ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಷಾರ್! ಇನ್ಮೇಲೆ ಪರೀಕ್ಷೆಯಲ್ಲಿ ಕಾಪಿ ಹೊಡೆದ್ರೆ 3 ವರ್ಷ ಡಿಬಾರ್ !!

ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಹಾಗೂ ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಡೆಗಟ್ಟುವ ಸಲುವಾಗಿ ಹೆಜ್ಜೆಯಿಟ್ಟ ರಾಜ್ಯ ಸರ್ಕಾರ

|
Google Oneindia Kannada News

ಬೆಂಗಳೂರು, ಫೆಬ್ರವರಿ 13: ಪ್ರಶ್ನೆ ಪತ್ರಿಕೆ ಸೋರಿಕೆ ಶಿಕ್ಷೆ ಹಾಗೂ ಪರೀಕ್ಷಾ ವೇಳೆ ನಕಲು ಶಿಕ್ಷೆ ವಿಚಾರಗಳಿಗೆ ಸಂಬಂಧಪಟ್ಟ ಮಂಡಿಸಲಾದ ನೂತನ ವಿಧೇಯಕವನ್ನು ವಿಧಾನಸಭೆ ಸೋಮವಾರ (ಫೆ. 13) ಅನುಮೋದನೆ ನೀಡಿದೆ.

ಮಸೂದೆಯಂತೆ, ಪರೀಕ್ಷೆಯ ವೇಳೆ ನಕಲು ಮಾಡುವ ವಿದ್ಯಾರ್ಥಿಯನ್ನು ಮೂರು ವರ್ಷ ಡಿಬಾರ್ ಮಾಡುವ ಕಠಿಣ ಕ್ರಮವನ್ನೂ ಅಳವಡಿಸಲಾಗಿದೆ. ಇನ್ನು, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ಕಾಲೇಜಿನ ಮಾನ್ಯತೆಯನ್ನು ಮೂರು ವರ್ಷ ರದ್ದುಗೊಳಿಸಲಾಗುತ್ತದೆ.

Karnataka Assembly pass the bill to bar three years for those who caught in malpractice

ಇತ್ತೀಚೆಗೆ, ಎಸ್ಎಸ್ಎಲ್ ಸಿ ಹಾಗೂ ಪಿಯುಪಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಹಿಂದೆಂದೂ ಕಾಣದ ಮಟ್ಟಕ್ಕೆ ಸೋರಿಕೆಯಾಗಿ ಇಡೀ ಸರ್ಕಾರವೇ ಸಾರ್ವಜನಿಕರ ಮುಂದೆ ತಲೆತಗ್ಗಿಸುವಂತಾಗಿತ್ತು. ಅತ್ಯುತ್ತಮ ಶೈಕ್ಷಣಿಕ ಪರಿಸರ ಹೊಂದಿರುವ ಕಾರಣಕ್ಕಾಗಿ ರಾಷ್ಟ್ರಮಟ್ಟದಲ್ಲಿ ಪ್ರತಿಷ್ಠೆ ಹೊಂದಿರುವ ಕರ್ನಾಟಕಕ್ಕೆ ಇದರಿಂದ ಮಸಿಬಳಿದಂತಾಗಿತ್ತು.

ಈ ಹಿನ್ನೆಲೆಯಲ್ಲಿ, ಇಂಥ ಅಕ್ರಮಗಳನ್ನು ನಿಲ್ಲಿಸಲು ರಾಜ್ಯ ಸರ್ಕಾರ ನೂತನ ಮಸೂದೆಯನ್ನು ಮಂಡಿಸಲು ನಿರ್ಧರಿಸಿತ್ತು.

English summary
A new bill to curb malpractice during examinations and question paper leakage racket has been passed by Karnataka Assembly on February 13th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X