ಅನಕ್ಷರಸ್ಥ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಅಮೋಘ ಸಾಧನೆಗಳು
ಬೆಂಗಳೂರು,ಜನವರಿ 02: ಅಧಿಕಾರಕ್ಕೆ ಬಂದ ದಿನದಿಂದ ಅನಕ್ಷರಸ್ಥ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಅಮೋಘ ಸಾಧನೆಗಳು ಎಂದು ಕರ್ನಾಟಕ ಬಿಜೆಪಿ ಪಟ್ಟಿಯನ್ನ ಟ್ವೀಟ್ ಮೂಲಕ ಬಿಡುಗಡೆ ಮಾಡಿದೆ. ಅಪ್ರಯೋಜಕ ಅಸಮರ್ಥರ ಕೈಗೆ ಶಿಕ್ಷಣ ಇಲಾಖೆಯನ್ನು ಕೊಟ್ಟರೆ ಏನಾಗುತ್ತದೆ ಅನ್ನುವುದಕ್ಕೆ ಈ ಪ್ರಕರಣಗಳೇ ಸಾಕ್ಷಿ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.
ಅಧಿಕಾರಕ್ಕೆ ಬಂದ ದಿನದಿಂದ ಅನಕ್ಷರಸ್ಥ ಶಿಕ್ಷಣ ಸಚಿವ @Madhu_Bangarapp ಅವರ ಅಮೋಘ ಸಾಧನೆಗಳು:
— BJP Karnataka (@BJP4Karnataka) January 2, 2024
▪ ಶಾಲಾ ಮಕ್ಕಳ ಕೈಯಲ್ಲಿ ಟಾಯ್ಲೆಟ್ ಕ್ಲೀನ್
▪ ಚೆಕ್ ಬೌನ್ಸ್ ಮಾಡಿಸಿ ವಂಚನೆ
▪ ಪಠ್ಯ ಪರಿಷ್ಕರಣೆ ಮೂಲಕ ಎಡಬಿಡಂಗಿ ಸಿದ್ಧಾಂತ ಹೇರಿಕೆ
▪ ಮೊಟ್ಟೆ ವಿತರಣೆ ಶಿಕ್ಷಕರ ಜೇಬಿಗೆ ಕತ್ತರಿ
▪ ಅಪಾಯದ ಸ್ಥಿತಿಯಲ್ಲಿ ಶಾಲಾ ಕಟ್ಟಡಗಳು…

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಅಮೋಘ ಸಾಧನೆಗಳು
▪ ಶಾಲಾ ಮಕ್ಕಳ ಕೈಯಲ್ಲಿ ಟಾಯ್ಲೆಟ್ ಕ್ಲೀನ್
▪ ಚೆಕ್ ಬೌನ್ಸ್ ಮಾಡಿಸಿ ವಂಚನೆ
▪ ಪಠ್ಯ ಪರಿಷ್ಕರಣೆ ಮೂಲಕ ಎಡಬಿಡಂಗಿ ಸಿದ್ಧಾಂತ ಹೇರಿಕೆ
▪ ಮೊಟ್ಟೆ ವಿತರಣೆ ಶಿಕ್ಷಕರ ಜೇಬಿಗೆ ಕತ್ತರಿ
▪ ಅಪಾಯದ ಸ್ಥಿತಿಯಲ್ಲಿ ಶಾಲಾ ಕಟ್ಟಡಗಳು
ಇನ್ನೊಂದು ಟ್ವೀಟ್ ಮಾಡಿರುವ ಬಿಜೆಪಿ,ರಾಜ್ಯದಲ್ಲಿ ಭೀಕರ ಬರಗಾಲದ ಪರಿಣಾಮ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರ ಹಿತಕ್ಕಾಗಿ 10 ಸಾವಿರ ಕೋಟಿ ನೀಡುತ್ತೇವೆ ಎಂದು ಹೇಳುತ್ತಾರೆ, 1 ಸಾವಿರ ಕೋಟಿ ಬಿಡುಗಡೆ ಮಾಡುತ್ತಾರೆ. ಆದರೆ ರೈತರ ಪರಿಹಾರ ವಿಚಾರಕ್ಕೆ ಬಂದಾಗ ಕೇಂದ್ರ ಸರ್ಕಾರ, ಮೋದಿ ಸರ್ಕಾರ ಎಂದು ಬೊಟ್ಟು ಮಾಡಿ ತೋರಿಸುತ್ತಾರೆ ಎಂದು ಕಿಡಿಕಾರಿದೆ.
ಇನ್ನೂ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದ್ದು, ಸಮಾಜವಾದದ ಸೋಗಲಾಡಿ ಮುಖವಾಡ ಹಾಕಿ ರಾಜಕೀಯಕ್ಕೆ ಬಂದ ಲಾಲು ಪ್ರಸಾದ್ ಯಾದವ್ ಬಿಹಾರದಲ್ಲಿ ಗೂಂಡಾರಾಜ್ ಸ್ಥಾಪಿಸಿದ್ದರು. ಅದೇ ಸಮಾಜವಾದದ ಮುಖವಾಡ ಹಾಕಿ ಬಂದ ಮಜಾವಾದಿ ಸಿದ್ದರಾಮಯ್ಯ ರವರು ಕರ್ನಾಟಕವನ್ನು ಗೂಂಡಾರಾಜ್ ಮಾಡಿದ್ದಾರೆ.
ಕಾಂಗ್ರೆಸ್ ಸಚಿವರು ಮತ್ತು ಶಾಕಸರು ಗೂಂಡಾಗಳನ್ನಿಟ್ಟು ದಬ್ಬಾಳಿಕೆ ಮಾಡುತ್ತಾರೆ. ಕೆಳ ಹಂತದಲ್ಲಿ ಕಾಂಗ್ರೆಸ್ ಮುಖಂಡರೇ ಗೂಂಡಾಗಳಾಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರೇ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್‌ನ ಗೂಂಡಾಗಳಿಗೆ ಪ್ರತ್ಯೇಕ ಕಾನೂನು ಲಾಗು ಮಾಡಲಾಗಿದೆಯೇ? ಎಂದು ಪ್ರಶ್ನಿಸಿದೆ.
ಬರಗಾಲದಿಂದ ರಾಜ್ಯದ ರೈತ ಸಮುದಾಯ ಒಟ್ಟಾಗಿ ಅನುಭವಿಸಿದ ನಷ್ಟ ₹20,000 ಕೋಟಿ. ಉತ್ತರ ಕರ್ನಾಟಕ ಭಾಗದಿಂದಂತೂ ದಾಖಲೆಯ ಪ್ರಮಾಣದಲ್ಲಿ ರೈತರು ಗುಳೆ ಹೋಗಿದ್ದೂ ಅಲ್ಲದೇ, ಅತಿಹೆಚ್ಚು ರೈತರ ಆತ್ಮಹತ್ಯೆಗಳಿಗೆ ಸಾಕ್ಷಿಯಾಗಿದೆ. ಜೀವನ್ಮರಣ ಹೋರಾಟದಲ್ಲಿ ರೈತರಿರುವಾಗ ಅವರ ಕೈ ಹಿಡಿಯುವುದು ಬಿಟ್ಟು ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲಿ ನಿರತವಾಗಿದೆ. ಇಂಥ ಪರಿಸ್ಥಿತಿಯಲ್ಲೂ ರೈತರನ್ನು ಕಡೆಗಣಿಸಿ, ಅಲ್ಪಸಂಖ್ಯಾತರಿಗೆ ₹10,000 ಕೋಟಿ ತೆಗೆದಿಟ್ಟ ಈ ಸರ್ಕಾರ ರೈತರ ಹೆಣದ ಮೇಲೆ ಓಲೈಕೆ ರಾಜಕಾರಣ ಮಾಡುತ್ತಿರುವುದು ದುರಾದೃಷ್ಟವಲ್ಲ, ದುರಂತವೇ ನಿಜ ಎಂದು ಬಿಜೆಪಿ ಹೇಳಿದೆ.












Click it and Unblock the Notifications