ಹುಬ್ಬಳ್ಳಿ: ರಾಹುಲ್, ಶಾ ಬಂದಿಳಿದ ವಿಶೇಷ ವಿಮಾನ ತಪಾಸಣೆ
ಹುಬ್ಬಳ್ಳಿ, ಏಪ್ರಿಲ್ 04: ಕರ್ನಾಟಕ ವಿಧಾನ ಸಭೆ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ವಿಶೇಷ ವಿಮಾನವನ್ನು ತಪಾಸಣೆ ಮಾಡಲಾಯಿತು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದ ಅವರ ವಿಮಾನವನ್ನು 'ಚುನಾವಣೆ ನೀತಿ ಸಂಹಿತೆ' ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ತಪಾಸಣೆ ಮಾಡಲಾಯಿತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಎಲ್ಲ ವಿಮಾನಗಳನ್ನು ತಪಾಸಣೆ ಮಾಡಿದಂತೆ ಇದನ್ನೂ ಮಾಡಿದ್ದೇವೆ. ಇದರಲ್ಲಿ ಬೇರೆ ಉದ್ದೇಶವಿಲ್ಲ ಎಂದು ಧಾರವಾಡ ಜಿಲ್ಲಾಧಿಕಾರಿ ಎಸ್ ಬಿ ಬೊಮ್ಮನಹಳ್ಳಿ ಹೇಳಿದ್ದಾರೆ. ದೆಹಲಿಯ ವಿಮಾನ ನಿಲ್ದಾಣದಿಂದ ಚುನಾವಣಾ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಮತ್ತು ಅಮಿತ್ ಶಾ ಪ್ರತ್ಯೇಕ ವಿಶೇಷ ವಿಮಾನದಲ್ಲಿ ಏಪ್ರಿಲ್ 03 ರಂದು ಹುಬ್ಬಳ್ಳಿಗೆ ಬಂದಿಳಿದಿದ್ದರು.
ವಿಮಾನದಲ್ಲಿದ್ದ ಲಗೇಜ್ ಗಳನ್ನು ಪರೀಕ್ಷಿಸಿದ ಅಧಿಕಾರಿಗಳು, 'ವಿಮಾನದಲ್ಲಿ ಅಕ್ರಮವೆಂಬಂಥ ಯಾವುದೇ ಸಾಮಗ್ರಿ ಇರಲಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ 5 ನೇ ಬಾರಿ ಕರ್ನಾಟಕಕ್ಕೆ ಆಗಮಿಸಿರುವ ರಾಹುಲ್ ಗಾಂಧಿ ಮತ್ತು ಅಮಿತ್ ಶಾ ಕ್ರಮವಾಗಿ ಶಿವಮೊಗ್ಗ, ದಾವಣಗೆರೆ ಮತ್ತು ಹಾವೇರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಸಮಾವೇಶದಲ್ಲಿ ಭಾಗಿಯಾದರು.












Click it and Unblock the Notifications