Bachelor's Village: ಕರ್ನಾಟಕದಲ್ಲೊಂದು "ಬ್ಯಾಚುಲರ್ಸ್ ವಿಲೇಜ್": ಇಲ್ಲಿ ಅದೆಲ್ಲ ಇಲ್ಲವೇ ಇಲ್ಲ!
ಬೆಂಗಳೂರು, ಜುಲೈ 09: ಬ್ಯಾಚುಲರ್ಸ್ ಅಂದ ತಕ್ಷಣ ನೆನಪಿಗೆ ಬರೋದು ಮದುವೆ ಆಗಿರದವರು. ಕಂಕಣ ಬಲ ಕೂಡಿ ಬರದೇ ಮದುವೆ ಕಾಯುತ್ತಿರುವವರು. ಮದುವೆ ವಯಸ್ಕರು. ಇಂಥವರಿಗಾಗಿಯೇ ಕರ್ನಾಟಕ ರಾಜ್ಯದಲ್ಲಿ ಒಂದು ಗ್ರಾಮ ಇದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಕನಸುಗಳೇ ಎಲ್ಲರ ಜೀವಾಳ. ಇಂದಲ್ಲ ನಾಳೆ ಆ ಕನಸುಗಳು ನನಸಾಗುತ್ತವೆಯೋ ಎಂಬ ಆಸೆಯಿಂದ ಈ ಗ್ರಾಮದಲ್ಲಿ ಯುವ ಸಮೂಹ ಬದುಕುತ್ತಿದೆ.
ಕರ್ನಾಟಕದ ಪಶ್ಚಿಮ ಘಟ್ಟಗಳ ಸಾಲಿನ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಬಳಿ ಬೆಟ್ಟದ ತುದಿಯಲ್ಲಿರುವ 'ಬಿದರಥಾಳ' (Bidarathala) ಎಂಬ ಗ್ರಾಮವನ್ನು 'ಬ್ಯಾಚುಲರ್ಸ್ ವಿಲೇಜ್' ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತಿದೆ. ಈ ಹಳ್ಳಿಯ ಪುರುಷರಿಗೆ ವಧು ಹುಡುಕುವುದು ಸುಲಭ ಮಾತಾಗಿ ಉಳಿದಿಲ್ಲ. ಹಳ್ಳಿಯ ಸ್ಥಿತಿಗತಿ ನೋಡಿದಾಗ ಪೋಷಕರು ತಮ್ಮ ಹೆಣ್ಣುಮಕ್ಕಳ ಮದುವೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

ಬಿದರಥಾಳ ಗ್ರಾಮವು ರಾಷ್ಟ್ರೀಯ ಹೆದ್ದಾರಿ 73ರ ಸಮೀಪವೇ ಇದೆ. ಗ್ರಾಮಕ್ಕೆ ಪಕ್ಕದಲ್ಲೇ ಕೇವಲ 3 ಕಿ.ಮೀ. ದೂರದಲ್ಲಿ ಚಾರ್ಮಾಡಿ ಘಾಟ್ ಹೆದ್ದಾರಿ ಹೋಗುತ್ತದೆ. ಆದರೆ ಹಳ್ಳಿಗೆ ಹೋಗುವ ಮಾರ್ಗ ಕಷ್ಟಕರವಾಗಿದೆ. ಸರಕು ಸಾಗಾಣೆ, ತುರ್ತು ಸೇವೆಗಳು ಲಭಿಸುವುದು ಕಷ್ಟಸಾಧ್ಯವಾಗಿದೆ. ಇಂದಿನ 2025ರ ಎಐ ತಂತ್ರಜ್ಞಾನ ಕಾಲದಲ್ಲೂ ಒಂದು ಹಳ್ಳಿ ಮೂಲಸೌಲಭ್ಯಗಳನ್ನೇ ಕಂಡಿಲ್ಲ ಎಂದರೆ ನಂಬಲು ಅಸಾಧ್ಯವಾಗಿವೆ. ಈ ಪರಿಸ್ಥಿತಿಯಿಂದ ಇಲ್ಲಿನ ಯುವಕರು ಮದುವೆ ಆಗದೇ ಹಾಗೇ ಬ್ಯಾಚುಲರ್ಸ ಆಗಿಯೇ ಉಳಿಯುವಂತಾಗಿದೆ.
ಮೂಲಸೌಲಭ್ಯಗಳ ಏನೆಂದರೆ ಏನು ಗೊತ್ತಿಲ್ಲ ಹಳ್ಳಿ ಇದು ಎಂದರೆ ಸೂಕ್ತವೆನಿಸುತ್ತದೆ. ಈ ಬಿದರಥಾಳ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಇಲ್ಲ. ಶಾಲೆ, ಅಂಗನವಾಡಿ ಕೇಂದ್ರಗಳಿಲ್. ಹಳ್ಳಿ ಶೂನ್ಯ ಮೂಲಸೌಲಭ್ಯಗಳ ಹಳ್ಳಿ, ಕುಗ್ರಾಮ ಎಂದು ಕರೆಸಿಕೊಳ್ಳುತ್ತಿದೆ. ಶಾಲೆಗೆ ಮಕ್ಕಳು ಹತ್ತಿರ ಕೊಟ್ಟಿಗೆಹಾರಕ್ಕೆ ಹೋಗಬೇಕು. ಅದು ಗ್ರಾಮದಿಂದ 11 ಕಿ.ಮೀ ದೂರದಲ್ಲಿದೆ. ಹೀಗಾಗಿ ಕೆಲವು ಶಿಕ್ಷಣದಿಂದ ವಂಚಿತರಾದರೆ, ಕೆಲವರು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಸೇರಿಕೊಂಡಿದ್ದಾರೆ.

ಈ ಗ್ರಾಮದಲ್ಲಿ ಸುಮಾರು 10 ಕುಟುಂಬಗಳು ವಾಸಿಸುತ್ತಿವೆ. ಇಲ್ಲಿ ಸುಮಾರು ಒಂಬತ್ತು ಎಕರೆ ಭೂಮಿಯಲ್ಲಿ ವ್ಯವಹಾಸ ಮಾಡಿಕೊಂಡು ಇದ್ದಾರೆ. ಕಾಡಾನೆ, ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆದ ಬೆಳೆ ಕೈಗೆ ಸಿಗುತ್ತಿಲ್ಲ. ವರ್ಷಗಳಿಂದಲೂ ಈ ಸಮಸ್ಯೆಯಲ್ಲಿಯೇ ಇವರು ಬದುಕುತ್ತಿದ್ದಾರೆ.
ಇಲ್ಲಿನ ಯುವಕರ ಮದುವೆ ಕನಸು ನನಸಾಗುತ್ತಾ?
ಬಿದರಥಾಳದಲ್ಲಿ ಮದುವೆ ಆಗದೇ ಉಳಿದಿರುವ 25 ರಿಂದ 43 ವರ್ಷದ ಏಳು ಯುವಕರಿದ್ದಾರೆ. ಈ ಹಳ್ಳಿಯಲ್ಲಿ ರಸ್ತೆ, ವಿದ್ಯುತ್, ಶಾಲೆ, ಸಾರಿಗೆ, ವಿದ್ಯುತ್ ಹೀಗೆ ಅಗತ್ಯ ಮೂಲಸೌಕರ್ಯಗಳು ಮರಿಚಿಕೆ ಆಗಿದ್ದರಿಂದ ಇಲ್ಲಿನ ಯುವಕರಿಗೆ ಮದುವೆ ಪ್ರಸ್ತಾಪಗಳೇ ಬರುತ್ತಿಲ್ಲ. ಈ ಸಂಬಂಧ ಅಲ್ಲಿನ ಕುಟುಂಬಗಳು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಕೊಟ್ಟಿಗೆಹಾರದಲ್ಲಿ ಕ್ಯಾಂಟೀನ್ ನಡೆಸುತ್ತಿರುವ ಸ್ಥಳೀಯ ನಾಗೇಶ್ ಬಿ.ಆರ್. ಎಂಬುವರು ಮಾಹಿತಿ ನೀಡಿದ್ದಾರೆ.
ಗ್ರಾಮದ 70 ವರ್ಷದ ವೃದ್ಧೆ ಮೀನಾಕ್ಷಮ್ಮ, ತನ್ನ ಮಗ ಒಳ್ಳೆಯ ಉದ್ಯೋಗದಲ್ಲಿದ್ದು, ಮದುವೆಗಾಗಿ ಗ್ರಾಮ ಬಿಟ್ಟು ಹೋಗಬೆಕೆಂದು ಅವರು ಬಯಸುತ್ತಾರೆ. ನಾನು 50 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇನೆ. ನನ್ನ ಮಗ ಬದುಕನ್ನು ಹೊಸದಾಗಿ ಕಟ್ಟಿಕೊಳ್ಳಬೇಕು ಎಂಬುದು ನನ್ನ ಆಸೆ ಎಂದು ಅವರು ಅಳಲು ತೋಡಿಕೊಂಡರು. ಇದೆಲ್ಲ ನೋಡಿದರೆ ಇಲ್ಲಿನ ಯುವಕರ ಮದುವೆ ಕನಸು ಅದ್ಯಾವಾಗ ನನಸಾಗುತ್ತೋ ಎಂದು ಬ್ಯಾಚುಲರ್ಸ್ ಕುಟುಂಬಸ್ಥರು ಯೋಚಿಸುತ್ತಿದ್ದಾರೆ.
ಪುನರ್ವಸತಿ ಆಸೆ ಇದೆ, ಆದರೆ...
ಬಿದರಥಾಳ ಗ್ರಾಮದಿಂದ 15 ಕಿ.ಮೀ ದೂರದ ಬಣಕಲ್ ಗ್ರಾಮಕ್ಕೆ ಸರ್ಕಾರ ನಿವೇಶನಗಳನ್ನು ನೀಡಿದೆ. ಬಿದರಥಾಳದ ಜನರು ತಮ್ಮ ಕೃಷಿಭೂಮಿಯಿಂದ ದೂರ ಹೋಗಲು ಸಿದ್ಧರಿಲ್ಲ. ಅಲ್ಲಿಗೆ ಹೋದರೆ ಹೊಟ್ಟೆಯ ಗತಿ ಏನು ಎಂಬ ಚಿಂತೆಯಲ್ಲಿದ್ದಾರೆ. ಅವರಿಗೆ ಸರಿಯಾದ ಪುನರ್ವಸತಿ ಅಗತ್ಯವಿಲ್ಲ. ಈ ಬಗ್ಗೆ ಅನೇಕರು ಜಿಲ್ಲಾಡಳಿತವನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications