ಬಜೆಟ್: ನೀರಾವರಿ ಯೋಜನೆ, ಯಾವ ಊರಿಗೆ ಏನು ಸಿಕ್ಕಿದೆ
ಬೆಂಗಳೂರು, ಫೆಬ್ರವರಿ 16: ಕರ್ನಾಟಕ ಬಜೆಟ್ 2018 ರಲ್ಲಿ ನೀರಾವರಿಗೆ ಭಾರಿ ಒತ್ತು ನೀಡಲಾಗಿದೆ. ನೀರಾವರಿಗಾಗಿ 18000 ಕೋಟಿಗೂ ಹೆಚ್ಚು ಹಣ ಮೀಸಲಿಡಲಾಗಿರುವುದು ವಿಶೇಷ.
ಕೃಷಿ ಕ್ಷೇತ್ರದ ನಂತರ ಅತಿ ಹೆಚ್ಚಿನ ಆದ್ಯತೆಯನ್ನು ನೀರಾವರಿಗೆ ನೀಡಲಾಗಿದ್ದು ಹಲವು ಈಗಾಗಲೇ ಚಾಲ್ತಿಯಲ್ಲಿರುವ ಯೋಜೆನೆಗಳಿಗೆ ಅನುದಾನ ಹೆಚ್ಚಳದ ಜೊತೆಗೆ ಹಲವು ಹೊಸ ಯೋಜನೆಗಳನ್ನು ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.
ಕರ್ನಾಟಕ ಬಜೆಟ್ 2018: ಶಿಕ್ಷಣ ಕ್ಷೇತ್ರಕ್ಕೆ ಏನಿದೆ ಕೊಡುಗೆ?
ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಗೂ ಅಗತ್ಯ ಮತ್ತು ಪರಿಸ್ಥಿತಿಗನುಗುಣವಾಗಿ ನೀರಾವರಿ ಯೋಜನೆಗಳನ್ನು ಘೋಷಿಸಿರುವುದು ಬಜೆಟ್‌ನಲ್ಲಿ ಕಂಡು ಬರುತ್ತಿದೆ.
ಈಗಾಗಲೇ ಚಾಲ್ತಿಯಲ್ಲಿರುವ ಎತ್ತಿನಹೊಳೆ ಸೇರಿದಂತೆ ಹಲವು ಹೊಸ ಯೋಜನೆಗಳಿಗೆ ಬಜೆಟ್‌ನಲ್ಲಿ ಅವಕಾಶ ನೀಡಿದ್ದು, ಹಲವು ಯೋಜನೆಗಳು ಕೆರೆ ಭರ್ತಿ ಮಾಡುವ ಯೋಜನೆಗಳಾಗಿವೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿಸುವ ಮೂಲಕ ನೀರಿನ ಬವಣೆಗೆ ಸಂಪೂರ್ಣ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ.
Live : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳು
ರಾಜ್ಯದ ಯಾವ-ಯಾವ ಊರಿಗೆ ಏನೇನು ನೀರಾವರಿ ಯೋಜನೆ ದೊರಕಿದೆ ಎಂದು ತಿಳಿಯಲು ಮುಂದೆ ಓದಿ...

ಬರ ನೀಗಿಸಲು ಕ್ರಮ
* ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ವಿಸ್ತರಣೆಯಡಿ ಶಹಾಪುರ ಮತ್ತು ಸುರಪುರ ತಾಲ್ಲೂಕುಗಳ ಹೆಚ್ಚುವರಿ ಅಚ್ಚುಕಟ್ಟು ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಾಮಗಾರಿ.
* ನಂದವಾಡಗಿ ಏತ ನೀರಾವರಿ ಯೋಜನೆ ವಿಸ್ತರಣೆಯಡಿ ಹುನಗುಂದ ತಾಲ್ಲೂಕಿನ ಹೆಚ್ಚುವರಿ ಅಚ್ಚುಕಟ್ಟು ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ.
* ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ 46 ಕೆರೆಗಳಿಗೆ 540 ಕೋಟಿ ರೂ.ಗಳ ವೆಚ್ಚದಲ್ಲಿ ಘಟಪ್ರಭಾ ನದಿಯಿಂದ ನೀರು ಹರಿಸುವ ಸಾಖಾಪುರ ಏತ ನೀರಾವರಿ ಯೋಜನೆ.
* 140 ಕೋಟಿ ರೂ.ಗಳ ವೆಚ್ಚದಲ್ಲಿ ಬಾಗಲಕೋಟೆ ಜಿಲ್ಲೆಯ ಸಸಾಲಟ್ಟಿ ಏತ ನೀರಾವರಿ ಯೋಜನೆ.
ಬಜೆಟ್ಟಿನಲ್ಲಿ ಮುಸ್ಲಿಂ ಸಮುದಾಯಕ್ಕೆ ಭರ್ಜರಿ ಬಳುವಳಿ

ಕೆರೆಗಳ ಭರ್ತಿಗೆ ಅನುದಾನ
* 210 ಕೋಟಿ ರೂ.ಗಳ ವೆಚ್ಚದಲ್ಲಿ ಬೆಳಗಾವಿ ಜಿಲ್ಲೆಯ ಸತ್ತಿಗೇರಿ ಏತ ನೀರಾವರಿ ಯೋಜನೆ.
*ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 17 ಕೆರೆಗಳನ್ನು 137 ಕೋಟಿ ರೂ.ಗಳ ವೆಚ್ಚದಲ್ಲಿ ಝಂಜರವಾಡ ಗ್ರಾಮದ ಹತ್ತಿರದ ಕೃಷ್ಣಾ ನದಿಯಿಂದ ನೀರನ್ನು ಎತ್ತಿ ತುಂಬಿ ಸುವ ಯೋಜನೆ.
*ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರು ಕೆರೆಯನ್ನು 50 ಕೋಟಿ ರೂ. ವೆಚ್ಚದಲ್ಲಿ ತುಂಬಿಸುವ ಯೋಜನೆ.
* ಗೋಕಾಕ ತಾಲೂಕಿನ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ
* 482 ಕೋಟಿ ವೆಚ್ಚದಡಿ ಬೀದರ್‌ನ ಕಾರಂಜಾ ಯೋಜನೆಯ ನಾಲೆಗಳ ಅಭಿವೃದ್ಧಿ

ಸಣ್ಣ ನೀರಾವರಿಗೂ ಒತ್ತು
* ಕುಡಿಯುವ ನೀರು ಪೂರೈಕೆಗಾಗಿ ಹಾಗೂ ಮಾರ್ಕಂಡೇಯ ಕಾಲುವೆಯಡಿ ಬಿಟ್ಟು ಹೋದ ಅಚ್ಚುಕಟ್ಟಿನ ನೀರಾವರಿಗಾಗಿ 250 ಕೋಟಿ ರೂ. ಅನುದಾನ.
* 30 ಕೋಟಿ ರೂ.ಗಳ ವೆಚ್ಚದಲ್ಲಿ ಅರಕಲಗೂಡು ತಾಲ್ಲೂಕು ಕೊಣನೂರು ಗ್ರಾಮದ ಕೆರೆಯಿಂದ ಸುತ್ತಮುತ್ತಲಿನ 40 ಕೆರೆಗಳಿಗೆ ನೀರು ತುಂಬಿ ಸುವ ಏತ ನೀರಾವರಿ ಯೋಜನೆ.
* 20 ಕೋಟಿ ರೂ.ಗಳ ವೆಚ್ಚದಲ್ಲಿ ಹಾಸನ ನಗರಕ್ಕೆ ಹೊಂದಿಕೊಂಡಿರುವ ಚೆನ್ನಪಟ್ಟಣ ಕೆರೆ, ಸತ್ಯಮಂಗಲ ಕೆರೆ, ಹುನಸಿನಕೆರೆ ಕೆರೆಗಳ ಪುನಶ್ಚೇತನ ಹಾಗೂ ಹಂದಿನಕೆರೆಯಿಂದ ಸತ್ಯಮಂಗಲ ಕೆರೆಗೆ ನೀರು ತುಂಬಿ ಸುವ ಯೋಜನೆ.
* ರಾಜ್ಯದ 43 ತಾಲ್ಲೂಕುಗಳಲ್ಲಿ ಅಂತರ್ಜಲ ಅಭಿವೃದ್ಧಿಗೆ ಚೆಕ್ ಡ್ಯಾಮ್, ರೀಚಾರ್ಜರ್‌ಗಳ ನಿರ್ಮಾಣಕ್ಕೆ 50 ಕೋಟಿ ಮೀಸಲಿಡಲಾಗಿದೆ.
* ಸ್ಥಗಿತಗೊಂಡಿರುವ ಎಲ್ಲಾ ಏತ ನಿರಾವರಿ ಯೋಜನೆಗಳನ್ನು 100 ಕೋಟಿ ಹೆಚ್ಚುವರಿ ಅನುದಾನದ ಮೂಲಕ ಪುನಶ್ಚೇತನಗೊಳಿಸಲಾಗುತ್ತದೆ.

ನಾಲೆ ಅಭಿವೃದ್ಧಿ
* ತುಂಗ ಭದ್ರಾ ಜಲಾಶಯದ ಸಂಗ್ರಹಣಾ ಸಾಮರ್ಥ್ಯದ ಕೊರತೆಯನ್ನು ನೀಗಿ ಸುವ ಪರ್ಯಾಯ ಮಾರ್ಗೋಪಾಯವಾಗಿ ಪ್ರವಾಹ ಹರಿವು ನಾಲೆ ಮೂಲಕ ನವಿಖೆ ಹತ್ತಿರ ಸಮತೋಲನ ಜಖಾಶಯ ನಿರ್ಮಾಣ ಯೋಜನೆಯ ಕಾರ್ಯ ಸಾಧ್ಯತೆ ಅಧ್ಯಯನ ಮತ್ತು ಯೋಜನಾ ವರದಿ ತಯಾರಿ.
* 250 ಕೋಟಿ ರೂ.ಗಳ ವೆಚ್ಚದಲ್ಲಿ ಜಗಳೂರು ತಾಲೂಕಿನ 46 ಕೆರೆಗಳಿಗೆ ತುಂಗ ಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ.
* 250 ಕೋಟಿ ರೂ.ಗಳ ವೆಚ್ಚದಲ್ಲಿ ಚಿತ್ರದುರ್ಗ ತಾಲೂಕಿನ ಭರಮ ಸಾಗರ ಹೋಬಳಿಯ 33 ಕೆರೆಗಳಿಗೆ ತುಂಗ ಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ.
* 135 ಕೋಟಿ ರೂ.ಗಳ ವೆಚ್ಚದಲ್ಲಿ ದಾವಣಗೆರೆ ತಾಲೂಕಿನ ಬೇತೂರು, ಮಾಗನಳ್ಳಿ, ರಾಮಪುರ್, ಮೇಗಲಗೇರಿ ಮತ್ತು ಖಡಜ್ಜಿ ಗ್ರಾಮಗಳ ಕೆರೆಗಳನ್ನು ತುಂಗ ಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ.

ಪಶ್ಚಿಮ ಘಟ್ಟದ ನದಿ ಉಳಿಸಲು ಯೋಜನೆ
* 100 ಕೋಟಿ ರೂ.ಗಳ ವೆಚ್ಚದಲ್ಲಿ ಜಮಖಂಡಿ ತಾಲ್ಲೂಕಿನ ಗಲಗಲಿ ಮರೆಗುದ್ದಿ ಏತ ನೀರಾವರಿ ಯೋಜನೆ
* ಕೆ.ಆರ್.ಪುರಂ ಸಂಸ್ಕೃಣಾ ಘಟಕದಲ್ಲಿ ಸಂಸ್ಕರಣಗೊಂಡ ಕೊಳಚೆ ನೀರನ್ನು ಹೊಸಕೋಟೆಯ 30 ಕೆರೆಗಳಿಗೆ ತುಂಬಲು 150 ಕೋಟಿ
* ಹೆಬ್ಬಾಳದ ಸಂಸ್ಕರಿತ ನೀರು ಚೆಕ್ಕಬಳ್ಳಾಪುರ ಜಿಲ್ಲೆಯ ಕೆರೆಗೆ
* ಎತ್ತಿನಹೊಳೆ ಯೋಜನೆಯಡಿ 527 ಕೆರೆಗಳನ್ನು ತುಂಬಿಸಲಾಗುತ್ತದೆ.
* ಪಶ್ಚಿಮ ವಾಹಿನಿ ಯೋಜನೆಯಡಿ ದಕ್ಷಿಣ ಕನ್ನಡದ ಅರೆಕಳ ಎಂಬಲ್ಲಿ ನೇತ್ರಾವತಿ ನದಿಗೆ ಉಪ್ಪು ನೀರು ಸೇರುವುದನ್ನು ತಪ್ಪಿಸಲು ಕಿಂಡಿ ಅಣೆಕ್ಟಟ್ಟನ್ನು 174 ಕೋಟಿ ವೆಚ್ಚದಲ್ಲಿ ನಿರ್ಮಣ ಮಾಡಲಾಗುತ್ತದೆ

ಕಾಲುವೆ ಆಧುನೀಕರಣ
* 117 ಕೋಟಿ ವೆಚ್ಚದಲ್ಲಿ ಮುಲ್ಲಾಮಾರಿ ಕೆಳದಂಡೆ ಯೋಜನೆಯ ಬಲದಂಡೆ ಹಾಗೂ ಕಾಲುವೆ ಅಭಿವೃದ್ಧಿ
* 809.5 ಕೋಟಿ ವೆಚ್ಚದಲ್ಲಿ ಹೇಮಾವತಿ ಎಡದಂಡೆ ನಾಲೆ ಅಭಿವೃದ್ಧಿ
* ಬಹು ದಿನಗಳ ಒತ್ತಾಯವಾದ ಕೃಷ್ಣಾ ಮೇಲ್ದಂಡೆ ಯೋಜನೆಯ ಎರಡನೇ ಹಂತದ ಕಾಲುವೆ ಆಧುನೀಕರಣಕ್ಕೆ ಸರ್ಕಾರ ಅಸ್ತು ಅಂದಿದೆ. ಈ ಯೋಜನೆಗೆ 750 ಕೋಟಿ ಮೀಸಲಿಡಲಾಗಿದೆ.
* 482 ಕೋಟಿ ವೆಚ್ಚದಡಿ ಬೀದರ್‌ನ ಕಾರಂಜಾ ಯೋಜನೆಯ ನಾಲೆಗಳ ಅಭಿವೃದ್ಧಿ
* 750 ಕೋಟಿ ರೂ. ವೆಚ್ಚದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-2ರ ನಾರಾಯಣಪುರ ಬಲದಂಡೆ ಕಾಲುವೆ ಕಿ.ಮೀ. ೦.೦೦ನಿಂದ 95.೦೦ರವರೆಗಿನ ಕಾಲುವೆ ಆಧುನೀಕರಣ.
* ಬಹು ದಿನಗಳ ಒತ್ತಾಯವಾದ ಕೃಷ್ಣಾ ಮೇಲ್ದಂಡೆ ಯೋಜನೆಯ ಎರಡನೇ ಹಂತದ ಕಾಲುವೆ ಆಧುನೀಕರಣಕ್ಕೆ ಸರ್ಕಾರ ಅಸ್ತು ಅಂದಿದೆ. ಈ ಯೋಜನೆಗೆ 750 ಕೋಟಿ ಮೀಸಲಿಡಲಾಗಿದೆ.