Actor Upendra: ಪಕ್ಷವು ನಿಮ್ಮದೇ ಅಧಿಕಾರವೂ ನಿಮ್ಮದೇ ಎಂಬ ಘೋಷಣೆ ಮೂಲಕ ಬುದ್ದಿವಂತನ ಹೊಸ ತಂತ್ರ!
ಬೆಂಗಳೂರು,ಮೇ1: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಪ್ರತಿಷ್ಠಗೆಯ ಕಣವಾಗಿರುವ ರಾಜಕೀಯ ಪಕ್ಷಗಳಿಗೆ ಅಬ್ಬರದ ಪ್ರಚಾರವನ್ನ ನಡೆಸುತ್ತಿದೆ, ಇತ್ತ ರಿಯಲ್ ಸ್ಟಾರ್ ಉಪೇಂದ್ರ 110 ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಸೋಮವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಕಿಯ ಬೆಳೆಯಬೇಕು, ಪ್ರಜೆಗಳು ಉದ್ಧಾರ ಆಗ್ಬೇಕು.ನೋಟಗೆ ಮತ ಹಾಕುವ ಮುನ್ನ ಯೋಚನೆ ಮಾಡಿ ಮತ ಹಾಕಿ, ನೋಟ ಮತದ ಬಗ್ಗೆ ತಿಳಿದುಕೊಂಡು ನೋಟಗೆ ವೋಟ್ ಹಾಕಿ ಎಂದು ಹೇಳಿದರು.

ಇನ್ನೂ ರಾಜಕೀಯ ಲೆಕ್ಕಾಚಾರದ ನಡುವೆ ಹೊಸ ತಂತ್ರವನ್ನ ಉಪಯೋಗಿಸಿರುವ ಉಪೇಂದ್ರ ಅವರು, ಪಕ್ಷವು ನಿಮ್ಮದೇ ಅಧಿಕಾರವೂ ನಿಮ್ಮದೇ' ಎಂಬ ಘೋಷಣೆ ಮೂಲಕ ಹೊಸ ರಾಜಕೀಯ ತಂತ್ರ ಹೆಣೆದಿದ್ದಾರೆ. ಇನ್ನೂ ಪ್ರಜಾಕೀಯ app ಬಗ್ಗೆಯೂ ಉಪೇಂದ್ರ ಅವರು ಮಾಹಿತಿ ನೀಡಿದ್ದಾರೆ. ಜನರ ಡಿಮ್ಯಾಂಡ್ ನಮಗೆ ಗೊತ್ತಿದೆ. ಪಾರದರ್ಶಕ ರಿಪೋರ್ಟ್ ಕೊಡ್ತೀವಿ. ಎಲೆಕ್ಷನ್, ಸೆಲೆಕ್ಷನ್, ಕರೆಕ್ಷನ್ ನಮ್ಮ ಸೂತ್ರ ಎಂದು ವಿವರಿಸಿದರು.
ಪ್ರಜಾಕೀಯ ಬರೀ ವೋಟ್ ಹಾಕಿ ಅಂತಿಲ್ಲ. ನಮ್ಮ ಜೊತೆ ನಿರಂತರವಾಗಿ ಕನೆಕ್ಟ್ ಆಗಬೇಕು ಎಂದು ಚುನಾವಣಾ ಕಣದಲ್ಲಿರುವ 110 ಜನ ಅಭ್ಯರ್ಥಿಗಳನ್ನ ಉಪೇಂದ್ರ ಪರಿಚಯಿಸಿದ್ದಾರೆ. ಇನ್ನೂ ನಮ್ಮ ಪ್ರಚಾರ ಹಾಗೂ ಹಳ್ಳಿ ಹಳ್ಳಿಗೂ ಪ್ರಜಾಕೀಯ ತಲುಪಿದೆ. 110 ಕ್ಷೇತ್ರದಲ್ಲೂ ಪ್ರಜಾಕೀಯ ಬರುತ್ತೆ ಎಂಬ ವಿಶ್ವಾಸವನ್ನ ವ್ಯಕ್ತಪಡಿಸಿದರು.
ಯಾರಿಗೆ ಜನರ ಸೇವೆ ಮಾಡಬೇಕು ಎನ್ನುವ ಇಷ್ಟ ಇರುತ್ತದೆಯೋ ಅವರು ಚುನಾವಣೆ ಗೆ ಸ್ಪರ್ಧೆ ನಡೆಸಿದ್ದಾರೆ. ಯಾವುದೇ ರೀತಿಯ ಹಣವನ್ನ ಖರ್ಚು ಮಾಡ್ಬೇಡಿ,ವಿಚಾರಗಳನ್ನ ಖರ್ಚು ಮಾಡಿ ಎಂದು ಹೇಳಿದ್ದೇನೆ. ಪ್ರತಿಯೊಂದು ಕ್ಷೇತ್ರದ ಜನರಿಗೆ ಏನ್ ಬೇಕು ಎಂದು ತಿಳಿದುಕೊಂಡು ಪಾರದರ್ಶಕವಾಗಿ ಕೆಲಸ ಮಾಡಿ ಎಂದು ಹೇಳಿದ್ದೇವೆ ಎಂದು ಉಪೇಂದ್ರ ಹೇಳಿದರು.
ನಮ್ಮ ಪಕ್ಷದಲ್ಲಿ ಯಾರು ಪ್ರಚಾರಕ್ಕೆ ಹೋಗ್ತಾ ಇಲ್ಲ. ಗ್ರಾಮೀಣ ಭಾಗದಲ್ಲಿ ಯುವಕ, ಯುವತಿಯರು ಹೇಳ್ತಾ ಇದ್ದಾರೆ ನಮ್ಮ ಪಕ್ಷ ಅದು ನಾವು ಮತ ಹಾಕ್ತಿವಿ ಪ್ರಚಾರಕ್ಕೆ ಬರ್ಬೇಡಿ ಅಂತ ಹೇಳಿದ್ದಾರೆ. ದೇಶದಲ್ಲಿ ನಿರಂತರವಾಗಿ ಪ್ರಜಾಪ್ರಭುತ್ವ ಬೇಕು. ವ್ಯಾಪಾರಿ ರಾಜಕೀಯ ಮಾಡಬೇಡಿ ಅಂತ ನಮ್ಮ ಅಭ್ಯರ್ಥಿಗಳಿಗೆ ಹೇಳಿದ್ದೇನೆ. ಜನರಿಗೆ ತಲುಪುವುದು ನಿಧಾನವಾದರೂ ಸರಿ ವ್ಯಾಪಾರಿ ರಾಜಕಾರಣಾ ಮಾಡ್ಬೇಡಿ. ಹಣ ಎಲ್ಲದಕ್ಕೂ ಮುಖ್ಯ ಅಲ್ಲ, ಜನ ಬಲವೂ ಮುಖ್ಯ ಎಂದು ಹೇಳಿದರು.
ನಮ್ಮ ಪ್ರಣಾಳಿಕೆಯಂತಹ ಪ್ರಣಾಳಿಕೆ ಪ್ರಪಂಚದಲ್ಲಿ ಯಾರು ಕೊಟ್ಟಿಲ್ಲ. ಕುಕ್ಕರ್ ಕೊಡ್ತಾರೆ ಬಟ್, ಅವ್ರಿಗೆ ಸ್ಟವ್ ಬೇಕಾಗಿರುತ್ತೆ. ಅವರಿಗೆ ಬೇಜಾರಾಗಲ್ವಾ. ಸ್ಟಾರ್ಗಳು ನಮಗೆ ನಮ್ಮ ಅಭ್ಯರ್ಥಿಗಳು. ಮತದಾರರು ಸ್ಟಾರ್ಗಳು. ಟ್ಯಾಲೆಂಟ್ ಗಿಂತ ಕಲ್ಪನೆ ಬಹಳ ಮುಖ್ಯ ಅಂತೆ ಅಲ್ಬರ್ಟ್ ಐನ್‍ಸ್ಟೈನ್ ಹೇಳಿದ್ದಾರೆ. ಬದಲಾವಣೆ ಬೇಕು. ಕರೆಕ್ಟ್ ಅನ್ನಿಸುದ್ರೆ ಮಾಡಿ ಎಂದು ಉಪೇಂದ್ರ ತಿಳಿಸಿದರು.
ನಿಮ್ಮ ಬೇಡಿಕೆಯೇ ನಮ್ಮ ಪ್ರಣಾಳಿಕೆ, ಜನರಿಗೆ ಏನ್ ಬೇಕು ಅಂತ ಅವರಿಗೆ ಗೊತ್ತು, ನಾವು ನಮ್ಮ ಪ್ರಣಾಳಿಕೆಯನ್ನ ಬಿಡುಗಡೆ ಮಾಡುವುದಲ್ಲ. ಜನರ ಬೇಡಿಕೆಯನ್ನ ತಿಳಿದು ಕೆಲಸ ಮಾಡಬೇಕು.
ರಾಜ್ಯದಲ್ಲಿ ಅತಂತ್ರ ಸರ್ಕಾರದ ಕುರಿತು ಮಾತನಾಡಿದ ಅವರು, ಅತಂತ್ರ ಫಲಿತಾಂಶ ಬಂದು ನಮ್ಮ ಪಕ್ಷದಿಂದ 20 ಸೀಟ್ ಬಂದ್ರೆ, ನಾವು ಜನರ ಬಳಿಗೆ ನಿಮಗೆ ಏನ್ ಬೇಕು ಅಂತ ಅವರಿಗೆ ಕೇಳ್ತಿವಿ, ಅವರ ಬೇಡಿಕೆಯನ್ನ ಕೇಳಿ ನಾವು ಮುಂದುವರೆಯುತ್ತೇವೆ ಎಂದು ಹೇಳಿದರು.












Click it and Unblock the Notifications