ಒಕ್ಕಲಿಗ ನಾಯಕನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು! ಕೊನೆಗೂ ಆ ನಾಯಕನಿಂದ ಅಧ್ಯಕ್ಷ ಸ್ಥಾನದ ಆಸೆ ಬಹಿರಂಗ
ಬೆಂಗಳೂರು, ಜುಲೈ 05: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಬಿಜೆಪಿ ಪಾಳಯದಲ್ಲಿ ನೂತನ ಸಾರಥಿ ಆಯ್ಕೆ ವಿಚಾರ ಚರ್ಚೆಯಾಗುತ್ತಿದೆ. ಹತ್ತು ಹಲವು ನಾಯಕರು ಅಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದಾರೆ.
ಹೌದು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಲವರ ಹೆಸರುಗಳು ಹರಿದಾಡುತ್ತಿರುವಾಗಲೇ ಮಾಜಿ ಸಚಿವ ಆರ್ ಅಶೋಕ್ ನವರು ರಾಜ್ಯಾಧದ್ಯಕ್ಷ ಸ್ಥಾನಕ್ಕೆ ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದೇನೆ ನೋಡೋಣ ಎಂದು ಹೇಳಿದ್ದು, ಒಂದು ರಾಜ್ಯಾಧ್ಯಕ್ಷ ಸ್ಥಾನಕ್ಕೆ 8 ರಿಂದ 10 ಜನ ನಾಯಕರು ರೇಸ್ ನಲ್ಲಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ವಿಪಕ್ಷ ನಾಯಕರ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ನಾವೆಲ್ಲ ಹೋಗಿ ಮಾತಾಡಿದ್ದೇವೆ. ನಮ್ಮ ಭಾವನೆಗಳನ್ನ ಹೇಳಿದ್ದೀವಿ
ನಮ್ಮ ರಾಷ್ಟ್ರಧ್ಯಕ್ಷರಾದ ನಡ್ಡಾ ಅವರಿಗೆ ವರದಿ ಕೊಟ್ಟಿದ್ದಾರೆ. ಸಂಜೆ ಒಳಗೆ ವಿಪಕ್ಷ ನಾಯಕ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದ ಅವರು, ನಾನು ವಿಪಕ್ಷ ನಾಯಕ ಸ್ಥಾನ ಕೇಳಿಲ್ಲ. ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದೇನೆ ನೋಡೋಣ ಎಂದು ಅಧ್ಯಕ್ಷ ಸ್ಥಾನದ ಬೇಡಿಕೆಯನ್ನ ಇಟ್ಟಿದ್ದಾರೆ.
ಕಾಂಗ್ರೆಸ್ ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ. ಬಿಜೆಪಿ ಕಚೇರಿ ಮುಂದೆ ಧರಣಿ ಮಾಡುತ್ತಿದ್ದಾರೆ, ಮಾನ ಮರ್ಯಾದೆ ಇದ್ರೆ ಐದು ಗ್ಯಾರಂಟಿ ಜಾರಿ ಮಾಡಬೇಕಿತ್ತು. ಎಲ್ಲದಕ್ಕೂ ಮೋದಿ ಮೋದಿ ಅಂತಾರೆ. ಇಬ್ಬಗೆ ನೀತಿ, ಕಾಂಗ್ರೆಸ್ ದಿವಾಳಿ ಆಗಿದೆ. ಘೋಷಣೆ ಮಾಡುವಾಗ ನಾವು 10 ಕೆಜಿ ಕೊಡುತ್ತೇವೆ ಎಂದು ಹೇಳಿದರು. ಆಗ ಜ್ಞಾನ ಇರಬೇಕಿತ್ತು, ಗ್ಯಾರಂಟಿ ಕಾರ್ಡ್ ನಲ್ಲಿ ಕೇಂದ್ರ ಸರ್ಕಾರ ಕೊಡುತ್ತೆ ಅಂತಾ ಹಾಕಿದ್ರಾ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಗ್ಯಾರಂಟಿಗಳ ಕುರಿತು ವಿಧಾನಸಭೆಯಲ್ಲಿ ಆರ್ ಅಶೋಕ್ ಮಾತನಾಡಿ, ಸಿದ್ದರಾಮಣ್ಣನವರು,ಗ್ಯಾರಂಟಿಗಳನ್ನು ಕೊಡೋದು ಶತ ಸಿದ್ದ ಅಂತಾರೆ. ಆದರೆ, ನಾಳೆ ಅಂತ ಬೋರ್ಡ್ ಬರೆದುಕೊಳ್ತಾರೆ. ಚುನಾವಣೆಗು ಮುನ್ನ 200 ಯುನಿಟ್ ಫ್ರೀ ಅಂದ್ರಿ, ಗ್ಯಾರಂಟಿ ಕಾರ್ಡ್ ಹಂಚುವಾಗ 70 ಯುನಿಟ್ ಅಂತಾ ಹೇಳಬೇಕಿತ್ತು. ಅದು ಬಿಟ್ಟು ಅಧಿಕಾರಕ್ಕೆ ಬಂದ ನಂತರ ಇಷ್ಟು ಯುನಿಟ್ ಅಂತಾ ಕಂಡಿಷನ್ ಹಾಕ್ತೀರಲ್ಲ. ಇದು ನಿಮ್ಮ ಮೋಸ ಅಲ್ವಾ..? ಎಂದು ಪ್ರಶ್ನಿಸಿದ್ದಾರೆ.
ಯುವ ನಿಧಿಯನ್ನು ರಾಹುಲ್ ಗಾಂಧಿ ಕೈಯಲ್ಲಿ ಮಾಡಿಸಿದಲ್ವಾ. ನಿರುದ್ಯೋಗಿ ಅಂತಾ ಹೇಳಿ, ಇವಾಗ 2022-23ಅಂತಿದ್ದೀರಿ. ಈ ಗ್ಯಾರಂಟಿಗಳಿಗೆ ಕಂಡಿಷನ್ ಹಾಕದೆ ಇದ್ರೆ ಲಕ್ಷ ಕೋಟಿ ಬೇಕು, ಅನ್ನಭಾಗ್ಯ, ಮುಖ್ಯಮಂತ್ರಿ ಗಳ ಫೆವರೀಟ್ ಯೋಜನೆ. ಅವಾಗ 10 ಕೆಜಿ ಅಂದು,ಇವಾಗ 5 ಕೆಜಿ ಮೋದಿಯನ್ನು ಕೇಳುತ್ತಿದ್ದಾರೆ. ಇದು ಮೋಸ ಅಲ್ವಾ..? ಎಂದರು.
ಪ್ರತಿ ಕುಟುಂಬದ ಮಹಿಳೆಯರಿಗೆ 2000 ರೂಪಾಯಿ ಅಂತ ಹೇಳಿದ್ರಿ. ಹೀಗೆ ಹೇಳಿ ಅತ್ತೆ ಸೊಸೆ ನಡುವೆ ಬೆಂಕಿ ಹಚ್ಚಿಬಿಟ್ರು, ಇವಾಗ ಪೋರ್ಟಲ್ ಹ್ಯಾಕ್ ಆಗಿದೆ ಎಂದು ಹೇಳಿದ್ದಾರೆ. ಮೋದಿ ಮೇಲೆ ಜವಾಬ್ದಾರಿಯುತ ಸಚಿವರು ಈ ರೀತಿ ಆರೋಪ ಮಾಡ್ತಾರಲ್ಲ..?ಇದರಿಂದ ಜನರಿಗೆ ಏನು ಸಂದೇಶ ಹೋಗುತ್ತಾರೆ. ಜನರೇ ಈ ಗ್ಯಾರಂಟಿಗಳ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಹೇಳಿದರು.












Click it and Unblock the Notifications