ಆಟೋ ಮೇಲಿನ ‘ಕನ್ನಡ’ ಬರಹ: ಪರ-ವಿರೋಧದ ಚರ್ಚೆ ಬಲು ಜೋರು!

ಬೆಂಗಳೂರು: ಕರ್ನಾಟಕದಲ್ಲಿ ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರು ಹಾಗೂ ಪರಭಾಷಿಕರ ನಡುವೆ ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಹೀಗೆ ಕನ್ನಡ ಬಂದರೂ ಮಾತನಾಡದೆ ಅಥವಾ ಕರ್ನಾಟಕದಲ್ಲಿ ಹತ್ತಾರು ವರ್ಷಗಳಿಂದ ಇದ್ದೂ ಕನ್ನಡ ಭಾಷೆಯ ಬಗ್ಗೆ ಅಗೌರವ ತೋರುವವರ ಸಂಖ್ಯೆ ಹೆಚ್ಚು. ಹೀಗೆ ಕಿರಿಕ್ ಮಾಡುವ ಪರಭಾಷಿಕರ ಬಗ್ಗೆ ಆಟೋ ಚಾಲಕನೊಬ್ಬ ಹಾಕಿಕೊಂಡ ಬರಹ ಈಗ ಎಲ್ಲೆಲ್ಲೂ ವೈರಲ್ ಆಗಿದೆ.

ಹೌದು, ಬೆಂಗಳೂರಿನ ಆಟೋ ಒಂದರ ಹಿಂದೆ 'You are in Karnataka, learn Kannada. Don't show your attitude, you f*******. You have come to beg here.' ನೀನು ಕರ್ನಾಟಕದಲ್ಲಿರುವೆ. ಕನ್ನಡ ಕಲಿ. ಅಹಂಕಾರ ತೋರಿಸಬೇಕಡ. ನೀನು ಇಲ್ಲಿಗೆ ಭಿಕ್ಷೆ ಬೇಡಲು ಬಂದಿದ್ದೀಯಾ ಎಂದು ಆಟೋದ ಹಿಂದೆ ಚಾಲಕರೊಬ್ಬರು ಬರಹ ಹಾಕಿದ್ದಾರೆ. ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪರ ವಿರೋಧದ ಚರ್ಚೆ ಕೂಡ ಆರಂಭವಾಗಿದೆ. ಒಂದು ಕಡೆ ಈ ರೀತಿ ಬರಹದ ಕುರಿತು ಪರಭಾಷಿಕರು ವಿರೋಧ ವ್ಯಕ್ತಪಡಿಸಿದರೆ, ಕನ್ನಡಿಗರು ಕೂಡ ಪ್ರತ್ಯುತ್ತರ ನೀಡುತ್ತಿದ್ದಾರೆ. ಈ ಮೂಲಕ ಆಟೋ ಹಿಂದಿನ ಬರಹದ ಫೋಟೋ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

Karnataka Auto Drivers Message Receives Outrages from Non-kannada Speaker

ಫೋಟೋಶಾಪ್ ಮಾಡಿ ಹಾಕಿದ್ದಾರಾ?

ಒಂದು ಕಡೆ ಈ ರೀತಿ ಆಟೋ ಹಿಂದೆ ಬರೆದಿರುವ ಬರವಣಿಗೆ ನಿಜ ಎಂದು ಹಲವರು ಈ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದು ಫೋಟೋ ಶಾಪ್ ಅಂತಿದ್ದಾರೆ. ಆಟೋದ ಹಿಂದೆ ಬರೆದ ಸಾಲುಗಳನ್ನು ರೋಷನ್​ ರೈ ಎಂಬುವರು ರೀ ಟ್ವೀಟ್ ಮಾಡಿದ್ದಾರೆ. ಹಾಗೇ, ಹೊರಗಿನಿಂದ ಬಂದವರನ್ನು ಇಷ್ಟೊಂದು ತುಚ್ಚವಾಗಿ ಕಾಣುವುದು ಸರಿಯಲ್ಲ. ಈ ರೀತಿ ಅತಿ ಕೆಟ್ಟ ಭಾಷೆ ಬಳಸುವುದು ಸರಿಯಲ್ಲ. ನಮ್ಮನ್ನು ಕೀಳಾಗಿ ನೋಡುವುದು ಸರಿಯಲ್ಲ ಎಂದು ರೋಷನ್​ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಈ ಪೋಸ್ಟ್‌ಗೆ ಕನ್ನಡಿಗರು ಕೂಡ ಉತ್ತರ ನೀಡಿದ್ದು, ಇದು ಫೋಟೋಶಾಪ್ ಮಹಿಮೆ ಅನ್ನೋ ಆರೋಪ ಕೂಡ ಕೇಳಿಬಂದಿದೆ.

ಭಾಷೆಗೆ ಗೌರವ ಕೊಟ್ಟು ನಿಮ್ಮತನನ ಉಳಿಸಿಕೊಳ್ಳಿ!

ರೋಷನ್​ ರೈ ಪೋಸ್ಟ್‌ಗೆ ರೀಪ್ಲೆ ನೀಡಿರುವ ಸಿಎಂ ಸುರೇಶ್ ಎಂಬುವವರು, 'ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ, ಕರ್ನಾಟಕದಲ್ಲಿ ಇದ್ದೀರಾ ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿಗೆ ಬೆಲೇಕೊಡಿ, ಬಿಕ್ಷೆ ಅನ್ನೋದು ತಪ್ಪು, ಆದರೆ ಬದುಕು ಹುಡುಕಿ ನಮ್ಮ ಊರಿಗೆ ಬಂದಿದ್ದೀರಾ ನಮ್ಮ ಭಾಷೆಗೆ ಗೌರವ ಕೊಟ್ಟು ನಿಮ್ಮತನನ ಉಳಿಸಿ ಕೊಳ್ಳಿ, ನಿಮ್ಮ ಭಾಷೆ ನಿಮ್ಮ ಮನೆಯಲ್ಲಿ ಇರಲಿ, ಯಾವುದೇ ಭಾಷೆ ಮೇಲೆ ಕೀಳರಿಮೆ ಬೇಡ.' ಎಂದಿದ್ದಾರೆ.

ಒಟ್ನಲ್ಲಿ ಫೋಟೋ ಒಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಫೈಟ್‌ಗೆ ವೇದಿಕೆ ಒದಗಿಸಿದೆ. ಈ ಬಗ್ಗೆ ಎರಡೂ ವೆರೈಟಿ ವೆರೈಟಿ ಚರ್ಚೆ ಶುರುವಾಗಿದ್ದು, ಕೆಲವರು ಇದನ್ನು ಸರಿ ಅಂತಿದ್ದಾರೆ. ಇನ್ನೂ ಕೆಲವರು ಇದು ತಪ್ಪು ಅಂತಿದ್ದಾರೆ. ಮತ್ತೆ ಕೆಲವರು ಫೋಟೋ ಶಾಪ್ ಮಾಡಿದ್ದಾರೆ ಅಂತಾ ಆರೋಪ ಮಾಡುತ್ತಿದ್ದಾರೆ. ಈ ಮೂಲಕ ಆಟೋ ಹಿಂದಿನ ಬರಹ ಎನ್ನಲಾಗುತ್ತಿರುವ ಫೋಟೋ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವುದು ಸುಳ್ಳಲ್ಲ. ಈ ವಿವಾದಕ್ಕೆ ತಾರ್ಕಿಕ ಅಂತ್ಯ ಯಾವಾಗ ಸಿಗುತ್ತೋ ಗೊತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+