ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯ ಕಲಾಪಕ್ಕೆ ಚಾಲನೆ
ಬೆಂಗಳೂರು, ಮೇ 19: ಬಹುಮತ ಯಾಚನೆ ನಡೆಯಲಿರುವ ಮಧ್ಯಾಹ್ನದ ಕಲಾಪ ಆರಂಭವಾಗಿದೆ.
ಬೆಳಗಿನ ಅವಧಿ ಬಳಿಕ ಮಧ್ಯಾಹ್ನ 3.30ಕ್ಕೆ ಕಲಾಪವನ್ನು ಮುಂದೂಡಲಾಗಿತ್ತು. ನಿಗದಿತ ಅವಧಿಗೆ ಆರಂಭವಾದ ಕಲಾಪದಲ್ಲಿ ಬಾಕಿ ಉಳಿದ 1 1 ಶಾಸಕರು ಪ್ರತಿಜ್ಞಾವಿಧಿ ಸ್ವೀಕರಿಸುವ ಕಾರ್ಯ ನಡೆಯಿತು.
ಬೆಳಗಿನ ಅವಧಿಯಲ್ಲಿ 210 ಶಾಸಕರು ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ಬೆಳಿಗ್ಗೆ ಪ್ರಮಾಣವಚನ ಸ್ವೀಕಾರ ಮಾಡಬೇಕಿದ್ದ ಕಾಂಗ್ರೆಸ್ ಶಾಸಕರಾರ ಪ್ರತಾಪ್ ಗೌಡ ಪಾಟೀಲ ಮತ್ತು ಆನಂದ್ ಸಿಂಗ್ ಗೈರುಹಾಜರಾಗಿದ್ದರು. ಮಧ್ಯಾಹ್ನದ ಕಲಾಪದ ವೇಳೆಗೆ ಇಬ್ಬರೂ ವಿಧಾನಸಭೆ ತಲುಪಿದ್ದರಿಂದ ಅವರ ಹೆಸರನ್ನು ಮತ್ತೆ ಕರೆದು ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಶಾಸಕರ ಪ್ರತಿಜ್ಞಾವಿಧಿ ಸ್ವೀಕಾರ ಬೆಳಗಿನ ಅವಧಿಯಲ್ಲಿ ಬಾಕಿ ಉಳಿದಿತ್ತು. ಜಿ.ಟಿ. ದೇವೇಗೌಡ, ಸೋಮಶೇಖರ ರೆಡ್ಡಿ, ಎನ್. ಮಹೇಶ್, ಆರ್. ನರೇಂದ್ರ, ಸಿ.ಎಸ್. ನಿರಂಜನಕುಮಾರ್ ಸೇರಿದಂತೆ ಉಳಿದ ಶಾಸಕರು ಪ್ರಮಾಣವಚನ ಸ್ವೀಕರಿಸಿದರು.












Click it and Unblock the Notifications