ಕಾಂಗ್ರೆಸ್ ಸೇರ್ಪಡೆ ಯಾಕೆ ಬೇಕು? ಪ್ಲೀಸ್ ಏನು ಚರ್ಚೆ ಬೇಡಾ ದಮ್ಮಯ್ಯ ಎಂದ ಸಚಿವ ನಾರಾಯಣ ಗೌಡ
ಚುನಾವಣ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಸಚಿವ ನಾರಾಯಣಗೌಡ ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯ, ಮಾರ್ಚ್8: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಚುನಾವಣಾ ತಯಾರಿಯನ್ನ ನಡೆಸಿದ್ರೆ, ಇತ್ತ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಜೋರಾಗಿ ಸದ್ದು ಮಾಡುತ್ತಿದ್ದು, ಸಚಿವ ನಾರಾಯಣ ಗೌಡ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಚರ್ಚೆ ಹೆಚ್ಚಾಗಿದೆ.
ಈ ಕುರಿತು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಸಚಿವ ನಾರಾಯಣ ಗೌಡ ಮಾತನಾಡಿ, ಪ್ಲೀಸ್ ಏನು ಚರ್ಚೆ ಬೇಡಾ ದಮ್ಮಯ್ಯ ಎಂದು ಸಚಿವ ನಾರಾಯಣಗೌಡ ಕೈ ಮುಗಿದಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಯಾಕೆ ಬೇಕು. ಅಂತಹ ಸಂದರ್ಭ ಬಂದ್ರೆ ನಾನೇ ಹೇಳ್ತೀನಿ, ಪ್ಲೀಸ್ ಏನು ಚರ್ಚೆ ಬೇಡಾ ದಮ್ಮಯ್ಯ ಎಂದು ಮನವಿ ಮಾಡಿದ್ದಾರೆ.

ಕೆ.ಆರ್.ಪೇಟೆಗೆ ನಾನು ಜನ ಸೇವೆ ಮಾಡಲು ನಾನು ಬಂದಿದ್ದೇನೆ. ನಿನ್ನೆ ನನ್ನ ಹೆಸರಿನಲ್ಲಿ ಮೊಟ್ಟೆ ಹೊಡೆದವರೇ ನನ್ನನ್ನು ಎಂ ಎಲ್ ಎ ಮಾಡಿದ್ರು. ನನಗೆ ಮೂರು ಬಾರಿ ಶಾಸಕನಾಗಿ, ಸಚಿವನಾಗಿ ಅಭಿವೃದ್ಧಿಯ ರುಚಿ ನೋಡಿದ್ದೇನೆ. ನನಗೆ ಅಭಿವೃದ್ಧಿ ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ನಾರಾಯಣಗೌಡ ಸೋತರೆ ಬಾಂಬೆಗೆ ಹೋಗ್ತಾನೆ ಅಂತಾರೆ. ನನಗೆ ಬಾಂಬೆಗೆ ಹೋಗುವ ಶಾರ್ಟ್ ಕಟ್ ಸಾಕಷ್ಟು ಗೊತ್ತಿವೆ, ನಾನು ಕೆ.ಆರ್.ಪೇಟೆಯಲ್ಲೇ ಇರುತ್ತೇನೆ ಎಂದು ಹೇಳಿದರು.
ನಾನು ಸತ್ತರು ಕೆ.ಆರ್. ಪೇಟೆಯಲ್ಲೇ ಮಣ್ಣಾಗುತ್ತೇನೆ. ನನ್ನನ್ನು ಎಲ್ಲಿ ಮಣ್ಣು ಮಾಡಬೇಕು ಎಂದು ಈಗಾಗಲೇ ಹೇಳಿದ್ದೇನೆ. ಅಂತ್ಯ ಸಂಸ್ಕಾರಕ್ಕೆ ಮೊದಲೇ ಜಾಗ ರಿಜರ್ವೇಷನ್ ಮಾಡಿ ಹೋಗುತ್ತೇನೆ, ನಾನು ಯಾರಿಗೂ ಮೋಸ ಮಾಡಿಲ್ಲ. ಕೆ.ಆರ್.ಪೇಟೆ ಅಭಿವೃದ್ಧಿಗೆ ನಾನು ಮುಂದೆಯು ಶ್ರಮಿಸುತ್ತೇನೆ. ನನಗೆ ಆಶೀರ್ವಾದ ಮಾಡಿ ಎಂದು ಸಚಿವ ನಾರಾಯಣಗೌಡ ಮನವಿ ಮಾಡಿದರು.

ನಾನು ಕೆ.ಆರ್.ಪೇಟೆಗೆ ಹೊತ್ತುಕೊಂಡು ಹೋಗೋಕೆ ಬಂದಿಲ್ಲ. ಬಾಂಬೆಗೆ 200 ರೂಪಾಯಿ ತಗೊಂಡು ಹೋದೆ, ಉದ್ಯಮದಲ್ಲಿ ನಾನು ದುಡಿದ ಮೇಲೆ ಬಂದಿದ್ದೇನೆ. ನಾನು ಕರ್ನಾಟಕಕ್ಕೆ ಬರಲು ಬಾಲಗಂಗಾಧರನಾಥ ಸ್ವಾಮೀಜಿ ಕಾರಣ, ನಾನು ನಿಮ್ಮೊಟ್ಟಿಗೆ ಇದ್ದೀನಿ ಎಂದರೆ ಅದಕ್ಕೆ ಶ್ರೀಗಳು ಕಾರಣ. ಬಾಲಗಂಗಾಧರ ಶ್ರೀಗಳ ಆಶೀರ್ವಾದದಿಂದ ನಾನು ಮೇಲೆ ಬಂದಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರ ಗಲಾಟೆ ಮಾಡಿಕೊಂಡ ವಿಚಾರವಾಗಿ ಮಾತನಾಡಿದ ಅವರು, ಗಲಾಟೆ ಮಾಡಿದವರು ಯಾರು ಅಂತ ಗೊತ್ತಿಲ್ಲ. ಅವರು ಗಲಾಟೆ ಮಾಡಿಕೊಳ್ಳಲಿ ನಾನು ಏನಾದ್ರು ಅವರ ಬಳಿ ಹೋಗಿದ್ಲಾ?, ಅಂತಹ ಕೊಚ್ಚೆ ಗುಂಡಿಗೆ ನಾನು ಟಿಪ್ಪಣಿ ಮಾಡೋಕೆ ಹೋಗಲ್ಲ. ನನಗೂ ಅವರಿಗೂ ಸಂಬಂಧವಿಲ್ಲ, ಅವರು ಏನೋ ಗಲಾಟೆ ಮಾಡಿಕೊಂಡಿದ್ದಾರೆ ಅದಕ್ಕೂ ನನಗೂ ಸಂಬಂಧವಿಲ್ಲ. ನಾನು ಅವರ ಮನೆ ಹತ್ತಿರ ಹೋಗಿಲ್ಲ, ಅವರನ್ನು ಏನು ಕೇಳಿಲ್ಲ ಎಂದು ಹೇಳಿದರು.












Click it and Unblock the Notifications