Mann Ki Baat : ಪ್ರಧಾನಿ ಮೋದಿ ಜತೆ ಮನ್ ಕೀ ಬಾತ್ ಕೇಳಲಿದ್ದಾರೆ ನಮ್ಮ ಕರ್ನಾಟಕದ ಸಾಧಕರು

ಬೆಂಗಳೂರು,ಏಪ್ರಿಲ್30:‌ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮದ 100 ನೇ ಸಂಚಿಕೆ ಭಾನುವಾರ ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಈ ವೇಳೆ ಕರ್ನಾಟಕ ರಾಜ್ಯದ ಸಾಧಕರು ಕೂಡ ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ಈ ಬಾರೀ ಸಾಕ್ಷಿಯಾಗಲಿದ್ದಾರೆ.

ಮನ್​ ಕೀ ಬಾತ್​​ನ ರಾಜ್ಯದ ಸಾಧಕರ ಬಗ್ಗೆ ಪ್ರಧಾನಿ ಮೋದಿಯವರು ಪ್ರಸ್ತಾಪಿಸಿದ್ದು, ರಾಜ್ಯದ ಸಾಧಕರಿಗೆ ರಾಜಭವನಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮನ್​ ಕೀ ಬಾತ್​​ನ 100ನೇ ಸಂಚಿಕೆಯ ಧ್ವನಿಮುದ್ರಣ ಪ್ರಯುಕ್ತ ಕರ್ನಾಟಕದ 7 ಮಂದಿ ಸಾಧಕರನ್ನು ಪ್ರಸಾರ ಭಾರತಿ ಆಹ್ವಾನಿಸಿದ್ದು, ಇವರು ಏಪ್ರಿಲ್ 26ರಂದು ದೆಹಲಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ.

karnataka achievers will participate with PM Modi in Mann Ki Baat

ಏಪ್ರಿಲ್ 26 ರಂದು ಮನ್ ಕೀ ಬಾತ್ ಸಂಬಂಧಿತ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ರಾಜ್ಯದ ಸಾಧಕರು ಮರುದಿನ ಕರ್ತವ್ಯ ಪಥ, ರಾಷ್ಟ್ರಪತಿ ಭವನ ಮತ್ತು ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾರೆ. iಇನ್ನೂ ಏಪ್ರಿಲ್ 28 ರಂದು ಕೆಂಪು ಕೋಟೆ, ರಾಜ್‌ ಘಾಟ್​ ಮತ್ತು ಮಹಾತ್ಮಾ ಗಾಂಧಿ ಮ್ಯೂಸಿಯಂ ವೀಕ್ಷಿಸಿ ಇಂದು (ಏಪ್ರಿಲ್ 29) ದೆಹಲಿಗೆ ವಾಪಸಾಗಿದ್ದಾರೆ.

ಮನ್​ ಕೀ ಬಾತ್​ನ 100ನೇ ಸಂಚಿಕೆಯ ಪ್ರಸಾರವನ್ನು ರಾಜ್ಯದ ಸಾಧಕರು ಪ್ರಧಾನಿ ಅವರ ಜತೆಗೇ ಇದ್ದು ಕೇಳಲಿದ್ದಾರೆ. 7 ಜನ ಅತಿಥಿಗಳನ್ನು ರಾಜಭವನಕ್ಕೆ ಆಹ್ವಾನಿಸಲಾಗಿದೆ. ಬೆಳಿಗ್ಗೆ ಸುಮಾರಿಗೆ ರಾಜಭವನದಲ್ಲಿ ಹಾಜರಿರುವಂತೆ ಅವರಿಗೆ ಆಹ್ವಾನ ಕಳುಹಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಮೋದಿ ಜತೆ ನೂರನೇ ಸಂಚಿಕೆ ಕೇಳಲಿದ್ದಾರೆ ರಾಜ್ಯದ ಸಾಧಕರು

ಬೆಂಗಳೂರಿನ ಸುರೇಶ್, ಗದಗದ ಕಾವೆಂಶ್ರೀ ಅವರು ಕಲಾ ಚೇತನ ದ ಮೂಲಕ ಮಾಡುವ ಕಲೆ ಮತ್ತು ಸಂಸ್ಕೃತಿ ಸೇವೆ, ಅಡಿಕೆ ನಾರಿನಿಂದ ತಯಾರಿಸಿದ ಅನೇಕ ವಿಶಿಷ್ಟ ಉತ್ಪನ್ನಗಳನ್ನು ಲಂಡನ್ ಮತ್ತು ಯುರೋಪ್‌ನಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕಳುಹಿಸುತ್ತಿರುವ ಶಿವಮೊಗ್ಗದ ಸುರೇಶ್ ಮತ್ತು ಅವರ ಪತ್ನಿ ಮೈಥಿಲಿ ಅವರ ಬಗ್ಗೆ ಮೋದಿ ಮನ್​ ಕೀ ಬಾತ್​ನ ವಿವಿಧ ಆವೃತ್ತಿಗಳಲ್ಲಿ ಉಲ್ಲೇಖಿಸಿದ್ದರು.

ಮನ್ ಕಿ ಬಾತ್ ಕಾರ್ಯಕ್ರಮ ಅಕ್ಟೋಬರ್ 3, 2014 ರಂದು ಪ್ರಾರಂಭವಾದಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ತಿಂಗಳ ಕೊನೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತದ ಅಭಿವೃದ್ಧಿಗೆ ಭಾಗಿಯಾಗಲು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತಿದ್ದಾರೆ. ಪ್ರತಿ ತಿಂಗಳು ವಿವಿಧ ಕ್ಷೇತ್ರದಲ್ಲಿ ಹಲವು ಸಾಧನೆಗಳು, ಕಹಿ ಘಟನೆ, ಸಂತೋಷ ಮತ್ತು ಹೆಮ್ಮೆಯ ಕ್ಷಣಗಳನ್ನು ಮತ್ತು ನವ ಭಾರತಕ್ಕಾಗಿ ಸಲಹೆಗಳನ್ನು ಮೋದಿ ಈ ಕಾರ್ಯಕ್ರಮದ ಮೂಲಕ ಹಂಚಿಕೊಳ್ಳುತ್ತಿದ್ದಾರೆ.ಅದು ಅಲ್ಲದೇ ಈ ಕಾರ್ಯಕ್ರಮ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+