‘ಕಾಂಗ್ರೆಸ್‌ಗೆ ಲಕ್ಷ್ಮಿ ಕಂಟಕ’ ಅಂತಾ ಹೇಳಿದ್ದು ಯಾರು ಗೊತ್ತಾ?
ಕರ್ನಾಟಕದಲ್ಲಿ ಐಟಿ ದಾಳಿ ನಡೆದ ಮರು ಕ್ಷಣ ಬಿರುಗಾಳಿ ಸೃಷ್ಟಿಯಾಗಿದ್ದು, ದಾಳಿ ವೇಳೆ ಸಿಕ್ಕ ಕೋಟಿ ಕೋಟಿ ಹಣದ ಲೆಕ್ಕದ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ತಿಕ್ಕಾಟ ಜೋರಾಗಿದೆ. ಅದ್ರಲ್ಲೂ ಕಾಂಗ್ರೆಸ್ ವಿರುದ್ಧ ಇದೆ ವಿಚಾರ ಪ್ರಸ್ತಾಪ ಮಾಡಿ ಬಿಜೆಪಿ ಪದೇ ಪದೆ ಆರೋಪ ಮಾಡುತ್ತಿದೆ. ಈಗಲೂ 'ಕಾಂಗ್ರೆಸ್‌ಗೆ ಲಕ್ಷ್ಮಿ ಕಂಟಕ' ಎಂದು ಆರೋಪಿಸಿದೆ ಬಿಜೆಪಿ. ಯಾಕೆ ಗೊತ್ತಾ?
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮರು ಕ್ಷಣವೇ ಬಿಜೆಪಿ & ಕೈ ಪಾಳಯದ ನಡುವೆ ಕಿತ್ತಾಟವು ಶುರುವಾಗಿತ್ತು. ಒಬ್ಬರ ಮೇಲೆ ಮತ್ತೊಬ್ಬರು ಆರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ. ಈ ಮಧ್ಯೆ ಮುಂಬರುವ ಲೋಕಸಭಾ ಚುನಾವಣೆಗೂ ಬಿಜೆಪಿಗೆ ಇದೇ ದೊಡ್ಡ ಅಸ್ತ್ರವಾಗುತ್ತಿದೆ ಎನ್ನಬಹುದು. ಇಷ್ಟೆಲ್ಲ ತಿಕ್ಕಾಟದ ನಡುವೆ ಇಂದು ಮತ್ತೊಂದು ಗಂಭೀರ ಆರೋಪವನ್ನ ಕಾಂಗ್ರೆಸ್ ವಿರುದ್ಧ ಕಮಲ ಪಾಳಯ ಮಾಡಿದೆ. ಹಾಗಾದರೆ ಬಿಜೆಪಿ ಹೇಳಿದ್ದೇನು?

'ಕಾಂಗ್ರೆಸ್‌ಗೆ ಲಕ್ಷ್ಮಿ ಕಂಟಕ'
ರಾಜ್ಯ ಬಿಜೆಪಿ ಹೇಳಿರುವಂತೆ, 'ಕಾಂಗ್ರೆಸ್‌ಗೆ ಲಕ್ಷ್ಮಿ ಕಂಟಕ, ಪಂಚ ರಾಜ್ಯ ಚುನಾವಣೆಯ ಕಲೆಕ್ಷನ್ "ಲಕ್ಷ್ಮಿ" ಐಟಿ ಪಾಲಾಯ್ತು, ಬೆಳಗಾವಿಯಲ್ಲಿ "ಲಕ್ಷ್ಮಿ" ಜಗಳದಿಂದ ಲಕ್ಷ್ಮಿ ಕಂಟಕ ಎದುರಾಯ್ತು, ಅಂಬಿಕಾಪತಿ ಸಿಕ್ಕಿ ಬಿದ್ದ ನಂತರ ಕಾಂಗ್ರೆಸ್ಸಿನ "ಲಕ್ಷ್ಮಿ" ಪತಿಯರೆಲ್ಲಾ ಸ್ವಿಚ್ ಆಫ್, ತನ್ನ ಪಾಲಿನ "ಲಕ್ಷ್ಮಿ" ಗಾಗಿ ಸತೀಶ್ ಜಾರಕಿಹೊಳಿ ಹಠ ಹಿಡಿಯುವಂತಾಯಿತು, "ಲಕ್ಷ್ಮಿ" ಬೆನ್ನತ್ತಿ ಡಿ.ಕೆ. ಶಿವಕುಮಾರ್ ಬೆಳಗಾವಿಯಲ್ಲಿ ಠಿಕಾಣಿ ಹೂಡುವಂತಾಯಿತು #ATMSarkara ದಲ್ಲಿ "ಭ್ರಷ್ಟಾಚಾರದ ಲಕ್ಷ್ಮಿ" ತಾಂಡವವಾಡುತ್ತಿರುವುದಕ್ಕೆ ಕನ್ನಡಿಗರ ಬದುಕು ದುಸ್ತರವಾಗಿದೆ.' ಎಂದು ಆರೋಪ ಮಾಡಿದೆ ಕರ್ನಾಟಕ ಬಿಜೆಪಿ.
“ಕಾಂಗ್ರೆಸ್‌ಗೆ ಲಕ್ಷ್ಮಿ ಕಂಟಕ”
— BJP Karnataka (@BJP4Karnataka) October 18, 2023
✔️ ಪಂಚ ರಾಜ್ಯ ಚುನಾವಣೆಯ ಕಲೆಕ್ಷನ್ "ಲಕ್ಷ್ಮಿ" ಐಟಿ ಪಾಲಾಯ್ತು
✔️ ಬೆಳಗಾವಿಯಲ್ಲಿ "ಲಕ್ಷ್ಮಿ" ಜಗಳದಿಂದ ಲಕ್ಷ್ಮಿ ಕಂಟಕ ಎದುರಾಯ್ತು
✔️ ಅಂಬಿಕಾಪತಿ ಸಿಕ್ಕಿ ಬಿದ್ದ ನಂತರ ಕಾಂಗ್ರೆಸ್ಸಿನ "ಲಕ್ಷ್ಮಿ" ಪತಿಯರೆಲ್ಲಾ ಸ್ವಿಚ್ ಆಫ್
✔️ ತನ್ನ ಪಾಲಿನ "ಲಕ್ಷ್ಮಿ" ಗಾಗಿ ಸತೀಶ್ ಜಾರಕಿಹೊಳಿ ಹಠ…
'ಕಲೆಕ್ಷನ್‌ನಲ್ಲಿ ಇಬ್ಬರಿಗೂ ಒಂದೊಂದು ಪಾಲು'
ಹಾಗೇ ಮತ್ತೊಂದು ಟ್ವೀಟ್ ಮೂಲಕ, 'ಕೈ ಪಾರ್ಟಿಯಲ್ಲಿ ಒಳಗೊಳಗೇ ನಡೆಯುತ್ತಿರುವ ಹೊಯ್‌ಕೈಗೆ ಕೊನೆಯೇ ಇಲ್ಲ! ಬೆಳಗಾವಿ ಜಿಲ್ಲೆಯ ಕಲೆಕ್ಷನ್‌ನ ಪಾಲು ಹಂಚಿಕೆ ವಿಚಾರದಲ್ಲಿ ಈಗ ಸತೀಶ್ ಜಾರಕಿಹೋಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಜಗಳ ತಾರಕಕ್ಕೇರಿದೆ. ಇಬ್ಬರ ಜಗಳದಿಂದಾಗಿ, ಹೈಕಮಾಂಡ್‌ಗೆ ತಾವು ಕಳಿಸುವ ಕಲೆಕ್ಷನ್‌ನಲ್ಲಿ ಇಳಿಕೆಯಾಗಬಹುದು ಎಂಬುದು @DKShivakumar ಅವರಿಗೆ ಇರುವ ಭಯ. ಹಾಗಾಗಿ ಕಲೆಕ್ಷನ್‌ನಲ್ಲಿ ಇಬ್ಬರಿಗೂ ಒಂದೊಂದು ಪಾಲು ನೀಡಿ ದೆಹಲಿಗೆ ಕಳಿಸುವ ಪಾಲಿನಲ್ಲಿ ಯಾವುದೇ ಇಳಿಕೆಯಾಗದಂತೆ ನೋಡಿಕೊಳ್ಳುವ ಪ್ರಮುಖ ಜವಾಬ್ದಾರಿ ಡಿ.ಕೆ. ಸಾಹೇಬರ ಹೆಗಲಿನಲ್ಲಿದೆ.' ಎಂದು ಬಿಜೆಪಿ ಈಗ ಆರೋಪ ಮಾಡಿದೆ.
ಕೈ ಪಾರ್ಟಿಯಲ್ಲಿ ಒಳಗೊಳಗೇ ನಡೆಯುತ್ತಿರುವ ಹೊಯ್‌ಕೈಗೆ ಕೊನೆಯೇ ಇಲ್ಲ!
— BJP Karnataka (@BJP4Karnataka) October 18, 2023
ಬೆಳಗಾವಿ ಜಿಲ್ಲೆಯ ಕಲೆಕ್ಷನ್‌ನ ಪಾಲು ಹಂಚಿಕೆ ವಿಚಾರದಲ್ಲಿ ಈಗ ಸತೀಶ್ ಜಾರಕಿಹೋಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಜಗಳ ತಾರಕಕ್ಕೇರಿದೆ. ಇಬ್ಬರ ಜಗಳದಿಂದಾಗಿ, ಹೈಕಮಾಂಡ್‌ಗೆ ತಾವು ಕಳಿಸುವ ಕಲೆಕ್ಷನ್‌ನಲ್ಲಿ ಇಳಿಕೆಯಾಗಬಹುದು ಎಂಬುದು @DKShivakumar ಅವರಿಗೆ… pic.twitter.com/APHEo92UI5
ಒಟ್ನಲ್ಲಿ ಕಾಂಗ್ರೆಸ್ ಒಳ ಜಗಳದ ಅಸ್ತ್ರವನ್ನೇ ಪ್ರಯೋಗಿಸುತ್ತಾ, ಬಿಜೆಪಿ ಇದೀಗ ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೊಂದು ಆರೋಪ ಮಾಡಿದೆ. ಈ ಆರೋಪಗಳಿಗೆ ಈಗ ಕರ್ನಾಟಕ ಕಾಂಗ್ರೆಸ್ ಲೀಡರ್ಸ್ ಯಾವ ರೀತಿ ಪ್ರತಿಕ್ರಿಯೆ ನೀಡ್ತಾರೆ? ಇದು ಮುಂದೆ ಯಾವ ತಿರುವನ್ನು ಪಡೆಯುತ್ತೆ? ಅಂತಾ ಕಾದು ನೋಡಬೇಕಿದೆ.












Click it and Unblock the Notifications