ಕರ್ನಾಟಕ ಅಸೆಂಬ್ಲಿ ಉಪಚುನಾವಣೆ: ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳು

Recommended Video

      ಕರ್ನಾಟಕ ಅಸೆಂಬ್ಲಿ ಉಪಚುನಾವಣೆ: ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳು | ONeindia Kananda

      ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಅನರ್ಹ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿಯುತ್ತದೆ ಎನ್ನುವ ವಿಶ್ವಾಸದಲ್ಲಿರುವ ಕಾಂಗ್ರೆಸ್ ಉಪಚುನಾವಣೆಗೆ ಪೂರ್ವತಯಾರಿ ನಡೆಸುತ್ತಿದೆ.

      ಕಾಂಗ್ರೆಸ್ - ಜೆಡಿಎಸ್ ಪಕ್ಷದ ಹದಿನೇಳು ಶಾಸಕರನ್ನು ಏನು ರಮೇಶ್ ಕುಮಾರ್ ಅನರ್ಹಗೊಳಿಸಿದ್ದರೋ, ಅದರಲ್ಲಿ ಸರಿಯಾಗಿ ಪೆಟ್ಟು ಬಿದ್ದಿದ್ದು ಕಾಂಗ್ರೆಸ್ಸಿಗೆ. ಯಾಕೆಂದರೆ, ಅನರ್ಹಗೊಂಡವರಲ್ಲಿ ಹದಿನಾಲ್ಕು ಶಾಸಕರು ಕಾಂಗ್ರೆಸ್ಸಿನವರು.

      ಹಾಗಾಗಿ, ಆ ಕ್ಷೇತ್ರಗಳಲ್ಲಿ ನಡೆಯಲೇಬೇಕಾದ ಉಪಚುನಾವಣೆಯನ್ನು ಗೆಲ್ಲುವುದು ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಪ್ರಶ್ನೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೋ ಅಥವಾ ಪ್ರತ್ಯೇಕವಾಗಿ ಸ್ಪರ್ಧಿಸುತ್ತದೋ ಎನ್ನುವುದಕ್ಕೆ ಸದ್ಯದ ಮಟ್ಟಿಗೆ ಸ್ಪಷ್ಟನೆಯಿಲ್ಲ.

      ದೇವೇಗೌಡ್ರು, ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಗಿದ ಅಧ್ಯಾಯ ಎಂದು ಸೂಚ್ಯವಾಗಿ ಹೇಳಿದ್ದರೂ, ಮುಂದೇನಾಗುತ್ತೋ ಗೊತ್ತಿಲ್ಲ. ಈ ನಡುವೆ, ಎಲ್ಲಾ ಹದಿನೇಳು ಕ್ಷೇತ್ರಗಳಿಗೆ, ಕಾಂಗ್ರೆಸ್ ತನ್ನ ವೀಕ್ಷಕರನ್ನು ನೇಮಿಸಿದೆ. ಜೊತೆಗೆ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನೂ ಸಿದ್ದಪಡಿಸಿದೆ, ಅದು ಹೀಗಿದೆ:

      ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳು

      ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳು

      ಕ್ಷೇತ್ರ: ಯಲ್ಲಾಪುರ
      ಪ್ರತಿನಿಧಿಸುತ್ತಿದ್ದವರು: ಶಿವರಾಮ್ ಹೆಬ್ಬಾರ್
      ಸಂಭಾವ್ಯ ಅಭ್ಯರ್ಥಿ: ಪ್ರಶಾಂತ್ ದೇಶಪಾಂಡೆ / ಭೀಮಣ್ಣ ನಾಯಕ

      --

      ಕ್ಷೇತ್ರ: ಕೆ ಆರ್ ಪೇಟೆ
      ಪ್ರತಿನಿಧಿಸುತ್ತಿದ್ದವರು: ನಾರಾಯಣ ಗೌಡ
      ಸಂಭಾವ್ಯ ಅಭ್ಯರ್ಥಿ: ಕೆ ಬಿ ಚಂದ್ರಶೇಖರ್, ಚೆಲುವರಾಯಸ್ವಾಮಿ

      --

      ಕ್ಷೇತ್ರ: ರಾಜರಾಜೇಶ್ವರಿ ನಗರ (ಬೆಂಗಳೂರು)
      ಪ್ರತಿನಿಧಿಸುತ್ತಿದ್ದವರು: ಮುನಿರತ್ನ
      ಸಂಭಾವ್ಯ ಅಭ್ಯರ್ಥಿ: ಹನುಮಂತರಾಯಪ್ಪ

      ಎಚ್ ವಿಶ್ವನಾಥ್ ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಸಂಭಾವ್ಯರು

      ಎಚ್ ವಿಶ್ವನಾಥ್ ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಸಂಭಾವ್ಯರು

      ಕ್ಷೇತ್ರ: ಹುಣಸೂರು
      ಪ್ರತಿನಿಧಿಸುತ್ತಿದ್ದವರು: ಎಚ್ ವಿಶ್ವನಾಥ್
      ಸಂಭಾವ್ಯ ಅಭ್ಯರ್ಥಿ: ವಿಜಯಶಂಕರ್, ಎಚ್ ಪಿ ಮಂಜುನಾಥ್

      --

      ಕ್ಷೇತ್ರ: ಹೊಸಕೋಟೆ
      ಪ್ರತಿನಿಧಿಸುತ್ತಿದ್ದವರು: ಎಂಟಿಬಿ ನಾಗರಾಜ್
      ಸಂಭಾವ್ಯ ಅಭ್ಯರ್ಥಿ: ಎಂ ಮಂಜು, ಶರತ್

      --

      ಕ್ಷೇತ್ರ: ವಿಜಯನಗರ (ಬಳ್ಳಾರಿ)
      ಪ್ರತಿನಿಧಿಸುತ್ತಿದ್ದವರು: ಆನಂದ್ ಸಿಂಗ್
      ಸಂಭಾವ್ಯ ಅಭ್ಯರ್ಥಿ: ಸಂತೋಷ್ ಲಾಡ್

      ಪ್ರಿಯಕೃಷ್ಣ ಯಶವಂತಪುರದಿಂದ?

      ಪ್ರಿಯಕೃಷ್ಣ ಯಶವಂತಪುರದಿಂದ?

      ಕ್ಷೇತ್ರ: ಕೃಷ್ಣರಾಜಪುರ (ಬೆಂಗಳೂರು)
      ಪ್ರತಿನಿಧಿಸುತ್ತಿದ್ದವರು: ಭೈರತಿ ಬಸವರಾಜ್
      ಸಂಭಾವ್ಯ ಅಭ್ಯರ್ಥಿ: ಉದಯ್ ರೆಡ್ಡಿ, ನಾರಾಯಣಸ್ವಾಮಿ

      --

      ಕ್ಷೇತ್ರ: ಮಸ್ಕಿ
      ಪ್ರತಿನಿಧಿಸುತ್ತಿದ್ದವರು: ಪ್ರತಾಪ್ ಗೌಡ ಪಾಟೀಲ್
      ಸಂಭಾವ್ಯ ಅಭ್ಯರ್ಥಿ: ಬಿ.ವಿ.ನಾಯಕ್‌, ರಾಜಾ ರಾಯಪ್ಪ ನಾಯಕ್‌

      --

      ಕ್ಷೇತ್ರ: ಯಶವಂತಪುರ (ಬೆಂಗಳೂರು)
      ಪ್ರತಿನಿಧಿಸುತ್ತಿದ್ದವರು: ಎಸ್ ಟಿ ಸೋಮಶೇಖರ್
      ಸಂಭಾವ್ಯ ಅಭ್ಯರ್ಥಿ: ಪ್ರಿಯಕೃಷ್ಣ

      ಡಾ. ಕೆ ಸುಧಾಕರ್ ಜಾಗಕ್ಕೆ ಯಾರು?

      ಡಾ. ಕೆ ಸುಧಾಕರ್ ಜಾಗಕ್ಕೆ ಯಾರು?

      ಕ್ಷೇತ್ರ: ಚಿಕ್ಕಬಳ್ಳಾಪುರ
      ಪ್ರತಿನಿಧಿಸುತ್ತಿದ್ದವರು: ಡಾ. ಕೆ ಸುಧಾಕರ್
      ಸಂಭಾವ್ಯ ಅಭ್ಯರ್ಥಿ: ಡಾ. ಎಂ ಸಿ ಸುಧಾಕರ್

      --

      ಕ್ಷೇತ್ರ: ರಾಣೆಬೆನ್ನೂರು
      ಪ್ರತಿನಿಧಿಸುತ್ತಿದ್ದವರು: ಆರ್ ಶಂಕರ್
      ಸಂಭಾವ್ಯ ಅಭ್ಯರ್ಥಿ: ಕೆ ಬಿ ಕೋಳಿವಾಡ, ಪ್ರಕಾಶ್ ಕೋಳಿವಾಡ

      --

      ಕ್ಷೇತ್ರ: ಶಿವಾಜಿನಗರ (ಬೆಂಗಳೂರು)
      ಪ್ರತಿನಿಧಿಸುತ್ತಿದ್ದವರು: ರೋಷನ್ ಬೇಗ್
      ಸಂಭಾವ್ಯ ಅಭ್ಯರ್ಥಿ: ರಿಜ್ವಾನ್ ಅರ್ಷದ್

      ರಮೇಶ್ ಜಾರಕಿಹೊಳಿ ಸ್ಥಾನಕ್ಕೆ ಅವರ ಸಹೋದರ

      ರಮೇಶ್ ಜಾರಕಿಹೊಳಿ ಸ್ಥಾನಕ್ಕೆ ಅವರ ಸಹೋದರ

      ಕ್ಷೇತ್ರ: ಗೋಕಾಕ್
      ಪ್ರತಿನಿಧಿಸುತ್ತಿದ್ದವರು: ರಮೇಶ್ ಜಾರಕಿಹೊಳಿ
      ಸಂಭಾವ್ಯ ಅಭ್ಯರ್ಥಿ: ಲಖನ್ ಜಾರಕಿಹೊಳಿ

      --

      ಕ್ಷೇತ್ರ: ಅಥಣಿ
      ಪ್ರತಿನಿಧಿಸುತ್ತಿದ್ದವರು: ಮಹೇಶ್ ಕುಮಠಳ್ಳಿ
      ಸಂಭಾವ್ಯ ಅಭ್ಯರ್ಥಿ: ಎ ಬಿ ಪಾಟೀಲ್

      --

      ಕ್ಷೇತ್ರ: ಹಿರೇಕೆರೂರು
      ಪ್ರತಿನಿಧಿಸುತ್ತಿದ್ದವರು: ಬಿ ಸಿ ಪಾಟೀಲ್
      ಸಂಭಾವ್ಯ ಅಭ್ಯರ್ಥಿ: ಯು ಬಿ ಬಣಕರ್

      ಪ್ರಕಾಶ್ ಹುಕ್ಕೇರಿ ಸಂಭಾವ್ಯ ಅಭ್ಯರ್ಥಿ

      ಪ್ರಕಾಶ್ ಹುಕ್ಕೇರಿ ಸಂಭಾವ್ಯ ಅಭ್ಯರ್ಥಿ

      ಕ್ಷೇತ್ರ: ಕಾಗವಾಡ
      ಪ್ರತಿನಿಧಿಸುತ್ತಿದ್ದವರು: ಶ್ರೀಮಂತ ಪಾಟೀಲ್
      ಸಂಭಾವ್ಯ ಅಭ್ಯರ್ಥಿ: ಪ್ರಕಾಶ್ ಹುಕ್ಕೇರಿ

      --

      ಕ್ಷೇತ್ರ: ಮಹಾಲಕ್ಷ್ಮೀ ಲೇಔಟ್
      ಪ್ರತಿನಿಧಿಸುತ್ತಿದ್ದವರು: ಕೆ ಗೋಪಾಲಯ್ಯ
      ಸಂಭಾವ್ಯ ಅಭ್ಯರ್ಥಿ: ಮಾಗಡಿ ಬಾಲಕೃಷ್ಣ, ಎಚ್ ಎಸ್ ಮಂಜುನಾಥ್

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+