KRS Dam: ತಮಿಳುನಾಡಿಗೆ 19 ಟಿಎಂಸಿ ನೀರು ಹರಿಸಲು ಆದೇಶ
ಕಳೆದ ಬಾರಿ ಭೀಕರ ಬರಗಾಲದ ನಡುವೆಯೂ ರಾಜ್ಯದಿಂದ ತಮಿಳುನಾಡಿಗೆ ನೀರು ಹರಿಸಲಾಗಿದೆ. ಈ ಬಾರಿ ಮುಂಗಾರು ಉತ್ತಮವಾಗಿದ್ದು ಕಾವೇರಿ ಕೊಳ್ಳದ ಜಲಾಶಯಗಳು ಭರ್ತಿಯಾಗುತ್ತವೆ, ಬೆಳೆ ಬೆಳೆಯಬಹುದು ಎಂದು ಕಾಯುತ್ತಿದ್ದ ರೈತರಿಗೆ ಆಘಾತ ಎದುರಾಗಿದೆ. ನಾಳೆಯಿಂದಲೇ (ಜುಲೈ 12) ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ರಾಜ್ಯಕ್ಕೆ ಆದೇಶ ನೀಡಿದೆ.
ಜುಲೈ 12 ರಿಂದ ಜುಲೈ 31ರವರೆಗೆ ಪ್ರತಿ ದಿನ 1 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ರಾಜ್ಯಕ್ಕೆ ಆದೇಶ ನೀಡಿದ್ದು, ಬೆಳೆ ಬೆಳೆಯಲು ನೀರಿಗೆ ಕಾಯುತ್ತಿದ್ದ ಕೆಆರ್ ಎಸ್ ಜಲಾನಯನ ಪ್ರದೇಶದ ರೈತರಿಗೆ ಆಘಾತ ಎದುರಾಗಿದೆ.

ಬಿಳಿಗುಂಡ್ಲುವಿನಲ್ಲಿ ಮುಂದಿನ 19 ದಿನ 11,500 ಕ್ಯೂಸೆಕ್ಸ್ ನೀರು ಹರಿಯುವಂತೆ ನೋಡಿಕೊಳ್ಳಲು ರಾಜ್ಯಕ್ಕೆ ಸೂಚನೆ ಕೊಟ್ಟಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಈ ಬಗ್ಗೆ ಅಂತಿಮ ನಿರ್ಧಾರ ಮಾಡಲಿದೆ.
𝐂𝐖𝐑𝐂 𝐫𝐞𝐜𝐨𝐦𝐦𝐞𝐧𝐝𝐬 𝐊𝐚𝐫𝐧𝐚𝐭𝐚𝐤𝐚 𝐭𝐨 𝐫𝐞𝐥𝐞𝐚𝐬𝐞 𝐝𝐚𝐢𝐥𝐲 𝟏 𝐓𝐌𝐂 𝐨𝐟 𝐊𝐚𝐯𝐞𝐫𝐢 𝐰𝐚𝐭𝐞𝐫 𝐭𝐨 𝐓𝐚𝐦𝐢𝐥 𝐍𝐚𝐝𝐮 𝐟𝐫𝐨𝐦 𝐉𝐮𝐥𝐲 𝟏𝟐𝐭𝐡 𝐭𝐨 𝟑𝟏𝐬𝐭 𝐉𝐮𝐥𝐲 𝐢𝐞 ( 𝟏𝟏,𝟓𝟎𝟎 𝐜𝐮𝐬𝐞𝐜𝐬 𝐚𝐭 𝐁𝐢𝐥𝐢𝐠𝐮𝐧𝐝𝐮𝐥𝐮 𝐟𝐨𝐫 𝐧𝐞𝐱𝐭 𝟏𝟗… pic.twitter.com/B6FrxEGhSF
— ರವಿ ಕೀರ್ತಿ ಗೌಡ (@ravikeerthi22) July 11, 2024
ರಾಜ್ಯಕ್ಕೆ ಮತ್ತೆ ಅನ್ಯಾಯ?
ಕಬಿನಿ ಜಲಾಶಯ ಭರ್ತಿಯಾಗುವ ಹಂತ ತಲುಪಿದ್ದು, ಕೆಆರ್ ಎಸ್ ಜಲಾಶಯ ಇನ್ನೂ ಈಗಷ್ಟೇ ಅರ್ಧ ತುಂಬಿದೆ. ಇನ್ನೂ ಈ ಭಾಗದ ರೈತರಿಗೆ ಬೆಳೆ ಬೆಳೆಯಲು ರಾಜ್ಯ ಸರ್ಕಾರ ನೀರು ಹರಿಸಿಲ್ಲ, ಅಷ್ಟರಲ್ಲಾಗಲೇ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ನೀಡಲಾಗಿದೆ.
ಪ್ರಸ್ತುತ ಬಿಳಿಗುಂಡ್ಲುವಿನಲ್ಲಿ 4000-5000 ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಹರಿಯುತ್ತಿದೆ. ಅದರ ಪ್ರಕಾರ ರಾಜ್ಯ ಇನ್ನೂ 6000-7000 ಕ್ಯೂಸೆಕ್ಸ್ ನೀರನ್ನು ಡ್ಯಾಂಗಳಿಂದ ಬಿಡುಗಡೆ ಮಾಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಮುಂಗಾರು ಚುರುಕಾದರೆ ಇದೇನೂ ರಾಜ್ಯಕ್ಕೆ ಸಮಸ್ಯೆ ಆಗುವುದಿಲ್ಲ, ಒಂದು ವೇಳೆ ಮಳೆ ಕೈಕೊಟ್ಟರೆ ಮಾತ್ರ ಕಷ್ಟವಾಗಲಿದೆ.
ರಾಜ್ಯದಲ್ಲಿ ಇನ್ನೂ ನಿರೀಕ್ಷಿತ ಪ್ರಮಾಣದಲ್ಲ ಮಳೆಯಾಗಿಲ್ಲದೇ ಇರುವುದರಿಂದ, ಜಲಾಶಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ, ಯಾವುದೇ ನಿರ್ಧಾರ ಮಾಡುವ ಮುನ್ನ ಸಮಿತಿ ಜುಲೈ 25ರವರೆಗೆ ಕಾಯಬೇಕು ಎಂದು ರಾಜ್ಯ ಸರ್ಕಾರ ಸಮಿತಿ ಮುಂದೆ ವಾದ ಮಂಡಿಸಿದೆ.
2024ರ ಫೆಬ್ರವರಿಯಿಂದ ಮೇ ವರೆಗೆ ತಮಿಳುನಾಡಿಗೆ ಹರಿಸಬೇಕಿದ್ದ ನೀರನ್ನು ಕರ್ನಾಟಕ ಬಿಡುಗಡೆ ಮಾಡಿಲ್ಲ ಎಂದು ತಮಿಳುನಾಡು ವಾದ ಮಂಡಿಸಿದೆ. ಈ ವರ್ಷ ರಾಜ್ಯದಲ್ಲಿ ವಾಡಿಕೆಯಂತೆ ಮಳೆಯಾಗಿದ್ದು, ತಮಿಳುನಾಡಿಗೆ ನೀರು ಹರಿಸಲು ನಿರ್ದೇಶನ ನೀಡುವಂತೆ ತಮಿಳುನಾಡು ಸರ್ಕಾರ ಮನವಿ ಮಾಡಿದೆ.
ಎರಡೂ ಕಡೆಯ ವಾದವನ್ನು ಪರಿಶೀಲಿಸಿದ ಸಮಿತಿ, ತಮಿಳುನಾಡಿಗೆ 19 ದಿನಗಳಲ್ಲಿ 19 ಟಿಎಂಸಿ ನೀರು ಹರಿಸಲು ಆದೇಶ ಕೊಟ್ಟಿದೆ.












Click it and Unblock the Notifications