• search
For Quick Alerts
ALLOW NOTIFICATIONS  
For Daily Alerts

  ಭ್ರಷ್ಟಾಚಾರ: ಮಲ್ಲಿಕಾರ್ಜುನ ಖರ್ಗೆ ವಿರುದ್ದ ಘರ್ಜಿಸಿದ ಬಿಜೆಪಿ ವಿಡಿಯೋ

  |
    ಮಲ್ಲಿಕಾರ್ಜುನ ಖರ್ಗೆ ವಿರುದ್ದ ಘರ್ಜಿಸಿದ ಬಿಜೆಪಿ ವಿಡಿಯೋ | Oneindia Kannada

    ಥ್ರಿಲ್ಲಿಂಗ್ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಬರುವ ಹಿನ್ನಲೆ ಸಂಗೀತ ಮೀರಿಸುವಂತಹ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ನೀಡಿ ಕರ್ನಾಟಕ ಬಿಜೆಪಿ ಘಟಕ, ಕಾಂಗ್ರೆಸ್ ವಿರುದ್ದ ಚುನಾವಣಾ ಹೊಸ್ತಿಲಲ್ಲಿ ಇನ್ನೊಂದು ವಿಡಿಯೋ ಬಿಡುಗಡೆ ಮಾಡಿ, ಮತ್ತೆ ತೊಡೆ ತಟ್ಟಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ನಂತರ ಈ ಬಾರಿ ಬಿಜೆಪಿ, ಹಿರಿಯ ಮುಖಂಡ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆಯವರ ಭ್ರಷ್ಟಾಚಾರದ ವಿರುದ್ದ ಘರ್ಜಿಸಿದೆ.

    ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ರಸಪ್ರಶ್ನೆ: ಎಂತೆಂಥಾ ಉತ್ತರಗಳು ಬಂದ್ವು ಶಿವನೇ!

    ದಲಿತರ ಕ್ಷೇಮಾಭಿವೃದಿಯ ಬದಲು ತನ್ನ ಆಸ್ತಿಯನ್ನು ಕೋಟಿ ಕೋಟಿ ಲೆಕ್ಕದಲ್ಲಿ ವೃದ್ದಿಸಿಕೊಂಡಿರುವ ನಿಮ್ಮ ನಾಯಕನ ಬಗ್ಗೆ ಉತ್ತರ ನೀಡಿ ಮಿಸ್ಟರ್ ಸಿದ್ದರಾಮಯ್ಯ ಎನ್ನುವ 1.20 ನಿಮಿಷದ ವಿಡಿಯೋ ಸದ್ಯ ಸಾಮಾಜಿಕ ತಾಣದಲ್ಲಿ ಸದ್ದು ಮಾಡುತ್ತಿದೆ.

    ಶಿವರಾತ್ರಿಯ ದಿನ ಬಿಡುಗಡೆ ಮಾಡಿರುವ ಈ ವಿಡಿಯೋದಲ್ಲಿ ರಾಹುಲ್ ಗಾಂಧಿಯವರನ್ನು ಟ್ಯಾಗ್ ಮಾಡಿ, ನಿಮ್ಮ ಮುಖ್ಯಮಂತ್ರಿ ಲೋಕಾಯುಕ್ತ ಸಂಸ್ಥೆಯನ್ನೇ ನೇಪಥ್ಯಕ್ಕೆ ಸರಿಸಿದರು. ನೀವು ಇಂತಹ ನಾಯಕರನ್ನು ಬೆಂಬಲಿಸುತ್ತೀರಾ ಎಂದು ಬಿಜೆಪಿ, ರಾಹುಲ್ ಅವರನ್ನು ಪ್ರಶ್ನಿಸಿದೆ.

    ಕಾಂಗ್ರೆಸ್-ಬಿಜೆಪಿ ನಡುವೆ ಟ್ವಿಟ್ಟರ್‌ನಲ್ಲಿ ವಿಡಿಯೋ ವಾರ್

    ಐವತ್ತು ಸಾವಿರ ಕೋಟಿ ರೂಪಾಯಿಗೂ ಅಧಿಕ ಆಸ್ತಿಯನ್ನು ಹೊಂದಿರುವ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ, ವಿಡಿಯೋದಲ್ಲಿ ಎಳೆಎಳೆಯಾಗಿ ಬಿಡಿಸಿ ಹೇಳಿರುವ ಬಿಜೆಪಿ, ಎಲ್ಲಿ ಏನು ಖರ್ಗೆ ಸಾಹೇಬ್ರಿಂದ ಭ್ರಷ್ಟಾಚಾರ ನಡೆದಿದೆ ಎನ್ನುವುದರ ಬಗ್ಗೆ ವಿವರಿಸಿದೆ. ಮುಂದೆ ಓದಿ..

    ಇಂತಹ ನಾಯಕರಿಗೆ ಬೆಂಬಲ ಸೂಚಿಸುತ್ತಿದ್ದೀರಾ, ನೀವೂ ಅವರಲ್ಲಿ ಒಬ್ಬರು

    ಈಗ ತಾನೇ ಕರ್ನಾಟಕ ಪ್ರವಾಸವನ್ನು ಮುಗಿಸಿ ಹೋಗಿದ್ದೀರಾ, ಹಿಂಬದಿ ಕನ್ನಡಿಯಿಂದ ನಿಮ್ಮ ಮುಖಂಡರ ಭ್ರಷ್ಟಾಚಾರವನ್ನು ಒಮ್ಮೆ ನೋಡಿ. ನಿಮ್ಮ ಮುಖ್ಯಮಂತ್ರಿ ತನಿಖೆ ನಡೆಸಬೇಕಾದ ಸಂಸ್ಥೆಯನ್ನೇ ತೆರೆಮೆರೆಗೆ ಸರಿಸಿದರು. ನೀವು ಇಂತಹ ನಾಯಕರಿಗೆ ಬೆಂಬಲ ಸೂಚಿಸುತ್ತಿದ್ದೀರಾ, ನೀವೂ ಅವರಲ್ಲಿ ಒಬ್ಬರು ಎಂದಾಯಿತಲ್ಲವೇ?

    ಚಿಕ್ಕಮಗಳೂರಿನಲ್ಲಿ 1,000 ಕೋಟಿ ಮೌಲ್ಯದ 300 ಎಕರೆ ಕಾಫಿ ಎಸ್ಟೇಟ್

    ಚಿಕ್ಕಮಗಳೂರಿನಲ್ಲಿ 1,000 ಕೋಟಿ ಮೌಲ್ಯದ 300 ಎಕರೆ ಕಾಫಿ ಎಸ್ಟೇಟ್

    ಚಿಕ್ಕಮಗಳೂರಿನಲ್ಲಿ 1,000 ಕೋಟಿ ಮೌಲ್ಯದ 300 ಎಕರೆ ಕಾಫಿ ಎಸ್ಟೇಟ್ ಇದೆ. ಐವತ್ತು ಸಾವಿರ ಕೋಟಿ ರೂಪಾಯಿಗೂ ಅಧಿಕ ಆಸ್ತಿಯನ್ನು ಖರ್ಗೆ ಹೊಂದಿದ್ದಾರೆಂದು. 2014ರಲ್ಲಿ ಅವರ ವಿರುದ್ದ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು.ಇದರಲ್ಲಿ 1,427 ಇಂಜಿನಿಯರ್ ಗಳನ್ನು ಅನಧಿಕೃತವಾಗಿ ನೇಮಕ ಮಾಡಿದ್ದೂ ಒಂದು.

    ಮಗಳ ಹೆಸರಿನಲ್ಲಿ ಐವತ್ತು ಕೋಟಿ ರೂಪಾಯಿ ಮೌಲ್ಯದ ಬಂಗ್ಲೆ

    ಮಗಳ ಹೆಸರಿನಲ್ಲಿ ಐವತ್ತು ಕೋಟಿ ರೂಪಾಯಿ ಮೌಲ್ಯದ ಬಂಗ್ಲೆ

    ಬೆಂಗಳೂರು ಬನ್ನೇರುಘಟ್ಟ ರಸ್ತೆಯಲ್ಲಿ ಐನೂರು ಕೋಟಿ ರೂಪಾಯಿ ಬೆಲೆಬಾಳುವ ಕಾಂಪ್ಲೆಕ್ಸ್, ಎಂ ಎಸ್ ರಾಮಯ್ಯ ಮೆಡಿಕಲ್ ಆಸ್ಪತೆಯ ಬಳಿ 25 ಕೋಟಿ ರೂಪಾಯಿ ಬೆಲೆಬಾಳುವ ಕಟ್ಟಡ, ಮಗಳ ಹೆಸರಿನಲ್ಲಿ ಐವತ್ತು ಕೋಟಿ ರೂಪಾಯಿ ಮೌಲ್ಯದ ಬಂಗ್ಲೆ.

    ದಲಿತರ ಹೆಸರಿನಲ್ಲಿ ಖರ್ಗೆ ಲೂಟಿ ಹೊಡೆದದ್ದು ಕೋಟಿ..ಕೋಟಿ..

    ದಲಿತರ ಹೆಸರಿನಲ್ಲಿ ಖರ್ಗೆ ಲೂಟಿ ಹೊಡೆದದ್ದು ಕೋಟಿ..ಕೋಟಿ..

    ನಲವತ್ತು ಎಕರೆ ಸರಕಾರೀ ಜಮೀನಿನಲ್ಲಿ (ಕೆಂಗೇರಿ ಗೇಟ್) ನಲ್ಲಿ ಫಾರ್ಮ್ ಹೌಸ್. ಬಳ್ಳಾರಿ ರಸ್ತೆಯಲ್ಲಿ ಹದಿನೇಳು ಎಕರೆ ಜಮೀನು. ಇಂದಿರಾ ನಗರದಲ್ಲಿ ಮೂರು ಅಂತಸ್ತಿನ ಕಟ್ಟಡ. ಸದಾಶಿವ ನಗರದಲ್ಲಿ ಎರಡು ಮನೆ. ದಲಿತರ ಹೆಸರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಲೂಟಿ ಹೊಡೆದದ್ದು ಕೋಟಿ..ಕೋಟಿ..

    ಲೋಕಾಯುಕ್ತ ಯಾಕೆ ಈ ಭ್ರಷ್ಟಾಚಾರವನ್ನು ತನಿಖೆ ಮಾಡಲು ಒಪ್ಪದೇ ಇದ್ದದ್ದು?

    ಲೋಕಾಯುಕ್ತ ಯಾಕೆ ಈ ಭ್ರಷ್ಟಾಚಾರವನ್ನು ತನಿಖೆ ಮಾಡಲು ಒಪ್ಪದೇ ಇದ್ದದ್ದು?

    ಲೋಕಸಭೆಯಲ್ಲಿ ನಿಮಗೆ ಬೇರೆ ಯಾರು ವಿರೋಧ ಪಕ್ಷದ ನಾಯಕನ ನೇಮಕ ಮಾಡಲು ಆಗಲಿಲ್ಲವಾ? ಲೋಕಾಯುಕ್ತ ಸಂಸ್ಥೆ ಯಾಕೆ ಈ ಬ್ರಹ್ಮಾಂಡ ಭ್ರಷ್ಟಾಚಾರವನ್ನು ತನಿಖೆ ಮಾಡಲು ಒಪ್ಪದೇ ಇದ್ದದ್ದು? ಇದಕ್ಕಾಗಿಯೇ ಲೋಕಾಯುಕ್ತ ಸಂಸ್ಥೆಯನ್ನು ತೆರೆಮೆರೆಗೆ ತಳ್ಳಲಾಯಿತಾ? ಉತ್ತರ ಕೊಡಿ ಮುಖ್ಯಮಂತ್ರಿಗಳೇ.. ಬದಲಾವಣೆಯಾಗಲು ಇದು ಸೂಕ್ತ ಸಮಯ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Karnataka unit of BJP released new video. This time this video is all about corrpution of Senior Congress Leader Mallikarjuna Kharge. BJP, slide by slide explained where and how Kharge involved in the corruption.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more