'ಆರೋಗ್ಯ ಇಲಾಖೆ ಎಂದರೆ ತೆಲುಗು ಸಿನಿಮಾದ ನರಕ'

Written By:
Subscribe to Oneindia Kannada

ಬೆಂಗಳೂರು, ಜುಲೈ, 04: ಕರ್ನಾಟಕದ ವಿಧಾನಸಭೆ ಅಧಿವೇಶನ ಸೋಮವಾರ ಆರಂಭವಾಗಿದೆ. ಮೊದಲ ದಿನವೇ ವಿಪಕ್ಷಗಳು ಆಡಳಿತ ಪಕ್ಷದ ಮೇಲೆ ಮುಗಿಬಿದ್ದಿವೆ. ಈಶ್ವರಪ್ಪ ಅವರನ್ನು ಸಭಾನಾಯಕ ಎಂದ ಆಂಜನೇಯ, ಆರೋಗ್ಯ ಇಲಾಖೆ ನರಕದಂತಿದೆ ಎಂದು ಸ್ವತಃ ಹೇಳಿದ ಆರೋಗ್ಯ ಸಚಿವ ರಮೇಶ್ ಕುಮಾರ್ ಇದು ಅಧಿವೇಶನದ ಮೊದಲ ದಿನದ ಹೈಲೈಟ್ಸ್.

ಬಿಡಿಎ ಕರ್ಮಕಾಂಡದಲ್ಲಿ ಎಲ್ಲವನ್ನು ಸರಿಯಾಗಿ ಮಾಡಿದ್ದಾರೆ ಎಂದು ವ್ಯಂಗವಾಡಿದ ಶಾಸಕ ಎಸ್ ಆರ್ ವಿಶ್ವನಾಥ್, ಬಿಡಿಎ ಕರ್ಮಕಾಂಡಕ್ಕೆ ನೀವೇ ಕಾರಣ ಎಂದು ಬಿಜೆಪಿ ಮೇಲೆ ಆರೋಪ ಮಾಡಿದ ಸಿದ್ದರಾಮಯ್ಯ. ಎಲ್ಲವನ್ನು ತನಿಖೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ ಜೆ ಜಾರ್ಜ್... ಇವು ವಿಧಾನಸಭೆಯ ಹೈಲೈಟ್ಸ್.[3 ಪಕ್ಷಗಳ ಅತೃಪ್ತಿಯ ಹೊಗೆಯ ನಡುವೆ, ಸದನದಲ್ಲೂ ಸಿದ್ದು ಮೇಲುಗೈ?]

karnataka

ಇಂದಿನಿಂದ 9 ದಿನಗಳ ಕಾಲ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಆರಂಭಗೊಂಡಿದೆ. ಬಿಡಿಎ ಸಂಸ್ಥೆ ಭ್ರಷ್ಟಾಚಾರದ ಕೂಪವಾಗಿದೆ. ಹನುಮಂತಯ್ಯ ಎಂಬುವರ ಹೆಸರಿನಲ್ಲಿಯೇ 45 ಸೈಟ್ ಗಳಿವೆ. ಇದು ಹೇಗೆ ಸಾಧ್ಯ ಎಂದು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಪ್ರಶ್ನೆ ಮಾಡಿದರು.[ಅಕ್ಕಪಕ್ಕದಲ್ಲೇ ಕಾಣಿಸಿಕೊಂಡ ಬಿಎಸ್‌ವೈ ಮತ್ತು ಈಶ್ವರಪ್ಪ]

" ಹಿಂದೆ ನಾನು ತೆಲಗು ಸಿನಿಮಾ ನೋಡುತ್ತಿದ್ದೆ. ಅಲ್ಲಿ ನರಕ ಅಂದರೆ ಹೇಗಿರುತ್ತದೆ ಎಂದು ತೋರಿಸುತ್ತಿದ್ದರು. ಸದ್ಯದ ನಮ್ಮ ಆರೋಗ್ಯ ಇಲಾಖೆ ಸ್ಥಿತಿಯೂ ಹಾಗೇ ಇದೆ. ಇದನ್ನು ಬದಲಾವಣೆ ಮಾಡಲೇಬೇಕು" ಎಂದು ಸ್ವತಃ ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದರು.

ಪೇಚಿಗೆ ಸಿಲುಕಿದ ಆಂಜನೇಯ
ಬಾಯಿತಪ್ಪಿ ವಿಪಕ್ಷ ನಾಯಕ ಈಶ್ವರಪ್ಪ ಅವರನ್ನು ಸಭಾನಾಯಕ ಎಂದು ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಹೇಳಿದರು. ಆಗ ಈಶ್ವರಪ್ಪ 'ಸಭಾನಾಯಕ ಅಲ್ಲಾರಿ, ಪ್ರತಿಪಕ್ಷ ನಾಯಕ' ಎಂದು ಹೇಳಿ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bengaluru: Karnataka assembly Monsoon session started on 4th July 2016. Number of issues like BDA contraption, Health Department Structure discussed.
Please Wait while comments are loading...