ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಣ್ಯ ಇಲಾಖೆಯಲ್ಲಿ ತಾಂತ್ರಿಕ ಹುದ್ದೆಗಳಿವೆ, ಅರ್ಜಿ ಹಾಕಿ

By Mahesh
|
Google Oneindia Kannada News

ಬೆಂಗಳೂರು, ನ.7: ಅರಣ್ಯ ಇಲಾಖೆಗೆ ಸೇರಿರುವ ಜೀವ ವೈವಿಧ್ಯ ಮಂಡಳಿನಲ್ಲಿ ವಿವಿಧ ಹುದ್ದೆಗಳಿವೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಬಯೋ ಡೈವರ್ಸಿಟಿ ಬೋರ್ಡಿನಲ್ಲಿ ತಾಂತ್ರಿಕ ಹುದ್ದೆಗಳ ನೇಮಕಾತಿ ಆರಂಭವಾಗಿದ್ದು, ಆಸಕ್ತರು ಅರ್ಜಿ ಹಾಕಬಹುದು.

ಜೀವ ವೈವಿಧ್ಯ ಕಾಯ್ದೆ 2002ರ ಅನ್ವಯ ಕರ್ನಾಟಕ ಸರ್ಕಾರ 2003ರಲ್ಲಿ ಜೀವ ವೈವಿಧ್ಯ ಬೋರ್ಡ್ ಸ್ಥಾಪನೆ ಮಾಡಿದೆ. ಈ ಜೀವ ವೈವಿಧ್ಯ ಮಂಡಳಿಯ ಮುಖ್ಯ ಉದ್ದೇಶ ಜೀವ ವೈವಿಧ್ಯ ಸಂರಕ್ಷಣೆ, ದಾಖಲೀಕರಣ, ರಾಜ್ಯದ ಜೀವ ವೈವಿಧ್ಯ ತಾಣಗಳ ಗುರುತಿಸುವಿಕೆ ಹಾಗೂ ಅವುಗಳ ಅಭಿವೃದ್ಧಿ ಇತ್ಯಾದಿ. ಮತ್ಸ್ಯಧಾಮ, ವೃಕ್ಷಲಕ್ಷ ಆಂದೋಲನ, ವಿಶಿಷ್ಟ ತಳಿಗಳ ಸಂರಕ್ಷಣೆ, ಎಂಡೋಸಲ್ಫಾನ್ ನಿಷೇಧ, ವಿಶಿಷ್ಟ ಜಲಾಶಯ, ಕೆರೆಗಳು, ನದಿ ಮೂಲಗಳ ರಕ್ಷಣೆ ಈ ಮಂಡಳಿಯ ಕಾರ್ಯವಾಗಿದೆ.

ಜೀವ ವೈವಿಧ್ಯ ಮಂಡಳಿ ವಿವಿಧ ಹುದ್ದೆಗಳು:
1. ತಾಂತ್ರಿಕ ಎಕ್ಸಿಕ್ಯೂಟಿವ್ (ತೋಟಗಾರಿಕೆ)
2. ತಾಂತ್ರಿಕ ಎಕ್ಸಿಕ್ಯೂಟಿವ್ (ಕೃಷಿ)
3. ತಾಂತ್ರಿಕ ಎಕ್ಸಿಕ್ಯೂಟಿವ್ (ಪಶು ಸಂಗೋಪಣೆ/ ಮೀನುಗಾರಿಕೆ)
4. ಕನ್ಸಲ್ಟೆಂಟ್ (ಪಬ್ಲಿಕೇಷನ್ ಹಾಗೂ ಟ್ರೈನಿಂಗ್)

1. ತಾಂತ್ರಿಕ ಎಕ್ಸಿಕ್ಯೂಟಿವ್ (ತೋಟಗಾರಿಕೆ)
* ಪ್ರಥಮ ಶ್ರೇಣಿಯಲ್ಲಿ ಬಿಎಸ್ ಸಿ ಪದವಿ ಕೃಷಿ (Agronomy / Plant Breeding)
* ಬೆಳೆ ಉತ್ಪಾದನಾ ತಂತ್ರಜ್ಞಾನ, ಸಾಂಪ್ರದಾಯಿಕ ಬೆಳೆಗಳ ಬಗ್ಗೆ ಜ್ಞಾನ, ಕನ್ನಡ ಹಾಗೂ ಇಂಗ್ಲೀಷ್ ಭಾಷಾ ಜ್ಞಾನ, ಎಂಎಸ್ ಆಫೀಸ್ ಹಾಗೂ ಸಂವಹನ ಪರಿಣತಿ.
* ಒಂದು ವರ್ಷಗಳ ಕಾಲದ ಅನುಭವ.

ವಯೋಮಿತಿ : 32 ವರ್ಷ
ಸಂಬಳ: 18,000 ದಿಂದ 20,000 ರು ತನಕ

Karnataka Bio Diversity Board Technical Executive Jobs

2. ತಾಂತ್ರಿಕ ಎಕ್ಸಿಕ್ಯೂಟಿವ್ (ಕೃಷಿ)
* ಪ್ರಥಮ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿ ಕೃಷಿ (Agronomy / Plant Breeding)
* ಬೆಳೆ ಉತ್ಪಾದನಾ ತಂತ್ರಜ್ಞಾನ, ಸಾಂಪ್ರದಾಯಿಕ ಬೆಳೆಗಳ ಬಗ್ಗೆ ಜ್ಞಾನ, ಕನ್ನಡ ಹಾಗೂ ಇಂಗ್ಲೀಷ್ ಭಾಷಾ ಜ್ಞಾನ, ಎಂ ಎಸ್ ಆಫೀಸ್ ಹಾಗೂ ಸಂವಹನ ಪರಿಣತಿ
* ಒಂದು ವರ್ಷಗಳ ಕಾಲದ ಅನುಭವ.
ವಯೋಮಿತಿ : 32 ವರ್ಷ
ಸಂಬಳ: 18,000 ದಿಂದ 20,000 ರು ತನಕ

3. ತಾಂತ್ರಿಕ ಎಕ್ಸಿಕ್ಯೂಟಿವ್ (ಪಶು ಸಂಗೋಪಣೆ/ ಮೀನುಗಾರಿಕೆ)
* Faunal Taxonomy ಬಗ್ಗೆ ಪ್ರಾಯೋಗಿಕ ಪರಿಣತಿ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ.
* ಕನ್ನಡ ಹಾಗೂ ಇಂಗ್ಲೀಷ್ ಭಾಷಾ ಜ್ಞಾನ, ಎಂ ಎಸ್ ಆಫೀಸ್ ಹಾಗೂ ಸಂವಹನ ಪರಿಣತಿ
* ಒಂದು ವರ್ಷಗಳ ಕಾಲದ ಅನುಭವ.
ವಯೋಮಿತಿ : 32 ವರ್ಷ
ಸಂಬಳ: 18,000 ದಿಂದ 20,000 ರು ತನಕ

4. ಕನ್ಸಲ್ಟೆಂಟ್ (ಪಬ್ಲಿಕೇಷನ್ ಹಾಗೂ ಟ್ರೈನಿಂಗ್)

* ಪ್ರಾಣಿಶಾಸ್ತ್ರ ಅಥವಾ ಸಸ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ
* ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗಿಂತ ಕೆಳಗಿನ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರಬೇಕು.
* ವೈಜ್ಞಾನಿಕ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳ ಅನುಭವ ಹೊಂದಿರಬೇಕು.
* ಜೀವವೈವಿಧ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸ್ವಂತ ಲೇಖನಗಳನ್ನು ಪ್ರಕಟಿಸಿರಬೇಕು.
ಸಂಬಳ: 35,000 ರು

* ಎಲ್ಲಾ ಹುದ್ದೆಗಳಿಗೆ 11 ತಿಂಗಳ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ನಂತರ ಅವಧಿ ವಿಸ್ತರಣೆಯಾಗಲಿದೆ.

* ಅರ್ಜಿಗಳನ್ನು ಜೀವವೈವಿಧ್ಯ ಮಂಡಳಿ ವೆಬ್ ತಾಣದಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಲಿಂಕ್ ಇಲ್ಲಿದೆ

* ಅರ್ಜಿ ಸಲ್ಲಿಸಲು ಕೊನೆ ದಿನಾಂಕ 22/11/2014.

* ಸಂದರ್ಶನಗಳು 28/11/2014ರಂದು ನಡೆಸಲಾಗುತ್ತದೆ.

English summary
Karnataka Bio Diversity Board established by the Government of Karnataka to foster the institutional setup for documentation, sustainable use and development of the rich biodiversity of the state. The Board is now hiring Technical Executives and Consultants
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X