Karnataka Bandh: ರಾಜ್ಯಾದ್ಯಂತ ಮಾರ್ಚ್ 22ರಂದು ಶಾಲಾ-ಕಾಲೇಜುಗಳಿಗೆ ರಜೆ ಇರಲಿದೆಯಾ?: ಇಲ್ಲಿದೆ ಮಾಹಿತಿ
Karnataka Bandh: ಕನ್ನಡಿಗರ ಮೇಲೆ ಬೇರೆ ಭಾಷೆಯವರು ಅದರಲ್ಲೂ ಮರಾಠಿಗರು ಮೊದಲಿನಿಂದಲೂ ಖ್ಯಾತೆ ತೆಗೆಯುತ್ತಲೇ ಇದ್ದರು. ಇದು ಕೆಲ ವರ್ಷಗಳ ಕಾಲ ನಿಂತಿದ್ದು, ಇದೀಗ ಮತ್ತೆ ಕೆಲವು ದಿನಗಳಿಂದ ಶುರುವಾಗಿದೆ. ಕನ್ನಡ ಮಾತನಾಡಿದ್ದ ಎಂದಿದ್ದಕ್ಕೆ ಮರಾಠಿ ಪುಂಡರು ಕೆಎಸ್‌ಆರ್‌ಟಿಸಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ಪುಂಡಾಟ ಮೆರೆಯುತ್ತಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ಸಂಘಟನೆಗಳು ಕೂಡ ದೃಢ ನಿರ್ಧಾರವನ್ನು ತೆಗೆದುಕೊಂಡಿವೆ.
ಮರಾಠಿ ಮುಂಡರು ಕಂಡಕ್ಟರ್ ಮೇಲೆ ಹಲ್ಲೆ ಹಾಗೂ ಕರ್ನಾಟಕದ ಸಾರಿಗೆ ಬಸ್‌ಗಳ ಮೇಲೆ ಹಲ್ಲೆ ಮುಂದುವರೆಸಿದ್ದಾರೆ. ಇದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಈ ಹಿನ್ನೆಲೆ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಲಿವೆ ಎಂದು ತಿಳಿದುಬಂದಿದೆ. ಹಾಗಾದರೆ ಅಂದು ಏನಿರುತ್ತದೆ? ಏನಿರುವುದಿಲ್ಲ? ಅದರಲ್ಲೂ ಶಾಲಾ-ಕಾಲೇಜುಗಳು ತೆರೆಯುತ್ತವೆಯೇ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಯಾವೆಲ್ಲಾ ಸೌಲಭ್ಯಗಳು ಇರಲಿವೆ?: ಮಾರ್ಚ್ 22ರಂದು ಹಾಲು, ತರಕಾರಿ, ಮೆಡಿಕಲ್, ಆ್ಯಂಬುಲೆನ್ಸ್ ಸೇವೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೌಲಭ್ಯವನ್ನು ಒದಗಿಸುತ್ತದೆ ಎಂದು ಎಂದು ತಿಳಿದುಬಂದಿದೆ.
ಯಾವೆಲ್ಲಾ ಸೌಲಭ್ಯಗಳು ಇರೋದಿಲ್ಲ?: ಅಗತ್ಯ ಸೌಲಭ್ಯಗಳ ಹೊರತಾಗಿ ಬಸ್, ಮೆಟ್ರೋ, ಆಟೋ, ಕ್ಯಾಬ್‌ಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿದುಬಂದಿದೆ. ಇನ್ನು ಹೋಟೆಲ್ ಸಂಘಟನೆ ಇನ್ನೂ ಬೆಂಬಲದ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಆದರೆ ಚಿತ್ರರಂಗ ಕರ್ನಾಟಕ ಬಂದ್‌ಗೆ ಬೆಂಬಲ ನೀಡಿದ್ದು, ಈ ದಿನ ಥಿಯೇಟರ್‌ಗಳು ಕೂಡ ಓಪನ್ ಇರುವುದಿಲ್ಲ. ಅಲ್ಲದೇ ಆಟೋ ಸಂಘಟನೆಗಳು ಸಗ ಬಂದ್‌ಗೆ ಬೆಂಬಲ ನೀಡಿದೆ.
ಮಾರ್ಚ್ 22ರಂದು ಸಿನಿಮಾ ಹಾಗೂ ಸೀರಿಯಲ್ ಶೂಟಿಂಗ್ ಸಹ ಸ್ಥಗಿತಗೊಳಿಸುವ ಬಗ್ಗೆ ಚರ್ಚೆ ಮಾಡುವುದಾಗಿ ಫಿಲ್ಮ್ ಚೇಂಬರ್ ಅಧ್ಯಕ್ಷ ಎಂ ನರಸಿಂಹಲು ಹೇಳಿದ್ದಾರೆ. ಮಾರ್ಚ್ 3ರಂದು ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ಇನ್ನೂ ಸಿನಿಮಾ ಥಿಯೇಟರ್‌ಗಳು, ಚಿತ್ರಗಳ ಶೂಟಿಂಗ್ ಬಂದ್ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಸರ್ಕಾರಿ ಸಾರಿಗೆಗಳು ರಸ್ತೆಗಿಳಿಯಬಾರದು ಅಂತಲೂ ಕರೆ ನೀಡಲಾಗಿದೆ. ಆದ್ದರಿಂದ ಬಂದ್ ದಿನ ಸಾರಿಗೆ ಸೌಲಭ್ಯವೂ ಸಿಗುವುದು ಅಷ್ಟಕ್ಟೇ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಈ ದಿನ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ತೆರೆಯುತ್ತವೆಯಾ ಅಥವಾ ಇಲ್ಲವಾ ಎನ್ನುವ ಬಗ್ಗೆ ಇನ್ನೂ ಯಾವುದೇ ಸ್ಷಷ್ಟನೆ ಇಲ್ಲ. ಆದರೆ, ಮುಂದಿನ ದಿನಗಳಲ್ಲಿ ಈ ಬಗ್ಗೆ ಆದೇಶ ಹೊರಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಯಾಕಂದ್ರೆ, ಈ ದಿನ ಯಾವುದೇ ಸಾರಿಗೆ ಸೌಕರ್ಯಗಳು ಇಲ್ಲಿದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಬಹುದು. ಆದ್ದರಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಏನೆಂದು ಕೆಲವು ದಿನಗಳಲ್ಲಿ ಆದೇಶ ಹೊರಬೀಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ವಾಟಾಳ್ ನಾಗರಾಜ್ ಅವರು ಕನ್ನಡಕ್ಕಾಗಿ, ಕನ್ನಡಿಗರ ಮರ್ಯಾದೆಗಾಗಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ ಮಾಡಲು ನಿರ್ಧರಿಸಿದ್ದೇವೆ. ಒಂದು ಸಿಎಂ ಸಿದ್ದರಾಮಯ್ಯನವರು ಬಂದ್ ವಾಪಾಸ್ ಪಡೆಯಲು ಹೇಳಿದರೂ ನಾವು ಯಾವುದೇ ಕಾರಣಕ್ಕೂ ಹಿಂದೇ ಸರಿಯುವ ಮಾತಿಲ್ಲ. ಮಾರ್ಚ್ 22ರಂದು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದೆ ಎಂದು ಹೇಳಿದ್ದಾರೆ. ಕರ್ನಾಟಕ ಬಂದ್‌ಗೆ ಬೆಂಬಲ ನೀಡುವಂತೆ ಹಲವು ಸಂಘಟನೆಗಳಿಗೆ ಮನವಿ ಕೂಎ ಮಾಡಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications