕರ್ನಾಟಕ ಬಜೆಟ್: ಸಿದ್ದರಾಮಯ್ಯ VS ಎಚ್ ಡಿ ಕುಮಾರಸ್ವಾಮಿ

    * 2016ರ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯಡಿ ಎಲ್ಲಾ 21 ವಿಧದ ವಿಕಲಚೇತನ ವ್ಯಕ್ತಿಗಳ ಸಮೀಕ್ಷೆಗೆ 5 ಕೋಟಿ ರೂ. ಅನುದಾನ.
    * ಪ್ರಸ್ತುತ ಜಿಲ್ಲೆಗೊಂದರಂತೆ ಇರುವ ವೃದ್ಧಾಶ್ರಮವನ್ನು ರಾಜ್ಯದ ಎಲ್ಲಾ ಉಪವಿಭಾಗಗಳಿಗೆ ತಲಾ ಒಂದರಂತೆ ವಿಸ್ತರಣೆಗೆ ಕ್ರಮ.

    * ರಾಷ್ಟ್ರೀಯ ಅಂಗವಿಕಲರ ಹಣಕಾಸು ಅಭಿವೃದ್ಧಿ ನಿಗಮದಿಂದ ವಿಕಲಚೇತರಿಗೆ ನೀಡಿರುವ ಸಾಲ ಮತ್ತು 2014ರಿಂದ ಸುಸ್ತಿಯಾಗಿರುವ ಬಡ್ಡಿ ಮೊತ್ತ ಮನ್ನಾ ಮಾಡಲು 4 ಕೋಟಿ ರೂ. ಅನುದಾನ.

    * ವಿಕಲಚೇತನ ಪಾಲನೆ ಹಾಗೂ ನಿರ್ವಹಣೆ ಬಗ್ಗೆ ಪಾಲಕರಿಗೆ ತರಬೇತಿ ನೀಡಲು 20 ಎಕರೆ ಜಾಗದಲ್ಲಿ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳ ಪಾಲುದಾರಿಕೆಯಲ್ಲಿ ವಿಕಲಚೇತನರ ಕ್ಯಾಂಪಸ್ ಪ್ರಾರಂಭ.
    * ಬೆಂಗಳೂರಿನ ಇಂದಿರಾನಗರದಲ್ಲಿರುವ ಸರ್ಕಾರಿ ಕಿವುಡು ಮಕ್ಕಳ ಶಾಲೆಯ ಕಟ್ಟಡದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಿಶೇಷ ಶಿಕ್ಷಕರ ಶಿಕ್ಷಣಕ್ಕಾಗಿ ತರಬೇತಿ ಕೇಂದ್ರ ಪ್ರಾರಂಭ.

    * ಪಿ.ಹೆಚ್.ಡಿ. ಮಾಡುತ್ತಿರುವ ಹಾಗೂ ವಿದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಕೈಗೊಳ್ಳುವ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು 1 ಕೋಟಿ ರೂ. ಅನುದಾನ.
    * ವಿವಿಧ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ ಲೈಂಗಿಕ ಕಾರ್ಯಕರ್ತೆಯರ ಜೀವನಕ್ಕೆ ಭದ್ರತೆ ಒದಗಿಸುವ ಕಾರ್ಯಕ್ರಮ ಜಾರಿ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Karnataka Budget 2018: Karnataka chief minister HD Kumaraswamy pronounced his maiden budget today(July 5th) Here are the Highlights of Woman and child welfare department.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more