ಕನ್ನಡ ಹೋರಾಟಗಾರರಿಗೆ ಕುವ್ವತ್ತು ಇಲ್ಲ : ಮದ್ರಾಸಿ
ಬೆಂಗಳೂರು, ಏ. 18 : ಕನ್ನಡ ಹೋರಾಟಗಾರರಿಗೆ ಕುವ್ವತ್ತು ಇಲ್ಲ, ಅವರ ಶೌರ್ಯವೇನಿದ್ದರೂ ಸ್ಥಳೀಯರ (ಕನ್ನಡೇತರರ) ಮೇಲೆ, ಬಹುರಾಷ್ಟ್ರೀಯ ಕಂಪನಿಗಳ ಮೇಲಲ್ಲ ಅಂತ ಟ್ವಿಟ್ಟರಲ್ಲಿ ಮದ್ರಾಸಿಯೊಬ್ಬ (@_Madarasi) ಗುಟುರು ಹಾಕುತ್ತಿದ್ದಾರೆ, ಕಾವೇರಿಗಾಗಿ ಹೋರಾಟ ನಡೆಸಿರುವ ಕನ್ನಡಿಗರನ್ನು ಕೆರಳಿಸುತ್ತಿದ್ದಾನೆ.
ಕರ್ನಾಟಕ ಬಂದ್ ಎನ್ನುವುದು ಕೇವಲ ಜೋಕ್ ಎನ್ನುವುದು ಕರ್ನಾಟಕದ ಜನರಿಗೆ ತಿಳಿಯಬೇಕು. ಕನ್ನಡ ಹೋರಾಟಗಾರರಿಗೂ, ಕಮಾಲ್ ಖಾನನಿಗೂ ಯಾವುದೇ ವ್ಯತ್ಯಾಸವಿಲ್ಲ, ಅವರು ಪ್ರಚಾರಪ್ರಿಯರು ಎಂದು ಹೇಳಿ, ಕಾವೇರಿಗಾಗಿ ರಕ್ತ ನೀಡಲೂ ಸಿದ್ಧ ಎಂದು ಬೀದಿಗಿಳಿದಿರುವ ಕನ್ನಡಪರ ಹೋರಾಟಗಾರರನ್ನು ಆತ ಅವಮಾನಿಸಿದ್ದಾನೆ. [ಕರ್ನಾಟಕ ಬಂದ್ ಲೈವ್ ಅಪ್ಡೇಟ್ಸ್]

ಆತನ ವರಾತ ಇಷ್ಟಕ್ಕೇ ಮುಗಿಯುವುದಿಲ್ಲ. ಕರ್ನಾಟಕ ಬಂದ್ ಇದ್ದರೂ ಎಲ್ಲ ಕೆಲಸ ಕಾರ್ಯಗಳು ಎಂದಿನಂತೆ ಜಾರಿಯಲ್ಲಿವೆ. ಕಷ್ಟ ಅನುಭವಿಸುತ್ತಿರುವವರು ಅಂಗಡಿ ಇಟ್ಟುಕೊಂಡವರು ಎಂದು ಟ್ವೀಟ್ ಮಾಡಿದ್ದಾನೆ. ಕಾವೇರಿ ವಿಷಯ ಬಂದಾಗ ಮಾತ್ರ ಹೋರಾಟಗಾರರು ಸಿಡಿದೇಳುತ್ತಾರೆ. ಇಲ್ಲದಿದ್ದರೆ ಏನನ್ನೂ ಮಾಡುವುದಿಲ್ಲ ಎಂದು ಕೆಣಕುತ್ತಿದ್ದಾನೆ.
Kannada organizations are no different than @kamaalrkhan , they are just attention seekers. #KarnatakaBandh
— CSK மதராஸி (@_Madarasi) April 18, 2015 ಕಾವೇರಿ ನೀರನ್ನು ಕುಡಿಯುತ್ತಿದ್ದರೂ ಕನ್ನಡಿಗರನ್ನು ಟೀಕಿಸುತ್ತಿರುವವರಲ್ಲಿ ಇವನೊಬ್ಬನೇ ಅಲ್ಲ. ಸತೀಶ್ ಕುಮಾರ್ ಎಂಬಾತ, ಕರ್ನಾಟಕದವರು ಮೂರ್ಖರು, ಕರ್ನಾಟಕಕ್ಕೆ ಶೇ.75ರಷ್ಟು ವಿದ್ಯುತ್ ತಮಿಳುನಾಡಿನ ವಿದ್ಯುತ್ ಘಟಕ ಮತ್ತು ನ್ಯೂಕ್ಲಿಯರ್ ಪ್ಲಾಂಟ್ ಗಳಿಂದ ಬರುತ್ತಿದೆ ಎಂದು ತನ್ನ ಆಕ್ರೋಶವನ್ನು ಹೊರಹಾಕಿದ್ದಾನೆ. [ಕರ್ನಾಟಕ ಬಂದ್ : ತರಹೇವಾರಿ ಟ್ವಿಟ್ಟರ್ ಟಿಪ್ಪಣಿ]
#KarnatakaBandh
Idiotic karnatka people
Nearly 75% of current for KA coming from TN power plants & Nuclear plant
when TN faces power cuts
— satishkumar (@satishbossn) April 18, 2015 ಇಂಥ ಕನ್ನಡ ವಿರೋಧಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಕಾವೇರಿ ರಕ್ಷಣಾ ಸಮಿತಿ, ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘ, ವಾಟಾಳ್ ನಾಗರಾಜ್, ಕನ್ನಡ ಸೇನೆ, ಕನ್ನಡ ಜಾಗೃತಿ ವೇದಿಕೆ ಮುಂತಾದ ಕನ್ನಡಕ್ಕಾಗಿ ಹೋರಾಟ ನಡೆಸುತ್ತಿರುವ ಸಂಘಟನೆಗಳು ಏನು ಉತ್ತರ ನೀಡುತ್ತವೆ?
ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ನೀರು ಸರಬರಾಜು ಮಾಡಲು ಅನುಕೂಲವಾಗುತ್ತದೆ, ಬೆಂಗಳೂರಿನ ಜನತೆಗೆ ಕುಡಿಯುವ ನೀರು ದೊರೆಯುತ್ತದೆ, ಬೆಂಗಳೂರಿನಲ್ಲಿಯೂ ಶೇ.25ರಷ್ಟು ತಮಿಳರು ವಾಸವಾಗಿದ್ದಾರೆ, ನೀರು ಸಿಕ್ಕರೆ ಅವರ ಬಾಯಾರಿಕೆಯೂ ಇಂಗುತ್ತದೆ ಎಂದು ಈ ಮೊಂಡು ವಾದಕರಿಗೆ ತಿಳಿದಿಲ್ಲವೆಂದು ಕಾಣುತ್ತದೆ.












Click it and Unblock the Notifications