ಕರ್ನಾಟಕ ಜಿಎಸ್ಟಿ ಮಸೂದೆಗೆ ಅವಿರೋಧವಾಗಿ ಒಪ್ಪಿಗೆ

Subscribe to Oneindia Kannada

ಬೆಂಗಳೂರು, ಜೂನ್ 15: ಕರ್ನಾಟಕ ವಿಧಾನಸಭೆಯಲ್ಲಿ ಜಿಎಸ್ಟಿ ಮಸೂದೆ ಅವಿರೋಧವಾಗಿ ಅನುಮೋದನೆ ಪಡೆದುಕೊಂಡಿದೆ.

ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ವಿಧೇಯಕ 2017ನ್ನು ಜೂನ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಮಂಡಿಸಿದ್ದರು. ಇದೀಗ ಒಂದು ವಾರಗಳ ನಂತರ ವಿಧಾನಸಭೆಯಲ್ಲಿ ಜಿಎಸ್ಟಿ ಮಸೂದೆ ಅನುಮೋದನೆ ಪಡೆದುಕೊಂಡಿದೆ.

ಜುಲೈ1 ರಿಂದ ಜಿಎಸ್‍ಟಿ ಜಾರಿಗೊಳ್ಳುವುದು ಅನುಮಾನ?

 Karnataka assembly unanimously passes state GST bill

ಕರ್ನಾಟಕದಲ್ಲಿ ವಿಧಾನಸಭೆಯಲ್ಲಿ ಜಿಎಸ್ಟಿ ಒಪ್ಪಿಗೆ ಪಡೆದುಕೊಳ್ಳುವುದರೊಂದಿಗೆ 25ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಜಿಎಸ್ಟಿಗೆ ಅನುಮೋದನೆ ನೀಡಿದಂತಾಗಿದೆ. ಇನ್ನೂ ಕೆಲವು ರಾಜ್ಯಗಳು ಜಿಎಸ್ಟಿಗೆ ಅನುಮೋದನೆ ನೀಡಲು ಬಾಕಿ ಇದ್ದು, ನಿಯಮಗಳ ಪ್ರಕಾರ ಸೆಪ್ಟೆಂಬರ್ 15ಕ್ಕೂ ಮೊದಲು ಅನುಮೋದನೆ ನೀಡಬೇಕಾಗಿದೆ.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ವಿಧಾನಸಭೆಯಲ್ಲಿ ಸದಸ್ಯರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಜಿಎಸ್ಟಿ ಮಂಡಳಿ ಸಭೆಯಲ್ಲಿ ಮಂಡಿಸಲಾಗುವುದು," ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, "ತಾವು ಜಿಎಸ್ಟಿ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಕಾರಣ ತಮಗೆ ಸಮಯವಿಲ್ಲ. ಅದಕ್ಕಾಗಿ ಕೃಷಿ ಸಚಿವ ಕೃಷ್ಣ ಬೈರೇಗೌಡರನ್ನು ನಿಯೋಜಿಸಿದ್ದೇನೆ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
With less than a month left for the rollout of the GST, the 'Karnataka Goods and Services Tax Bill, 2017' was unanimously passed by the state assembly here today. Before Karnataka, as many as 24 states and Union Territories had passed the State Goods and Services Tax (SGST) bill in their respective legislative assemblies.
Please Wait while comments are loading...