ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

AZ ಸಮೀಕ್ಷೆ: ರಾಜ್ಯದಲ್ಲಿ ದೋಸ್ತಿ ಸರ್ಕಾರ, JDS ಕಿಂಗ್ ಮೇಕರ್

|
Google Oneindia Kannada News

Recommended Video

ಎಝಡ್ ಸಮೀಕ್ಷೆ: ರಾಜ್ಯದಲ್ಲಿ ದೋಸ್ತಿ ಸರ್ಕಾರ, JDS ಕಿಂಗ್ ಮೇಕರ್ | Oneindia Kannada

ಬೆಂಗಳೂರು, ಡಿಸೆಂಬರ್ 8 : ಕರ್ನಾಟಕದಲ್ಲಿ ಮುಂಬರುವ 2018ರ ವಿಧಾಸಬಾ ಚುನಾವಣೆಗೆ ಕಾಪ್ಸ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ನಂತರ ಕನ್ನಡಪ್ರಭ, ಸುವರ್ಣ ನ್ಯೂಸ್ ಹಾಗೂ ಎಝಡ್ ರಿಸರ್ಚ್ ಮತದಾನ ಪೂರ್ವ ಸಮೀಕ್ಷೆ ವರದಿಯನ್ನು ಪ್ರಕಟಿಸಿದೆ.

ಕಾಪ್ಸ್ ಸಮೀಕ್ಷೆ: ಕರ್ನಾಟಕಲ್ಲಿ ಮತ್ತೆ ಅರಳಲಿದೆ ಕಮಲ ಕಾಪ್ಸ್ ಸಮೀಕ್ಷೆ: ಕರ್ನಾಟಕಲ್ಲಿ ಮತ್ತೆ ಅರಳಲಿದೆ ಕಮಲ

ಎಝಡ್ ರಿಸರ್ಚ್ ಮತದಾನ ಪೂರ್ವ ಸಮೀಕ್ಷೆಯಂತೆ 2018ರ ವಿಧಾನಸಬಾ ಚುನಾವಣೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲ. ಮತ್ತೆ ದೋಸ್ತಿ ಸರ್ಕಾರ ಅನಿವಾರ್ಯವಾಗಲಿದೆ. ಆದರೆ, ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಸಖತ್ ಥ್ರಿಲ್ಲಿಂಗ್ ಆಗಿರಲಿದೆ ಕರ್ನಾಟಕ ಚುನಾವಣಾ ಕಣಸಖತ್ ಥ್ರಿಲ್ಲಿಂಗ್ ಆಗಿರಲಿದೆ ಕರ್ನಾಟಕ ಚುನಾವಣಾ ಕಣ

ಆಡಳಿತ ರೂಢ ಕಾಂಗ್ರೆಸ್ 88 (ಸರಿಸುಮಾರು 74 ರಿಂದ 93) ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ 80 (ಸರಿಸುಮಾರು 77-92) ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಜೆಡಿಎಸ್ ಪಕ್ಕ 43 (ಸರಿಸುಮಾರು 41-46) ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಕಿಂಗ್ ಮೇಕರ್ ಆಗಲಿದೆ. ಇತರರು ಅಂದರೆ ಪಕ್ಷೇತರರು 11 ಸ್ಥಾನದಲ್ಲಿ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಸಿ ಫೋರ್ ಸಮೀಕ್ಷೆ : ಸಿದ್ದರಾಮಯ್ಯ -ಕಾಂಗ್ರೆಸ್ ಸರ್ಕಾರಕ್ಕೆ ಮತ್ತೆ ಬಹುಮತ ಸಿ ಫೋರ್ ಸಮೀಕ್ಷೆ : ಸಿದ್ದರಾಮಯ್ಯ -ಕಾಂಗ್ರೆಸ್ ಸರ್ಕಾರಕ್ಕೆ ಮತ್ತೆ ಬಹುಮತ

ಬಿಜೆಪಿ-ಕಾಂಗ್ರೆಸ್ ಹಾಗೂ ಜೆಡಿಎಸ್ ಭಾರಿ ರಣತಂತ್ರ ಹೆಣೆಯುತ್ತಿರುವ ಸಂದರ್ಭದಲ್ಲಿ ಎಝಡ್ ರಿಸರ್ಚ್ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ಭಾರಿ ಸಂಚಲನ ಮೂಡಿಸುತ್ತಿದೆ.

ಕಾಂಗ್ರೆಸ್ ಗೆ 34 ಸ್ಥಾನ ನಷ್ಟ

ಕಾಂಗ್ರೆಸ್ ಗೆ 34 ಸ್ಥಾನ ನಷ್ಟ

ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ 122 ಸ್ಥಾನಗಳಲ್ಲಿ ಗೆದ್ದು ಯಾರ ಬೆಂಬಲವಿಲ್ಲದೆ ಸ್ವಂತ ಬಲದಿಂದ ಆಡಳಿತಕ್ಕೆ ಬಂದಿದ್ದ ಕಾಂಗ್ರೆಸ್ ಗೆ ಈ ಬಾರಿಯ ಅಂದರೆ 2018ರ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ 34 ಸ್ಥಾನಗಳು ನಷ್ಟ ಅನುಭವಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಬಿಜೆಪಿಗೆ 42 ಸ್ಥಾನಗಳು ಪ್ಲಸ್

ಬಿಜೆಪಿಗೆ 42 ಸ್ಥಾನಗಳು ಪ್ಲಸ್

2013ರ ವಿಧಾನಸಭಾ ಚುನಾವಣೆಗಿಂತ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚುವರಿಯಾಗಿ 42 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. 2013ರ 40 ಸ್ಥಾನಗಳಲ್ಲಿ ಗೆದಿದ್ದ ಬಿಜೆಪಿ ಈ ಬಾರಿ ತನ್ನ ಸ್ಥಾನವನ್ನು 82ಕ್ಕೆ ಹೆಚ್ಚಿಸಿಕೊಳ್ಳಲಿದೆ. ಅಂದರೆ ಕಳೆದ ಚುನಾವಣೆಗೆ ಹೋಲಿಸಿದರೆ 2018ರಲ್ಲಿ 42 ಸ್ಥಾನಗಳು ಬಿಜೆಪಿ ಖಾತೆಗೆ ಸೇರಿಕೊಳ್ಳಲಿವೆ.

ಕಳೆದ ಬಾರಿಗಿಂತ ಜೆಡಿಎಸ್ ತೆಕ್ಕೆಗೆ 3 ಸ್ಥಾನಗಳು

ಕಳೆದ ಬಾರಿಗಿಂತ ಜೆಡಿಎಸ್ ತೆಕ್ಕೆಗೆ 3 ಸ್ಥಾನಗಳು

2018ರ ಚುನಾವಣೆಯಲ್ಲಿ ಸಮೀಕ್ಷೆಯಂತೆ ಜೆಡಿಎಸ್ ಕಿಂಗ್ ಮೇಕರ್ ಆಗಲಿದ್ದು, ದೇವೇಗೌಡ ಅವರು ಯಾವ ಪಕ್ಷದೊಂದಿಗೆ ದೋಸ್ತಿ ಮಾಡಲಿದ್ದಾರೆ ಎನ್ನುವುದು ಮುಂದಿರುವ ಪ್ರಶ್ನೆ. 2013ರಲ್ಲಿ 40ಕ್ಷೇತ್ರಗಳಲ್ಲಿ ಗೆದ್ದಿದ್ದ ಜೆಡಿಎಸ್ ಈ ಬಾರಿಯ ಚುನಾವಣೆಯಲ್ಲಿ ತನ್ನ ಗೆಲುವಿನ ಅಂತರವನ್ನು 43ಕ್ಕೆ ಹೆಚ್ಚಿಸಿಕೊಂಡು ಎರಡು ರಾಷ್ಟ್ರೀಯ ಪಕ್ಷಗಳಿಗೆ ಕಿಂಗ್ ಆಗಲಿದೆ ಎಂದು ಎಝಡ್ ಸಮೀಕ್ಷೆ ಅಭಿಪ್ರಾಯ ಪಟ್ಟಿದೆ.

11 ಸ್ಥಾನಗಳಲ್ಲಿ ಇತರರು

11 ಸ್ಥಾನಗಳಲ್ಲಿ ಇತರರು

2013ರ ಚುನಾವಣೆಯಲ್ಲಿ ಬರೋಬ್ಬರಿ 22 ಸ್ಥನಗಳಲ್ಲಿ ಗೆಲುವು ಸಾಧಿಸಿದ್ದ ಇತರರು ಅಂದರೆ ಪಕ್ಷೇತರರು. 2018ರ ಚುನಾವಣೆಯಲ್ಲಿ ಇತರರ ಗೆಲುವಿನ ಅಂತರ 11ಕ್ಕೆ ಕುಸಿಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಜೆಡಿಎಸ್, ಕಾಂಗ್ರೆಸ್, ಮತ್ತು ಬಿಜೆಪಿಯವರು ಪಕ್ಷೇತರ ಅಭ್ಯರ್ಥಿಗಳಿಗೆ ರತ್ನಗಂಬಳಿ ಹಾಸಿದರೂ ಆಶ್ಚರ್ಯ ಪಡಬೇಕಿಲ್ಲ.

English summary
Suvarna news, Kannada Prabha and AZ opinion poll predicts a hung assembly for the forth coming elections to Karnataka Assembly. BJP 82, Congress 88, JDS 43, others 11 ( 224). The survey also says that Jds would play a King Maker role while formation of new Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X