ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಬಂಡಾಯ ಎದ್ದಿರುವ ಸಚಿವ-ಶಾಸಕರ ಪಟ್ಟಿ!
ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಆರೋಪಿಸಿರುವ ಕರ್ನಾಟಕ ಬಿಜೆಪಿ ರಾಜ್ಯ ಸರ್ಕಾರದಲ್ಲಿ ಹಲವು ಶಾಸಕರು ಮತ್ತು ಸಚಿವರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದೆ. ಅಲ್ಲದೆ ಶಾಸಕರು ಮತ್ತು ಸಚಿವರ ಪಟ್ಟಿಯನ್ನು ಕೂಡ ನೀಡಿದೆ.
ಅಲ್ಲದೆ ರಾಜ್ಯದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರವಲ್ಲ ಬದಲಾಗಿ ಸಮ್ಮಿಶ್ರ ಸರ್ಕಾರ ಎಂದು ಬಿಜೆಪಿ ಹೇಳಿದ್ದು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಹೊಂದಾಣಿಕೆ ಇಲ್ಲ ಎನ್ನುವಂತೆ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಬಣಗಳ ಒಳ ಜಗಳ ಬಸ್ ಏರಿ ಬೀದಿಗೆ ಬಂದಿದ್ದು ಅಲ್ಲದೆ, ನಾಳೆ ಮೈಸೂರು ಬದಲು ದುಬೈನಲ್ಲಿ ಬಸ್ ನಿಂತು ಹರಾಜಿಗೆ ಬೀಳಲಿದೆ ಎಂದು ಭವಿಷ್ಯ ನುಡಿದಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಬಣಗಳ ನಡುವೆ ಒಳಜಗಳ ಇದೆ ಎಂದು ಬಿಜೆಪಿ ಹೇಳಿದೆ.

ಬಂಡಾಯ ಶಾಸಕರು ಮತ್ತು ಸಚಿವರು
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ 7 ಅಂತಸ್ತಿನ "ಸಮ್ಮಿಶ್ರ ಸರ್ಕಾರ"ದಲ್ಲಿ ಬಂಡಾಯ ಎದ್ದಿರುವ ಸಚಿವರು-ಶಾಸಕರ ಪಟ್ಟಿ ನೀಡಿದ್ದು, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಶಾಮನೂರು ಶಿವಶಂಕರಪ್ಪ, ಬಿ. ಆರ್. ಪಾಟೀಲ್, ಬಸವರಾಜ ರಾಯರೆಡ್ಡಿ, ಶಿವಗಂಗಾ ಬಸವರಾಜ್, ರಾಜು ಕಾಗೆ ಅವರು ಬಂಡಾಯ ಎದ್ದಿದ್ದಾರೆ ಎಂದು ಹೇಳಿದೆ.
ಈಗಾಗಲೇ ಕಾಂಗ್ರೆಸ್ ಒಳಜಗಳ ಬೀದಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಕರ್ನಾಟಕ ಬಿಜೆಪಿ ಹೇಳಿದೆ.
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ @siddaramaiah ಮತ್ತು @DKShivakumar ಅವರ 7 ಅಂತಸ್ತಿನ "ಸಮ್ಮಿಶ್ರ ಸರ್ಕಾರ"ದಲ್ಲಿ ಬಂಡಾಯ ಎದ್ದಿರುವ ಸಚಿವರು-ಶಾಸಕರ ಪಟ್ಟಿ;
— BJP Karnataka (@BJP4Karnataka) October 27, 2023
▪️ ಸತೀಶ್ ಜಾರಕಿಹೊಳಿ
▪️ ಲಕ್ಷ್ಮಿ ಹೆಬ್ಬಾಳ್ಕರ್
▪️ ಶಾಮನೂರು ಶಿವಶಂಕರಪ್ಪ
▪️ ಬಿ. ಆರ್. ಪಾಟೀಲ್
▪️ ಬಸವರಾಜ ರಾಯರೆಡ್ಡಿ
▪️ ಶಿವಗಂಗಾ ಬಸವರಾಜ್
▪️ ರಾಜು ಕಾಗೆ…
ಬೂಟಾಟಿಕೆ ಸಾಬೀತು
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕರ್ನಾಟಕ ಬಿಜೆಪಿ ಗೃಹಲಕ್ಷ್ಮಿ ಹೆಸರಿನಲ್ಲಿ ರಾಜ್ಯದ ಮಹಿಳೆಯರಿಗೆ ಟೋಪಿ ಹಾಕಿದೆ ಎಂದು ಆರೋಪಿಸಿದೆ. ಗೃಹಲಕ್ಷ್ಮಿ ಯೋಜನೆ ಹಣ ರಾಜ್ಯದ ಬಹುತೇಕ ಮನೆಗಳಿಗೆ ಇನ್ನೂ ತಲುಪಿಲ್ಲ ಎಂದು ಹೇಳಿದೆ.
"ಪ್ರತಿ ತಿಂಗಳು ಮನೆ ಯಜಮಾನಿಯ ಅಕೌಂಟ್‌ಗೆ ₹2000 ಹಾಕುತ್ತೇವೆಂದು ಅಧಿಕಾರಕ್ಕೆ ಬಂದಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಈಗ ರಾಜ್ಯದ ಮಹಿಳೆಯರಿಗೆ ಎಂದಿನಂತೆ ಟೋಪಿ ಹಾಕಿದೆ. ಆಗಸ್ಟ್ ತಿಂಗಳಲ್ಲಿ ಆರಂಭವಾದ "ಗೃಹಲಕ್ಷ್ಮಿ" ರಾಜ್ಯದ ಬಹುತೇಕ ಮನೆಗಳಿಗೆ ತಲುಪಿಲ್ಲ. ಇನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಒಂದೇ ಒಂದು ರೂಪಾಯಿ ಸಹ ಇದುವರೆಗೂ ರಾಜ್ಯದ ಗೃಹಲಕ್ಷ್ಮಿಯರಿಗೆ ಜಮೆಯಾಗಿಲ್ಲ. ಅಲ್ಲಿಗೆ, ರಾಹುಲ್ ಗಾಂಧಿಯವರನ್ನು ಕರೆಸಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು, ಅವರು ಅಬ್ಬರಿಸಿ ಬೊಬ್ಬಿರಿದು ಭಾಷಣ ಮಾಡಿದ್ದು, ಕೇವಲ ಬೂಟಾಟಿಕೆಗೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ!" ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ.












Click it and Unblock the Notifications