ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರದ ವಿಧಾನಸಭೆ ಕಲಾಪದ ಮುಖ್ಯಾಂಶಗಳು

|
Google Oneindia Kannada News

ಬೆಂಗಳೂರು, ಜ.29 : ಮಠಗಳನ್ನು ಸರ್ಕಾರದ ವಶಕ್ಕೆ ಪಡೆಯಲ್ಲ ಎಂದು ಸರ್ಕಾರದ ಸ್ಪಷ್ಟನೆ, ಬೀದರ್ ಅಭಿವೃದ್ಧಿ ನಾನು ಮಾಡುತ್ತೇನೆ ಅನುಮತಿ ಎಂದು ಸಿಎಂ ಕೆರಳಿಸಿದ ಅಶೋಕ್ ಖೇಣಿ, ಮಾಧ್ಯಮಗಳು ಹುಲಿಯಂತಾಗಿವೆ ಎಂದು ಬಣ್ಣಿಸಿದ ರಮೇಶ್ ಕುಮಾರ್, ಅಧಿಕಾರಿಗಳು ವಿಧಾನಸೌಧಕ್ಕೆ ಆಗಮಿಸದಿರುವುದಕ್ಕೆ ಬಿಜೆಪಿ ಗರಂ ಮುಂತಾದವು ಬುಧವಾರದ ವಿಧಾನ ಮಂಡಲ ಕಲಾಪದ ಹೈಲೈಟ್ಸ್.

ಬುಧವಾರದ ವಿಧಾನಸಭೆ ಕಲಾಪಗಳು ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಮಠಗಳನ್ನು ಸರ್ಕಾರ ತನ್ನ ವ್ಯಾಪ್ತಿಗೆ ತೆಗೆದುಕೊಳ್ಳುವ ಬಗ್ಗೆ ಸ್ಪಷ್ಟನೆ ನೀಡಬೇಕು, ಇಂತಹ ಪ್ರಸ್ತಾವನೆ ಸರ್ಕಾರದ ಮುಂದಿದ್ದರೆ ಅದನ್ನು ಕೈ ಬಿಡಬೇಕು ಎಂದು ಆಗ್ರಹಿಸಿದವು. ಪ್ರತಿಪಕ್ಷಗಳಿಗೆ ಉತ್ತರ ನೀಡಿದ ಮುಜರಾಯಿ ಖಾತೆ ಸಚಿವ ಪ್ರಕಾಶ್ ಹುಕ್ಕೇರಿ, ಮಠಗಳನ್ನು ಸರ್ಕಾರದ ವಶಕ್ಕೆ ಪಡೆಯುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದರು. [ಮಠಗಳು ಸರ್ಕಾರದ ವಶಕ್ಕಿಲ್ಲ]

Vidhana Soudha

ಅಟಜಿ ಕೇಂದ್ರಗಳಲ್ಲಿ ಪಹಣಿ ವಿತರಣೆ : ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ಜುಲೈನಿಂದ ಇದುವರೆಗೆ 50 ಲಕ್ಷ ಪಹಣಿಗಳನ್ನು ವಿತರಣೆ ಮಾಡಲಾಗಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ. ಪ್ರತಾಪ ಚಂದ್ರಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಹಣಿ ಪತ್ರಗಳಿಗೆ ಸಿಂಧುತ್ವವನ್ನು ಮಿತಿಗೊಳಿಸಿರುವುದರಿಂದ ನೆಮ್ಮದಿ ಕೇಂದ್ರಗಳನ್ನು ಇ-ಗೌರನೆನ್ಸ್ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸಿದ ನಂತರ ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ : ಸರ್ಕಾರ ಅಡಿಕೆ ಬೆಳೆಗಾರರ ಹಿತ ಕಾಪಾಡಲು ಸಿದ್ಧವಾಗಿದೆ. ಅಡಿಕೆ ನಿಷೇಧದ ಕುರಿತು ಸುಪ್ರೀಂಕೋರ್ಟ್ ನಲ್ಲಿರುವ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ಹಿರಿಯ ವಕೀಲರನ್ನು ನೇಮಕ ಮಾಡಲಾಗಿದೆ ಎಂದು ಸಚಿವ ಶಾಮನೂರು ಶಿವಶಂಕರಪ್ಪ ಪರವಾಗಿ ಸಚಿವ ರಮಾನಾಥ ರೈ ಸನದಕ್ಕೆ ಉತ್ತರ ನೀಡಿದ್ದಾರೆ. ಗಣೇಶ್ ಕಾರ್ನಿಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇಶ ಹಾಗೂ ಕರ್ನಾಟಕದಲ್ಲಿ 2.72 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 3.66 ಟನ್ ಅಡಿಕೆ ಉತ್ಪಾದಿಸಲಾಗುತ್ತಿದೆ. ಅಡಿಕೆ ನಿಷೇಧವಾಗುತ್ತದೆ ಎಂಬ ಆತಂಕ ಬೆಳೆಗಾರರಿಗೆ ಬೇಡ ಎಂದು ತಿಳಿಸಿದರು.

ಮೂಲಭೂತ ಸೌಕರ್ಯ ಒದಗಿಸಲು ವಿಶ್ವಬ್ಯಾಂಕ್ ನೆರವು : ಗ್ರಾಮೀಣ ಭಾಗದಲ್ಲಿನ ಹರಿಜನರ ಕಾಲೋನಿ ಮತ್ತು ಹಿಂದುಳಿದ ವರ್ಗದವರ ವಸತಿ ಪ್ರದೇಶಗಳ ಬಳಿ ಒಳಚರಂಡಿ ನಿರ್ಮಿಸಲು ವಿಶ್ವಬ್ಯಾಂಕ್ ನೆರವು ಪಡೆಯಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ವಿಧಾನಸಭೆಗೆ ತಿಳಿಸಿದರು. ಕರ್ನಾಟಕ ಮಕ್ಕಳ ಪಕ್ಷದ ಅಶೋಕ್ ಖೇಣಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಳಚರಂಡಿ ಕಾಮಗಾರಿಯ ಪೈಪ್‌ಲೈನ್ ಹಾಗೂ ತೊಟ್ಟಿಗಳ ಮುಕ್ತಾಯದ ಬಗ್ಗೆ ವ್ಯವಸ್ಥಿತವಾದ ಯೋಜನೆಯಿಲ್ಲ ಆದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಒಳಚರಂಡಿ ಮಾರ್ಗಗಳ ಸಮಸ್ಯೆ ಉಂಟಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಒಳಚರಂಡಿ ನಿರ್ಮಿಸಲು ವಿಶ್ವಬ್ಯಾಂಕ್ ಸಹಕಾರ ಪಡೆಯಲಾಗುತ್ತದೆ ಎಂದು ಹೇಳಿದರು.

English summary
10 day Karnataka Assembly session, Bangalore. What happened in the Assembly today?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X