• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ 'ಕೂ'ಗೆ ಎಂಟ್ರಿ ಕೊಟ್ಟ ಬಿಜೆಪಿ

|
Google Oneindia Kannada News

ಬೆಂಗಳೂರು ನವೆಂಬರ್‌ 09: ಭಾರತೀಯ ಜನತಾ ಪಕ್ಷದ (ಬಿಜೆಪಿ) ಕರ್ನಾಟಕ ವಿಭಾಗವು ಬಹು-ಭಾಷಾ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ - ಕೂನಲ್ಲಿ ತನ್ನ ಖಾತೆಯನ್ನು ತೆರೆದಿದೆ. ಈ ಮೂಲಕ ಸ್ಥಳೀಯ ಜನರೊಂದಿಗೆ ಸಂವಾದ ನಡೆಸಲು ಮತ್ತು ರಾಜ್ಯದಲ್ಲಿ ಡಿಜಿಟಲ್ ಅಸ್ತಿತ್ವವನ್ನು ಬಲಪಡಿಸಲು ಮುಂದಾಗಿದೆ.

@BJP4Karnataka ಹ್ಯಾಂಡಲ್ ಮೂಲಕ ಪಕ್ಷದ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗುತ್ತಿದೆ. ಈಗಾಗಲೇ ಸಾಕಷ್ಟು ವಿಚಾರಗಳನ್ನು ಬಿಜೆಪಿ ಕರ್ನಾಟಕ ವೇದಿಕೆಯಲ್ಲಿ ಹಂಚಿಕೊಂಡಿದೆ. "ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಜಗತ್ತಿನ ಅತ್ಯಂತ ನೆಚ್ಚಿನ ಜನನಾಯಕನಾಗಿ ಹೊರಹೊಮ್ಮಿದ್ದಾರೆ. ಜಾಗತಿಕ ನಾಯಕರ ಅನುಮೋದನೆ ರೇಟಿಂಗ್‌ನಲ್ಲಿ ಜಗತ್ತಿನಾದ್ಯಂತದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರದ ದಿಗ್ಗಜ ನಾಯಕರ ಪೈಕಿ ಪ್ರಧಾನಿ ಮೋದಿ ಉನ್ನತ ಸ್ಥಾನದಲ್ಲಿದ್ದಾರೆ' ಎಂದು ಬಿಜೆಪಿ ಕರ್ನಾಟಕ ಕೂ ಮಾಡಿದೆ.

'ಬಿಜೆಪಿ ಕರ್ನಾಟಕ ನಮ್ಮ ಬಹುಭಾಷಾ ವೇದಿಕೆಗೆ ಬಂದಿರುವುದು ಸಂತೋಷಕರ. ಇದು ಸ್ಥಳೀಯ ಭಾರತೀಯ ಭಾಷೆಗಳಾದ್ಯಂತ ಅಭಿವ್ಯಕ್ತಿಯನ್ನು ಶಕ್ತಗೊಳಿಸುತ್ತದೆ. ಕರ್ನಾಟಕದ ಜನರು ಈಗ ತಮ್ಮ ನೆಚ್ಚಿನ ಪಕ್ಷದೊಂದಿಗೆ ನೇರವಾಗಿ ಚರ್ಚಿಸಬಹುದಾಗಿದೆ ಮತ್ತು ಪಕ್ಷದ ಕುರಿತ ಎಲ್ಲ ಮಾಹಿತಿಯನ್ನು ಅವರ ಮಾತೃಭಾಷೆಯಲ್ಲೇ ತಿಳಿದುಕೊಳ್ಳಬಹುದಾಗಿದೆ' ಎಂದು ಕೂ ವಕ್ತಾರರು ತಿಳಿಸಿದ್ದಾರೆ.

ದೇಸಿ ಆ್ಯಪ್ ಕೂ ಸಾಕಷ್ಟು ಜನಪ್ರಿಯತೆ ಗಳಿಸಿಕೊಳ್ಳುತ್ತಿದ್ದು, ಕ್ರೀಡಾತಾರೆಯರು , ಸಿನಿಮಾ ತಾರೆಯರು ಮತ್ತು ಕ್ಷೇತ್ರಗಳಾದ್ಯಂತದ ವ್ಯಕ್ತಿಗಳ ಜೊತೆಗೆ, ಕರ್ನಾಟಕದ ರಾಜಕೀಯ ನಾಯಕರು ಕನ್ನಡದಲ್ಲಿ 'ಕೂ' ಮಾಡುವ ಮೂಲಕ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ @bsbommai,, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ @bsybjp, ಮಾಜಿ ಪ್ರಧಾನಿ ಎಚ್ . ಡಿ ದೇವೇಗೌಡ @h_d_devegowda, ಕರ್ನಾಟಕ ಕಾಂಗ್ರೆಸ್ @inckarnataka ಮತ್ತು ಜನತಾ ದಳ @jds_official ಸೇರಿದಂತೆ ಈಗಾಗಲೇ ಕರ್ನಾಟಕದ ಅನೇಕ ಗಣ್ಯರು ಕೂ ಆ್ಯಪ್ ಪ್ರವೇಶಿಸಿದ್ದಾರೆ.

   ವಿರಾಟ್ & ರವಿಶಾಸ್ತ್ರಿ ಜೋಡಿ ಕ್ರಿಕೆಟ್ ಇತಿಹಾಸದಲ್ಲಿ ಸಾಧಿಸಿದ್ದೇನು? | Oneindia Kannada

   ಕೂ ಬಗ್ಗೆ: ಮಾರ್ಚ್ 2020ರಲ್ಲಿ 'ಕೂ' ಸ್ಥಾಪನೆಯಾಯಿತು. ಬಹುಭಾಷಾ ಮೈಕ್ರೋ ಬ್ಲಾಗಿಂಗ್ ವೇದಿಕೆಯಾಗಿ ಭಾರತೀಯ ಭಾಷೆಗಳಲ್ಲಿ, ಭಾರತದಾದ್ಯಂತ 15 ಮಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಹಲವಾರು ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಬಹುದು. ಭಾರತದಂತಹ ಕೇವಲ 10% ಇಂಗ್ಲಿಷ್ ಮಾತನಾಡುವ ದೇಶದಲ್ಲಿ, ಭಾರತೀಯ ಬಳಕೆದಾರರಿಗೆ ತಮ್ಮ ಸ್ವಂತ ಭಾಷೆಯ ಅನುಭವಗಳನ್ನು ನೀಡಲು ಮತ್ತು ಜನರನ್ನು ಸಂಪರ್ಕಿಸಲು ಸಹಾಯ ಮಾಡುವ ಸಾಮಾಜಿಕ ಮಾಧ್ಯಮ ವೇದಿಕೆಯ ಅವಶ್ಯಕತೆ ಇದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ ಕೂ ಒಂದು ವೇದಿಕೆಯನ್ನು ಒದಗಿಸುತ್ತದೆ.

   ಸೋಷಿಯಲ್ ಮೀಡಿಯಾ ಬಳಕೆಯಲ್ಲಿ ಪ್ರಾದೇಶಿಕತೆಗಿಂತ ಆಂಗ್ಲ ಭಾಷೆಯ ಪ್ರಾಬಲ್ಯತೆಯೇ ತೋರಿ ಬರುತ್ತಿದೆ. ಹೀಗಾಗಿ ಕನ್ನಡಿಗರಿಗೆ, ತಮ್ಮ ಮಾತೃಭಾಷೆಯಲ್ಲಿಯೇ ವ್ಯವಹರಿಸಲು ಸೋಷಿಯಲ್ ಫ್ಲಾಟ್ ಫಾರ್ಮ್ ಕಲ್ಪಿಸಿಕೊಂಡುವಂತ ಚಿಂತನೆ ಹೊಳೆಯಿತು. ಅದರ ಭಾಗವಾಗಿಯೇ ಅಭಿವೃದ್ಧಿಗೊಂಡಿದ್ದೇ ಕೂ ಆಪ್..

   ಇನ್ನೂ ಇದೇ ಯೋಜನೆಯಿಂದಲೇ ಕನ್ನಡಿಗರು ಕನ್ನಡದಲ್ಲಿಯೇ ವ್ಯವಹರಿಸುವಂತ ಸೋಷಿಯಲ್ ಮೀಡಿಯಾ ರಚನೆಯನ್ನು ಮಾಡಲಾಯ್ತು. ಇಲ್ಲಿ ಕೇವಲ ಮಾತೃಭಾಷೆಯಾದಂತ ಕನ್ನಡಲ್ಲಿಯೇ ವ್ಯವಹರಿಸುವಂತ ಆಯ್ಕೆಗಳನ್ನು ನೀಡಲಾಗಿದೆ. ಟ್ವಿಟರ್ ಮಾದರಿಯಲ್ಲಿಯೇ ಪೋಸ್ಟ್, ವೀಡಿಯೋ, ಪೋಟೋ ಕೂ ಆಪ್ ನಲ್ಲಿ ಬಳಕೆದಾರರು ಮಾಡಬಹುದಾಗಿದೆ.‌

   ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEITY), ಪತ್ರಿಕಾ ಮಾಹಿತಿ ಬ್ಯೂರೋ (PIB), ರೈಲ್ವೇ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಮೈಗೋವ್, ಡಿಜಿಟಲ್ ಇಂಡಿಯಾ, ಬಿ.ಎಸ್.ಎನ್.ಎಲ್ , ಇಂಡಿಯಾ ಪೋಸ್ಟ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ (NIELIT) Koo (ಕೂ) ನಲ್ಲಿ ಉಪಸ್ಥಿತರಿದ್ದಾರೆ.

   ಭಾರತದ 14 ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ರಾಜಕೀಯ ಪಕ್ಷಗಳ ರಾಜಕಾರಣಿಗಳು - ಪ್ರಾದೇಶಿಕ, ರಾಷ್ಟ್ರೀಯ - ಮತ್ತು ಮಾಧ್ಯಮ ಸಂಸ್ಥೆಗಳು ಕೂಡ Koo (ಕೂ) ನಲ್ಲಿ ಸಕ್ರಿಯವಾಗಿವೆ. Koo(ಕೂ) ಪ್ಲಾಟ್‌ಫಾರ್ಮ್ ಈಗ ಸರ್ಕಾರಿ ಇಲಾಖೆಗಳು ಮತ್ತು ಗಣ್ಯ ವ್ಯಕ್ತಿಗಳ ಆತಿಥ್ಯವನ್ನು ಹೊಂದಿದ್ದು ಅವರು ಈ ವೇದಿಕೆಯನ್ನು ಹಲವು ಭಾರತೀಯ ಭಾಷೆಗಳಲ್ಲಿ ತಮ್ಮ ಪ್ರಗತಿಯನ್ನು ಪ್ರದರ್ಶಿಸಲು ಮತ್ತು ಅಪ್ಡೇಟ್‌ಗಳನ್ನು ಹಂಚಿಕೊಳ್ಳಲು ಬಳಸುತ್ತಾರೆ.

   English summary
   The Karnataka wing of the Bharatiya Janata Party (BJP) eneters Micro Blogging Platform Koo to strengthen its Digital Presence.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X