ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವನಿಗೆ ಪ್ಯಾಂಟ್‌ ಬಿಚ್ಚಲು ನಾನು ಹೇಳಿದ್ನಾ: ಮಂಚದ ವಿಚಾರ ಕೆಣಕಿದ ಡಿಕೆಶಿ- ಇದಕ್ಕೆ ಜಾರಕಿಹೊಳಿ ಹೇಳಿದ್ದೇನು?

ಜಾರಕಿಹೊಳಿಗೆ ಪ್ಯಾಂಟ್ ಬಿಚ್ಚಲು ನಾನು ಹೇಳಿದ್ನಾ ಎಂದು ಡಿ ಕೆ ಶಿವಕುಮಾರ್‌ ಕೇಳಿದ್ದಾರೆ. ಡಿಕೆಶಿಯನ್ನು ಮುಗಿಸುತ್ತೇನೆಂದು ಜಾರಕಿಹೊಳಿ ತಿಳಿಸಿದ್ದಾರೆ. ಲಂಚ- ಮಂಚದ ವಿಚಾರ ರಾಜ್ಯ ರಾಜಕಾರಣದಲ್ಲಿ ಮತ್ತೆ ಮುನ್ನೆಲೆಗೆ ಬಂದಿವೆ. ಈ ಇಬ್ಬರು ನಾಯಕರು ಹೇಳಿದ್ದೇನು? ಅದರ

|
Google Oneindia Kannada News

ಬೆಂಗಳೂರು, ಜನವರಿ 25: ರಾಜ್ಯ ವಿಧಾನಸಭೆ ಚುನಾವಣೆ ಕೆಲ ತಿಂಗಳಷ್ಟೇ ಬಾಕಿ ಇವೆ. ಈ ಸಮಯದಲ್ಲಿ ರಾಜಕೀಯ ನಾಯಕರ ನಡುವಿನ ವಾಗ್ಯುದ್ಧ ತಾರಕಕ್ಕೆ ಏರಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿವೆ. ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತರಿಗೆ ಬಿಜೆಪಿ ದೂರು ದಾಖಲಿಸಿದೆ. ಇನ್ನು ಕಾಂಗ್ರೆಸ್‌ ನಾಯಕರು ಪಾರ್ಟಿ ಪರ್ಸೆಂಟ್‌ ಸರ್ಕಾರವೆಂದು ಬೊಮ್ಮಾಯಿ ಸರ್ಕಾರದ ವಿರುದ್ಧ ಆರೋಪಿಸುತ್ತಿದ್ದಾರೆ. ಇನ್ನು ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರ ನಡುವೆ ಆರೋಪ- ಪ್ರತ್ಯಾರೋಪಗಳು ಮುಂದುವರಿದಿವೆ. ಈ ಸಂದರ್ಭದಲ್ಲಿ ನಾಯಕರು ತಮ್ಮ ನಾಲಗೆಯನ್ನು ಹರಿಬಿಟ್ಟಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸಿಡಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿವೆ.

ಬಿಜೆಪಿ ಬೆಳೆಯಲು ಕಾರಣವೇ ಮಿಸ್ಟರ್ ಕುಮಾರಸ್ವಾಮಿ. ಹೀಗೆ ಸಿದ್ದರಾಮಯ್ಯ ಹೇಳಿದ್ಯಾಕೆ.?ಬಿಜೆಪಿ ಬೆಳೆಯಲು ಕಾರಣವೇ ಮಿಸ್ಟರ್ ಕುಮಾರಸ್ವಾಮಿ. ಹೀಗೆ ಸಿದ್ದರಾಮಯ್ಯ ಹೇಳಿದ್ಯಾಕೆ.?

ಪ್ರತಿ ವೋಟಿಗೆ ಆರು ಸಾವಿರ

ಪ್ರತಿ ವೋಟಿಗೆ ಆರು ಸಾವಿರ

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ವೋಟಿಗೆ ಆರು ಸಾವಿರ ರೂಪಾಯಿ ಹಂಚುತ್ತೇನೆಂದು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದರು. ಅವರು ಬೆಳಗಾವಿಯಲ್ಲಿ ಮಾತನಾಡುತ್ತಾ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ವಿರುದ್ಧ ಹರಿಹಾಯ್ದಿದ್ದರು. ಹೆಬ್ಬಾಳ್ಕರ್‌ ಅವರನ್ನು ಸೋಲಿಸಲು ನಾನು ದುಡ್ಡು ಖರ್ಚು ಮಾಡುವುದಕ್ಕೆ ಸಿದ್ದನಿದ್ದೇನೆ. ಪ್ರತಿ ವೋಟಿಗೆ ಆರು ಸಾವಿರ ನೀಡಿಯಾದರೂ ಬಿಜೆಪಿಯನ್ನು ಗೆಲ್ಲಿಸುತ್ತೇನೆ ಎಂದಿದ್ದರು. ಇದರ ವಿರುದ್ಧ ದೂರು ನೀಡಲು ಕಾಂಗ್ರೆಸ್‌ ರಾಜ್ಯ ಘಟಕ ಮುಂದಾಗಿದೆ.

ಡಿಕೆಶಿಗೆ ನನ್ನ ಭಯವಿದೆ

ಡಿಕೆಶಿಗೆ ನನ್ನ ಭಯವಿದೆ

'ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರಿಗೆ ನನ್ನ ಬಗ್ಗೆ ಭಯವಿದೆ. ಅವರನ್ನು ಮುಗಿಸುವುದು ನಾನೊಬ್ಬನೇ ಎಂದು ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಡಿಕೆಶಿ ನನ್ನ ಜೀವನವನ್ನೇ ಮುಗಿಸಲು ಯತ್ನಿಸಿದ್ದಾರೆ' ಎಂದು ತಿಳಿಸಿದ್ದಾರೆ. ಕಾಂಗ್ರೆಸ್‌ ಈ ಮಟ್ಟಕ್ಕೆ ಇಳಿಯುತ್ತದೆಂದು ನಾನು ಅಂದುಕೊಂಡಿರಲಿಲ್ಲ. ಕಾಂಗ್ರೆಸ್‌ಗೆ ನೂರಾರು ವರ್ಷಗಳ ಇತಿಹಾಸವಿದೆ. ಅವರು ನನ್ನ ವಿರುದ್ಧ ದೂರು ನೀಡುತ್ತಿರುವುದು ಹಾಸ್ಯಾಸ್ಪದ. ನಾವಿನ್ನು ಸುಮ್ಮನಿರಲು ಸಾಧ್ಯವಿಲ್ಲ. ಅವರ ವಿರುದ್ಧ ನಾವೂ ಸಹ ತೊಡೆತಟ್ಟಿ ನಿಲ್ಲುತ್ತೇವೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಅವನಿಗೆ ಪ್ಯಾಂಟ್‌ ಬಿಚ್ಚಲು ಹೇಳಿದ್ವಾ?

ಅವನಿಗೆ ಪ್ಯಾಂಟ್‌ ಬಿಚ್ಚಲು ಹೇಳಿದ್ವಾ?

ಇದೇ ವೇಳೆ, ರಮೇಶ ಜಾರಕಿಹೊಳಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರು, 'ಅವನಿಗೆ ಪ್ಯಾಂಟ್‌ ಬಿಚ್ಚಲು ನಾನು ಹೇಳಿದ್ನಾ, ಲಂಚ ತೆಗೆದುಕೊಳ್ಳಲು ನಾನು ಹೇಳಿದ್ನಾ, ಜನರ ವೋಟಿಗೆ ಆರು ಸಾವಿರ ನೀಡಲು ನಾನು ಹೇಳಿದ್ನಾ, ಅವನು ಕಂಪ್ಲೇಂಟ್‌ ಆದರೂ ಕೊಡ್ಲಿ, ಏನಾದರೂ ಮಾಡಿಕೊಳ್ಳಿ, ನಾವಂತೂ ಹೆದರಲ್ಲ' ಎಂದು ಹೇಳಿದ್ದಾರೆ.

ಸಿಡಿ ಪ್ರಕರಣದಲ್ಲಿ ಜಾರಕಿಹೊಳಿ ರಾಜೀನಾಮೆ

ಸಿಡಿ ಪ್ರಕರಣದಲ್ಲಿ ಜಾರಕಿಹೊಳಿ ರಾಜೀನಾಮೆ

ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಯುವತಿಯೋರ್ವಳಿಗೆ ಆಮಿಷ ಒಡ್ಡಿ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪ ಜಾರಕಿಹೊಳಿ ಮೇಲೆ ಕೇಳಿಬಂದಿತ್ತು. ಯುವತಿಯೂ ಸಾರ್ವಜನಿಕವಾಗಿ ರಮೇಶ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದಳು. ಈ ವಿಚಾರ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ರಮೇಶ ಜಾರಕಿಹೊಳಿ ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷಗಳ ನಾಯಕರು ಒತ್ತಡ ಹೇರಿದ್ದರು. ಆ ನಂತರ ಬಿಜೆಪಿ ಹೈಕಮಾಂಡ್‌ ಜಾರಕಿಹೊಳಿ ರಾಜೀನಾಮೆಗೆ ಸೂಚನೆ ನೀಡಿತ್ತು. ಬೆಳಗಾವಿ ಭಾಗದಲ್ಲಿ ರಮೇಶ ಜಾರಕಿಹೊಳಿ ಪ್ರಭಾವಿ ನಾಯಕ. ಅವರು ಗೋಕಾಕ ಕ್ಷೇತ್ರದಿಂದ ಐದು ಭಾರಿ ಆಯ್ಕೆಯಾಗಿದ್ದಾರೆ. ಅವರ ಮೂವರು ಸಹೋದರರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಸತೀಶ ಜಾರಕಿಹೊಳಿ ಕಾಂಗ್ರೆಸ್‌ನ ಶಾಸಕರು. ಅವರು ಯಮಕನಮರಡಿಯಿಂದ ಆಯ್ಕೆಯಾಗಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅರಬಾವಿ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ಕೊನೆಯ ಸಹೋದರ ಲಖನ್‌ ಜಾರಕಿಹೊಳಿ ಎಂಎಲ್‌ಸಿ ಆಗಿದ್ದಾರೆ. ಅವರು ಪಕ್ಷೇತರ ಅಭ್ಯರ್ಥಿಯಾಗಿದ್ದರೂ, ರಮೇಶ ಜಾರಕಿಹೊಳಿ ಅವರ ಗೆಲುವಿಗೆ ಶ್ರಮಿಸಿದ್ದರು ಎಂಬ ಮಾತುಗಳೂ ಕೇಳಬಂದಿವೆ. ಒಟ್ಟಿನಲ್ಲಿ, ಕರ್ನಾಟಕ ಚುನಾವಣೆಯಲ್ಲಿ ಮತ್ತೆ ಡಿಕೆಶಿ ವರ್ಸಸ್‌ ಜಾರಕಿಹೊಳಿ ಸಂಘರ್ಷದ ಚರ್ಚೆಗಳು ಮುನ್ನೆಲೆಗೆ ಬಂದಿರುವುದು ರಂಗನ್ನು ಹೆಚ್ಚಿಸಿದೆ.

English summary
Accusations and recriminations continue between BJP MLA Ramesh Jarakiholi and KPCC President DK Shivakumar. On this occasion, leaders have stuck out their tongues. The CD issue has come to the fore again in state politics
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X