'ನವರಂಗಿ ಸಿದ್ದಹಸ್ತರ ಆಟ, ಬಿಜೆಪಿ ಪಕ್ಷದ ನಾಲಾಯಕರು'- 'ಕೈ' ಕಮಲದ ವಿರುದ್ಧ ಜೆಡಿಎಸ್ ಟ್ವೀಟ್
ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಇಂದು ಘೋಷಣೆಯಾಗಿದ್ದು ಪಕ್ಷಗಳ ತಯಾರಿ ಚುರುಕುಗೊಂಡಿದೆ. ಈ ನಡುವೆ ಜೆಡಿಎಸ್ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮಾಡಿದೆ. ಜೊತೆಗೆ ಆಡಳಿತ ಪಕ್ಷದ ವಿರುದ್ಧವೂ ಕಿಡಿ ಕಾರಿದೆ.
ಜಾತ್ಯತೀತ ಅನ್ನೋದನ್ನ ಸರಿಯಾಗಿ ಬರೆಯೋಕೂ ಬಾರದ ಈ ಅಧಮರಿಗೆ ಜಾತ್ಯತೀತೆಯ ಬಗ್ಗೆ ಮಾತನಾಡೋ ನೈತಿಕತೆ ಎಲ್ಲಿದೆ.? ಮುಸ್ಲಿಂಮರ ಮೀಸಲಾತಿಯನ್ನು ಬಿಜೆಪಿ ಪಕ್ಷ ಕಿತ್ತುಕೊಂಡರೂ ಸೊಲ್ಲೆತ್ತದ ನಿಮಗೆ ಈ ಬಾರಿ ಮುಸ್ಲಿಂಮರು ಸರಿಯಾಗಿ ಬುದ್ದಿ ಕಲಿಸುತ್ತಾರೆ. 2/5
— Janata Dal Secular (@JanataDal_S) March 29, 2023
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಶಾಸಕರು ಬಂಡಾಯವೆದ್ದು ಬಿಜೆಪಿ ಸೇರುವಂತೆ ಮಾಡಿದ್ದ ಸಿದ್ದರಾಮಯ್ಯ ಈಗ ಶಾಸಕರನ್ನು ಪಕ್ಷಕ್ಕೆ ಮತ್ತೆ ಕರೆಸಿಕೊಳ್ಳುತ್ತಿದ್ದಾರೆ. 'ಇದು ನವರಂಗಿ ಸಿದ್ದಹಸ್ತರ ಆಟ' ಎಂದು ಜೆಡಿಎಸ್ ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮಾಡಿದೆ.

'ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಗುಪ್ತವಾಗಿ ಕಳುಹಿಸಿ ಈಗ ಪುನಃ ವಾಪಸ್ ಕರೆಸಿಕೊಳ್ಳುತ್ತಿರುವ ನವರಂಗಿ ಸಿದ್ದಹಸ್ತರ ಆಟ ಇನ್ನು ಮುಂದೆ ರಾಜ್ಯದಲ್ಲಿ ನಡೆಯುವುದಿಲ್ಲ, ಕೋಲಾರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆ ಸಹಕಾರಿಯಾಗಿದ್ದು ಯಾವ ಬೀ ಟೀಂ ಎನ್ನುವುದನ್ನು ಹೇಳುವಿರಾ ಕಾಂಗಿಗಳೇ..??' ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.
'ಇನ್ನೂ ಚುನಾವಣೆ ಘೋಷಣೆಯೇ ಆಗಿಲ್ಲ ಆದರೂ ನಿಮ್ಮ ಪಕ್ಷದ ನಾಯಕರು ಹೆಚ್ ಡಿ ಕುಮಾರಸ್ವಾಮಿ ಅವರ ಮನೆ ಬಾಗಿಲು ತಟ್ಟುತ್ತಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ, ಹೀಗಿರೋವಾಗ ನೀವು ಟ್ವಿಟರ್ ನಲ್ಲಿ ತೌಡು ಕುಟ್ಟಿದರೆ ಪುಡಿ ಸಹಾ ಉದುರುವುದಿಲ್ಲ' ಎಂದು ವ್ಯಂಗ್ಯವಾಡಿದೆ.
'ಜಾತ್ಯತೀತ ಅನ್ನೋದನ್ನ ಸರಿಯಾಗಿ ಬರೆಯೋಕೂ ಬಾರದ ಈ ಅಧಮರಿಗೆ ಜಾತ್ಯತೀತೆಯ ಬಗ್ಗೆ ಮಾತನಾಡೋ ನೈತಿಕತೆ ಎಲ್ಲಿದೆ.? ಮುಸ್ಲಿಂಮರ ಮೀಸಲಾತಿಯನ್ನು ಬಿಜೆಪಿ ಪಕ್ಷ ಕಿತ್ತುಕೊಂಡರೂ ಸೊಲ್ಲೆತ್ತದ ನಿಮಗೆ ಈ ಬಾರಿ ಮುಸ್ಲಿಂಮರು ಸರಿಯಾಗಿ ಬುದ್ದಿ ಕಲಿಸುತ್ತಾರೆ' ಎಂದು ಜೆಡಿಎಸ್ ಖಡಕ್ ಸೂಚನೆ ಕೊಟ್ಟಿದೆ.

ಬಿಜೆಪಿ ಪಕ್ಷದ ನಾಲಾಯಕರು ಹೇಳುವ ಮಾತುಗಳನ್ನೆಲ್ಲಾ ಕಾಂಗ್ರೆಸ್ ಪಕ್ಷದ ನಾಯಕರು ಸತ್ಯ ಎಂದು ಒಪ್ಪುವುದಾದರೆ, ಕರ್ನಾಟಕ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ವಿರುದ್ಧ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ಏನೆಲ್ಲಾ ಹೇಳಿದ್ದಾರೆ ಅನ್ನೋದನ್ನು ಕಾಂಗ್ರೆಸ್ ಪಕ್ಷ ಒಮ್ಮೆ ನೆನಪು ಮಾಡಿಕೊಳ್ಳಲಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
'ಕುಮಾರಸ್ವಾಮಿ ಅವರನ್ನು ಎದುರಿಸಲು ಮೆಗಾಸಿಟಿ ಯೋಗೀಶ್ವರನಿಗೆ ಗಾಳ ಹಾಕುತ್ತಿರುವ ನೀವು, ನಿಮ್ಮ ನಾಯಕರೇ ಕುತಂತ್ರದಿಂದ ಈ ಹೇಳಿಕೆಯನ್ನು ಯೋಗೀಶ್ವರ್ ಬಾಯಲ್ಲಿ ಹೇಳಿಸಿರೋದ್ರಲ್ಲಿ ಯಾವುದೇ ಅಚ್ಚರಿಯಿಲ್ಲ, ಇಂದೇ ಬರೆದಿಟ್ಟುಕೊಳ್ಳಿ ಈ ಬಾರಿ ಕನ್ನಡಿಗರ ಪರವಾದ ಜಾತ್ಯತೀತ ಸರ್ಕಾರ ರಚಿಸುವುದು ಜಾತ್ಯತೀತ ಜನತಾದಳವೇ ಹೊರತು ದೆಹಲಿ ಗುಲಾಮರಲ್ಲ' ಎಂದು ತೆನೆ ಹೊತ್ತ ಪಕ್ಷ ಗುಡುಗಿದೆ.
ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಗುಪ್ತವಾಗಿ ಕಳುಹಿಸಿ ಈಗ ಪುನಃ ವಾಪಸ್ ಕರೆಸಿಕೊಳ್ಳುತ್ತಿರುವ ನವರಂಗಿ ಸಿದ್ದಹಸ್ತರ ಆಟ ಇನ್ನು ಮುಂದೆ ರಾಜ್ಯದಲ್ಲಿ ನಡೆಯುವುದಿಲ್ಲ, ಕೋಲಾರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆ ಸಹಕಾರಿಯಾಗಿದ್ದು ಯಾವ ಬೀ ಟೀಂ ಎನ್ನುವುದನ್ನು ಹೇಳುವಿರಾ ಕಾಂಗಿಗಳೇ..?? 4/5
— Janata Dal Secular (@JanataDal_S) March 29, 2023
ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ
ಇನ್ನೂ ಇಂದು ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದೆ. ಏಪ್ರಿಲ್ 13ರಂದು ಅಧಿಸೂಚನೆ, ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾಗಿರುತ್ತದೆ.

ರಾಜ್ಯದಲ್ಲಿ ಒಟ್ಟು 5 ಕೋಟಿ 21 ಲಕ್ಷ ಮತದಾರರಿದ್ದಾರೆ. ಮಹಿಳೆಯರು 2 ಕೋಟಿ 59 ಲಕ್ಷ ಹಾಗೂ 2 ಕೋಟಿ 62 ಲಕ್ಷ ಪುರುಷ ಮತದಾರರು ಇದ್ದಾರೆ. ಜೊತೆಗೆ 12.15 ಲಕ್ಷ ಯುವ ಮತದಾರರು ಇದ್ದಾರೆ. ಒಟ್ಟು 58,282 ಮತಗಟ್ಟೆಗಳ ಸ್ಥಾಪನೆ ಮಾಡಲಾಗುತ್ತದೆ ಎಂದು ಚುನಾವಣಾ ಆಯೋಗ ಇಂದು ಪತ್ರಿಕಾಗೋಷ್ಠಿ ವೇಳೆ ತಿಳಿಸಿದೆ.












Click it and Unblock the Notifications