ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಅಮಿತ್ ಶಾ

|
Google Oneindia Kannada News

Recommended Video

ಸಿದ್ದಗಂಗಾ ಮಠದ ನಡೆದಾಡುವ ದೇವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದ ಅಮಿತ್ ಶಾ | Oneindia kannada

ತುಮಕೂರು, ಮಾರ್ಚ್ 26: ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ತುಮಕೂರಿನ ಸಿದ್ದಗಂಗಾಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಲಿಂಗಾಯತ ಪ್ರತ್ಯೇಕ ಧರ್ಮದ ಕೂಗಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಅಮಿತ್ ಶಾ ಭೇಟಿ ಕುತೂಹಲ ಕೆರಳಿಸಿದೆ.

ಅಮಿತ್ ಶಾ ರಾಜ್ಯ ಪ್ರವಾಸ, ಲಿಂಗಾಯತ ಮಠಗಳಿಗೆ ಭೇಟಿ ಅಮಿತ್ ಶಾ ರಾಜ್ಯ ಪ್ರವಾಸ, ಲಿಂಗಾಯತ ಮಠಗಳಿಗೆ ಭೇಟಿ

ಕೆಲವೇ ವಾರಗಳಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯಲಿರುವುದರಿಂದ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಮಹತ್ವದ ಸ್ಥಾನ ಪಡೆಯಲಿದೆ ಎಂಬುದನ್ನು ಅರಿತ ಶಾ, ಹಲವು ಲಿಂಗಾಯತ ಮಠಗಳಿಗೆ ಭೇಟಿ ನೀಡಲಿದ್ದಾರೆ. ಅದರ ಮೊದಲ ಭಾಗವೇ ಸಿದ್ಧಗಂಗಾ ಮಠದ ಭೇಟಿ.

ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

Karnataka assembly elections Amit shah visits Siddaganga matha

ಇಷ್ಟೇ ಅಲ್ಲದೆ, ತುಮಕೂರಿನ ಸಿದ್ದಗಂಗಾ ಮಠದ ಭೇಟಿಯ ನಂತರ ತಿಪಟೂರಿನ ತೆಂಗು ಬೆಳೆಗಾರರ ಭೇಟಿ, ನಂತರ ಶಿವಮೊಗ್ಗದಲ್ಲಿ ರೋಡ್‌ ಶೋ, ಬೆಕ್ಕಿನ ಕಲ್ಮಠಕ್ಕೆ ಭೇಟಿ, ಅಡಿಕೆಬೆಳೆಗಾರರೊಂದಿಗೆ ಮಾತುಕತೆ, ನಂತರ ರಾಷ್ಟ್ರಕವಿ ಕುವೆಂಪು ಅವರ ಸ್ಮಾರಕ ಶಿವಮೊಗ್ಗ ತೀರ್ಥಹಳ್ಳಿಯ ಕುಪ್ಪಳ್ಳಿಯಲ್ಲಿರುವ ಕವಿಶೈಲಕ್ಕೂ ಭೇಟಿ ನೀಡಲಿದ್ದಾರೆ.

Karnataka assembly elections Amit shah visits Siddaganga matha

ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಅವರೊಂದಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಬಿಜೆಪಿ ಮುಖಂಡರಾದ ಅನಂತಕುಮಾರ್, ಮುರಳೀಧರರಾವ್, ಪ್ರಹ್ಲಾದ್ ಜೋಷಿ, ಎನ್.ರವಿಕುಮಾರ್, ಜಿ.ಎಸ್.ಬಸವರಾಜ್, ಜ್ಯೋತಿಗಣೇಶ್, ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಲಿಂಗಾಯತ ಪ್ರತ್ಯೇಕ ಧರ್ಮ: ಮಠದ ನಿಲುವೇನು?

ಪ್ರತ್ಯೇಕ ಲಿಂಗಾಯತ ಧರ್ಮದ ಸರ್ಕಾರದ ನಿರ್ಧಾರವನ್ನು ಸಿದ್ದಗಂಗಾ ಮಠ ಸ್ವಾಗತಿಸಿದೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಬಸವ ತತ್ವವನ್ನು ಪಾಲಿಸುವ ವೀರಶೈವರನ್ನೂ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸೇರಿಸಿಕೊಳ್ಳಲಾಗುತ್ತಿರುವ ಕಾರಣ ಈ ನಡೆಯನ್ನು ಮಠ ಸ್ವಾಗತಿಸಿದೆ.

ಕೆಲವು ದಿನಗಳ ಹಿಂದೆ ಶ್ರೀ ಶಿವಕುಮಾರ ಸ್ವಾಮೀಜಿ, 'ಕೇವಲ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವುದನ್ನು ಸ್ವಾಗತಿಸಿದ್ದಾರೆ' ಎಂದು ಜಲಸಂಪನ್ಮೂಲ ಸಚಿನ ಎಂ.ಬಿ.ಪಾಟೀಲ್ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿತ್ತು. ಸ್ವಾಮಿಗಳು ಎಂದಿಗೂ ಕೇವಲ ಲಿಂಗಾಯತಕ್ಕೆ ಮಾತ್ರ ಪ್ರತ್ಯೇಕ ಧರ್ಮದ ಸ್ಥಾನ ಮಾನ ನೀಡುವುದನ್ನು ಸ್ವಾಗತಿಸಿಲ್ಲ, ಬಸವ ತತ್ತ್ವ ಪಾಲಿಸುವ ವೀರಶೈವರನ್ನೂ ಸೇರಿಸಿಕೊಳ್ಳುವುದಾದರೆ ಮಾತ್ರ ನಾವು ಇದನ್ನು ಸ್ವಾಗತಿಸುತ್ತೇವೆ ಎಂದು ಮಠ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿತ್ತು.

English summary
Karnataka assembly elections 2018: After Karnataka cabinet has approved for seperate religion for Lingayat community, BJP national president Amit shah has started his visist to Lingayat Muthas. As part of his two days visit to Karnataka he recieves blessings of Siddaganga seer Sri Shivakumar swamiji in Tumakuru today(March 26th)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X