ವಿಧಾನಸಭೆ ಚುನಾವಣೆ: ಕ್ಲೀನ್ ಚಿಟ್ ಪಡೆದವರಿಗೆ ಮಾತ್ರ ಬಿಜೆಪಿ ಟಿಕೆಟ್
ರಾಜ್ಯದಲ್ಲಿ ಮುಂಬರುವ ವಿಧಾನಸಭೆ ವೇಳೆ ಭ್ರಷ್ಟಾಚಾರ ಹಗರಣದಿಂದ ಮುಕ್ತರಾದ ಬಿಜೆಪಿ ನಾಯಕರಿಗಷ್ಟೇ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಇದಲ್ಲದೆ, 2ನೇ ಶ್ರೇಣಿಯ ನಾಯಕರನ್ನು ಬೆಳೆಸಲೂ ಅದು ನಿರ್ಧರಿಸಿದೆ
ಬೆಂಗಳೂರು, ಜೂನ್ 9: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ರಾಜ್ಯದ ಜನರ ದೃಷ್ಟಿಯಲ್ಲಿ ಯಾವುದೇ ಕಾರಣಕ್ಕೂ ಕೀಳಾಗಿ ಗೋಚರಿಸದಂತೆ ಎಚ್ಚರಿಕೆಯ ಹೆಜ್ಜೆಯಿಡಲು ನಿರ್ಧರಿಸಿರುವ ಬಿಜೆಪಿ ಹೈಕಮಾಂಡ್, 2013ರಿಂದೀಚೆಗೆ ಭ್ರಷ್ಟಾಚಾರ ಆರೋಪ ಹೊತ್ತಿರುವ ಯಾವುದೇ ನಾಯಕರಿಗೆ ಚುನಾವಣಾ ಟಿಕೆಟ್ ನೀಡದಿರಲು ನಿರ್ಧರಿಸಿದೆ.
ಆರೋಪಗಳಿಂದ ನ್ಯಾಯಾಲಯದಲ್ಲಿ ಕ್ಲೀನ್ ಚಿಟ್ ಪಡೆದಿರುವ ನಾಯಕರಿಗೆ ಹಾಗೂ ಯುವ ನಾಯಕರಿಗೆ ಮಾತ್ರ ಚುನಾವಣಾ ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
[ಸರಕಾರದಿಂದಲೇ ನಡೆಯುತ್ತಿದೆ ಖಾಸಗಿ ಮಿನರಲ್ ಬಾಟಲ್ ದಂಧೆ!]

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಕೆಲವಾರು ನಾಯಕರು ಗಣಿ ಹಗರಣ, ಅಕ್ರಮ ಡಿನೋಟಿಫಿಕೇಷನ್, ಸ್ವಜನ ಪಕ್ಷಪಾತ ಸೇರಿದಂತೆ ಅನೇಕ ಆರೋಪಗಳಿಗೆ ತುತ್ತಾಗಿದ್ದರು. ಇವರಲ್ಲಿ ಕೆಲವರಿಗೆ ಕ್ಲೀನ್ ಚಿಟ್ ಸಿಕ್ಕಿದ್ದರೆ, ಮತ್ತೂ ಕೆಲವರಿನ್ನೂ ಕಾನೂನು ಕ್ರಮದ ಸುಳಿಯಲ್ಲೇ ಇದ್ದಾರೆ. ಹಾಗಾಗಿ, ಟಿಕೆಟ್ ಕೊಡುವ ವಿಚಾರದಲ್ಲಿ ಹುಷಾರಾಗಿ ಹೆಜ್ಜೆಯಿಡಲು ತೀರ್ಮಾನಿಸಲಾಗಿದೆ.
[ಜನಾರ್ದನ ರೆಡ್ಡಿ ಮಗನ ಚೊಚ್ಚಲ ಚಿತ್ರಕ್ಕೆ ತೆಲುಗಿನ ಸ್ಟಾರ್ ನಿರ್ದೇಶಕ.!]
ಇದೂ ಅಲ್ಲದೆ, ರಾಜ್ಯ ರಾಜಕೀಯದಲ್ಲಿ ಬಿಜೆಪಿಯಿಂದ 2ನೇ ತಲೆಮಾರಿನ ನಾಯಕರಲ್ಲಿ ಕೆಲವರನ್ನು ಗುರುತಿಸಿ ಅವರನ್ನು ಬೆಳೆಸಿ, ಈಗಿರುವ ಮೊದಲ ಸಾಲಿನ ನಾಯಕರು ನಿವೃತ್ತಿಯಾದ ನಂತರ ಬೆಳೆದ ನಾಯಕರನ್ನು ಅವರನ್ನು ಮುಂದಿನ ದಿನಗಳಲ್ಲಿ ರಾಜ್ಯ ಬಿಜೆಪಿ ಹಿರಿಯ ನಾಯಕರನ್ನಾಗಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.












Click it and Unblock the Notifications