ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಟ್ಕಳದ ಶಫಿ ಆರ್ಮರ್ ಜಾಗತಿಕ ಉಗ್ರನೆಂದು ಘೋಷಿಸಿದ ಅಮೆರಿಕ

|
Google Oneindia Kannada News

ಬೆಂಗಳೂರು, ಜೂನ್ 16 : ಕರ್ನಾಟಕದ ಭಟ್ಕಳ ಮೂಲದ ಉಗ್ರ ಮೊಹಮ್ಮದ್ ಶಫಿ ಆರ್ಮರ್ ನನ್ನು ಜಾಗತಿಕ ಉಗ್ರನೆಂದು ಅಮೆರಿಕ ಗುರುವಾರ ಘೋಷಿಸಿದೆ.

ಐಎಸ್‌ಐಎಸ್ ಉಗ್ರ ಭಟ್ಕಳದ ಶಫಿ ಅರ್ಮರ್ ಮೃತಪಟ್ಟಿಲ್ಲ ಐಎಸ್‌ಐಎಸ್ ಉಗ್ರ ಭಟ್ಕಳದ ಶಫಿ ಅರ್ಮರ್ ಮೃತಪಟ್ಟಿಲ್ಲ

ಅಮೆರಿಕದ ಹಣಕಾಸು ಸಚಿವಾಲಯ ಜಾಗತಿಕ ಉಗ್ರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಇರಾನ್ ಉಗ್ರ ಸಂಘಟನೆಗೆ ಭಾರತೀಯ ಯುವಕರನ್ನು ಪ್ರಚೋಧಿಸುತ್ತಿದ್ದ ಮಹಮ್ಮದ್ ಶಫಿ ಆರ್ಮರ್ ನನ್ನು ಸೇರ್ಪಡೆಗೊಳಿಸಿದೆ.

Karnataka-born IS operative Mohammed Shafi Armar declared global terrorist by US

ಈ ಮೂಲಕ ಆರ್ಮರ್ ನನ್ನು ಜಾಗತಿಕ ಉಗ್ರನೆಂದು ಅಮೆರಿಕ ಘೋಷಣೆ ಮಾಡಿದ್ದು, ಇದರಂತೆ ಉಗ್ರ ಪಟ್ಟಿ ಸೇರಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾನೆ.

ಭಾರತದಲ್ಲಿ ಇಂಡಿಯನ್ ಮುಜಾಹಿದ್ದೀನ್ ಕಾರ್ಯಕರ್ತರ ವಿರುದ್ಧ ಕಾರ್ಯಾಚರಣೆಗಳು ನಡೆದ ಬಳಿಕ, ಆರ್ಮರ್ ತನ್ನ ಸಹೋದರನೊಂದಿಗೆ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾನೆಂದು ಹೇಳಲಾಗುತ್ತಿದೆ.

ಛೋಟೇ ಮುಲ್ಲಾ, ಅಂಜಾನ್ ಭಾಯ್ ಮತ್ತು ಯೂಸಫ್ ಅಲ್ ಹಿಂದಿ ಮತ್ತಿತರ ಹೆಸರುಗಳನ್ನು ಹೊಂದಿದ್ದ ಆರ್ಮರ್ ವಿರುದ್ಧ ಈ ಹಿಂದೆಯೇ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು.

ಐಎಂ ಸಂಸ್ಥಾಪಕ ರಿಯಾಜ್ ಸೇರಿದಂತೆ ಭಟ್ಕಳ ಸಹೋದರರೊಂದಿಗೆ ಭಿನ್ನಮತದ ಬಳಿಕ, ಆರ್ಮರ್ ಅನ್ಸಾರ್ ಉಲ್ ತೌಹೀದ್ ಸಂಘಟನೆ ಹುಟ್ಟುಹಾಕಿದ್ದ.

ಬಳಿಕ ಅದು ಇಸಿಸ್ ಉಗ್ರರಿಗೆ ನಿಷ್ಠೆ ತೋರಿತ್ತು. ತಂತ್ರಜ್ಞಾನದ ಜ್ಞಾನವಿರುವ ಆರ್ಮರ್ ಫೇಸ್ ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಭಾರತ, ಬಾಂಗ್ಲಾದೇಶ, ಶ್ರೀಲಂಕಾದ ಯುವಕರನ್ನು ಆಕರ್ಷಿಸಿ ಇಸಿಸ್ ಗೆ ಸೇರ್ಪಡೆಗೊಳಿಸುತ್ತಿದ್ದ.

English summary
The US on Thursday declared Karnataka-born Islamic State operative Mohammad Shafi Armar and two others as Specially Designated Global Terrorists and imposed financial sanctions against them, the first time that American authorities have taken such action against an Indian member of the terror group.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X