ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ದಿನಕ್ಕೆ 5 ಲಕ್ಷ ಡೋಸ್ ಲಸಿಕೆಗೆ ಬೇಡಿಕೆ, ಪೂರೈಕೆ ಎಷ್ಟು?

|
Google Oneindia Kannada News

ಬೆಂಗಳೂರು, ಜುಲೈ 14; ಕರ್ನಾಟಕದಲ್ಲಿ ಬೇಡಿಕೆ ಇರುವಷ್ಟು ಕೋವಿಡ್ ಲಸಿಕೆ ಪೂರೈಕೆ ಆಗುತ್ತಿದೆಯೇ?. ಲಸಿಕಾ ಅಭಿಯಾನ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂಬುದು ಆರೋಪವಾಗಿದೆ.

ಜುಲೈ ತಿಂಗಳ 14 ದಿನದಲ್ಲಿ ರಾಜ್ಯದಲ್ಲಿ ಪ್ರತಿ ದಿನ ಸುಮಾರು 2.56 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿದೆ. ಪ್ರತಿದಿನ ರಾಜ್ಯಕ್ಕೆ 5 ಲಕ್ಷ ಡೋಸ್ ಲಸಿಕೆ ಬೇಕು ಎಂದು ಸರ್ಕಾರ ಕೇಂದ್ರಕ್ಕೆ ಬೇಡಿಕೆ ಇಟ್ಟಿದೆ.

ಮುಂಬೈ ಪ್ರವೇಶ: 2 ಡೋಸ್ ಲಸಿಕೆ ಪಡೆದವರಿಗೆ ವಿಶೇಷ ವಿನಾಯಿತಿ! ಮುಂಬೈ ಪ್ರವೇಶ: 2 ಡೋಸ್ ಲಸಿಕೆ ಪಡೆದವರಿಗೆ ವಿಶೇಷ ವಿನಾಯಿತಿ!

ಪ್ರಸ್ತುತ ಕೇಂದ್ರ ಸರ್ಕಾರದಿಂದಲೇ ಲಸಿಕೆ ಪೂರೈಕೆಯಾಗುತ್ತಿದೆ. ಆದರೆ ರಾಜ್ಯಕ್ಕೆ ನೀಡುವ ಲಸಿಕೆಯ ಪ್ರಮಾಣವನ್ನು ಏರಿಕೆ ಮಾಡಿಲ್ಲ. ಜೂನ್ 21ರಿಂದ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲಾಗಿತ್ತು.

 ಕೊರೊನಾ ಲಸಿಕೆ ಪಡೆಯದ ಶಿಕ್ಷಕರಿಗೆ ಹೊಸ ನಿಯಮ ಜಾರಿಗೆ ತಂದ ಗೋವಾ ಸರ್ಕಾರ ಕೊರೊನಾ ಲಸಿಕೆ ಪಡೆಯದ ಶಿಕ್ಷಕರಿಗೆ ಹೊಸ ನಿಯಮ ಜಾರಿಗೆ ತಂದ ಗೋವಾ ಸರ್ಕಾರ

Karnataka Asks Union Government To Supply Five Lakh Dose Vaccine Per Day

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಮಾತನಾಡಿದ್ದಾರೆ. "ಸಂಗ್ರಹ ಇರುವ ಲಸಿಕೆಯನ್ನು ನಾವು ಹಂಚಿಕೆ ಮಾಡುತ್ತಿದ್ದೇವೆ. ಜೂನ್ 21ರ ಬಳಿಕ 43,21,690 ಡೋಸ್ ಲಸಿಕೆಯನ್ನು ಸರ್ಕಾರದ ಬಳಕೆಗಾಗಿ ಕೇಂದ್ರದಿಂದ ಪೂರೈಕೆಯಾಗಿದೆ" ಎಂದು ಹೇಳಿದ್ದಾರೆ.

ಸೆಪ್ಟೆಂಬರ್‌ನಿಂದ ಸ್ಪುಟ್ನಿಕ್ V ಲಸಿಕೆ ಉತ್ಪಾದಿಸಲಿದೆ ಸೀರಂ ಇನ್‌ಸ್ಟಿಟ್ಯೂಟ್ಸೆಪ್ಟೆಂಬರ್‌ನಿಂದ ಸ್ಪುಟ್ನಿಕ್ V ಲಸಿಕೆ ಉತ್ಪಾದಿಸಲಿದೆ ಸೀರಂ ಇನ್‌ಸ್ಟಿಟ್ಯೂಟ್

ಲಸಿಕೆ ನೀಡುವ ಪ್ರಮಾಣ ಇಳಿಕೆ; ಜುಲೈ 11ರ ಬಳಿಕ ಬೆಂಗಳೂರು ನಗರದಲ್ಲಿ ಲಸಿಕೆ ನೀಡುವ ಪ್ರಮಾಣ ಇಳಿಕೆಯಾಗಿದೆ. ಜುಲೈ 4 ರಿಂದ 10ರ ತನಕ ಪ್ರತಿದಿನ 75,938 ಡೋಸ್ ಲಸಿಕೆಯನ್ನು ನೀಡಲಾಗಿದೆ. ಪ್ರಸ್ತುತ ಈ ಸಂಖ್ಯೆ 48,197ಕ್ಕೆ ಇಳಿಕೆಯಾಗಿದೆ.

ಮಂಗಳವಾರ ಬಿಬಿಎಂಪಿ ವ್ಯಾಪ್ತಿಯಲ್ಲಿ 39,785 ಡೋಸ್ ಲಸಿಕೆಯನ್ನು ನೀಡಲಾಗಿದೆ. ಬೆಂಗಳೂರು ನಗರದದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿದಿನ 200 ಡೋಸ್ ಲಸಿಕೆ ನೀಡಲಾಗುತ್ತಿದೆ. ಇದನ್ನು 300ಕ್ಕೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ.

Recommended Video

ತಲೈವಾ ರಾಜಕೀಯದಿಂದ ಹಿಂದೆ ಸರಿಯಲು ಕಾರಣವಾಗಿದ್ದು ಏನು ಗೊತ್ತಾ? | Oneindia Kannada

ಬೇಡಿಕೆ ಇರುವಷ್ಟು ಲಸಿಕೆ ಪೂರೈಕೆ ಆಗುತ್ತಿಲ್ಲ ಎಂಬುದನ್ನು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಕೋವಿಶೀಲ್ಡ್, ಕೊವ್ಯಾಕ್ಸಿನ್ ಜೊತೆಗೆ ಸ್ಪುಟ್ನಿಕ್ ವಿ ಲಸಿಕೆಯನ್ನು ಸಹ ಬೆಂಗಳೂರು ನಗರದಲ್ಲಿ ನೀಡಲಾಗುತ್ತಿದೆ.

English summary
Karnataka government asked union government to supply five lakh doses vaccine per day. State has been administering about 2.56 lakh doses on average daily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X