ಬಿಜೆಪಿ ಕೋರ್ ಕಮಿಟಿ ಸಭೆ ಮಹತ್ವದ ನಿರ್ಣಯಗಳು
ಬೆಂಗಳೂರು, ಡಿಸೆಂಬರ್ 26 : ಬಿಜೆಪಿಯ ಪರಿವರ್ತನಾ ಯಾತ್ರೆ ಮುಗಿದ ವಿಧಾಸಭಾ ಕ್ಷೇತ್ರಗಳಲ್ಲಿ 'ನವಶಕ್ತಿ ಸಮಾವೇಶ'ವನ್ನು ನಡೆಸಲು ಕರ್ನಾಟಕ ಬಿಜೆಪಿ ತೀರ್ಮಾನಿಸಿದೆ.
ಡಾಲರ್ಸ್ ಕಾಲೋನಿಯಲ್ಲಿರುವ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಮಂಗಳವಾರ ಪಕ್ಷದ ಕೋರ್ ಕಮಿಟಿ ಸಭೆ ನಡೆಯಿತು. ಸಭೆಯಲ್ಲಿ ಹಲವು ಮಹತ್ವದ ತಿರ್ಮಾನಗಳನ್ನು ಕೈಗೊಳ್ಳಲಾಯಿತು.

ಪಕ್ಷದ ಪ್ರಧಾನ ಕಾರ್ಯದರ್ಶಿ, ವಕ್ತಾರ ಅರವಿಂದ ಲಿಂಬಾವಳಿ ಅವರು ಸಭೆಯ ಬಳಿಕ ವಿವರಗಳನ್ನು ನೀಡಿದರು. 'ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಡಿಸೆಂಬರ್ 31ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ' ಎಂದರು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳು
* ಡಿ.31ರಂದು ಅಮಿತ್ ಶಾ ಆಗಮನ. ಸಂಸದರು, ಶಾಸಕರ ಜೊತೆ ಅಮಿತ್ ಶಾ ಪ್ರತ್ಯೇಕ ಸಭೆ.
* ಪ್ರತಿ ಸಂಸದರಿಗೆ 2 ವಿಧಾನಸಭಾ ಕ್ಷೇತ್ರ, ಶಾಸಕರಿಗೆ ಅವರ ಕ್ಷೇತ್ರದ ಜೊತೆ ಪಕ್ಕದ ಕ್ಷೇತ್ರದ ಉಸ್ತುವಾರಿ ನೀಡಲಾಗಿತ್ತು. ಇದರ ಬಗ್ಗೆ ಅಮಿತ್ ಶಾ ಸಂಸದರು, ಶಾಸಕರ ಜೊತೆ ಮಾತುಕತೆ ನಡೆಸಲಿದ್ದಾರೆ.
* ಪಕ್ಷದ ನವ ಕರ್ನಾಟಕ ಪರಿವರ್ತನಾ ಯಾತ್ರೆ 170 ವಿಧಾನಸಭಾ ಕ್ಷೇತ್ರದಲ್ಲಿ ಪೂರ್ಣಗೊಂಡಿದೆ. ಈ ಕ್ಷೇತ್ರಗಳಲ್ಲಿ 'ನವಶಕ್ತಿ ಸಮಾವೇಶ' ನಡೆಸಲು ತೀರ್ಮಾನ.
* ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್‌ರಿಂದ ಮಹದಾಯಿ ಹೋರಾಟಗಾರರ ಭೇಟಿ












Click it and Unblock the Notifications