ಮೇ 25ರಂದು ಪಿಯು ಫಲಿತಾಂಶ, ಯಾವ ತಾಣಗಳಲ್ಲಿ ಲಭ್ಯ?
ಬೆಂಗಳೂರು, ಮೇ.24: ಎಸ್ಎಸ್ ಎಲ್ ಸಿ ಸಾಧಕರ ಹೆಸರುಗಳನ್ನು ಕೇಳುತ್ತಿರುವಾಗಲೇ ವಿದ್ಯಾರ್ಥಿ ಜೀವನದ ಮತ್ತೊಂದು ಮಹತ್ವದ ಘಟ್ಟ ದ್ವಿತೀಯ ಪಿಯು ಫಲಿತಾಂಶ ಇದೀಗ ಪ್ರಕಟವಾಗಿದೆ. ಕೆಳಗಿನ ತಾಣಗಳಲ್ಲಿ ಫಲಿತಾಂಶ ನೋಡಬಹುದು. [ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಫಸ್ಟ್, ಯಾದಗಿರಿ ಲಾಸ್ಟ್]
ಫಲಿತಾಂಶವನ್ನು ಈ ತಾಣಗಳಲ್ಲಿ ವೀಕ್ಷಿಸಬಹುದು..
http://karresults.nic.in,
http://www.pue.kar.nic.in
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಮೇ 25, ಬುಧವಾರ ಪ್ರಕಟವಾಗಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಬುಧವಾರ ಬೆಳಿಗ್ಗೆ 11 ಗಂಟೆಗೆ ಫಲಿತಾಂಶ ಪ್ರಕಟ ಮಾಡಲಿದ್ದಾರೆ.[ಪಿಯು ಪ್ರಶ್ನೆ ಪತ್ರಿಕೆ ಸೋರಿಕೆಗೆ ವಾಟ್ಸಪ್ ಗ್ರೂಪ್ ಮಾಡಿದ್ದರು!]

ಫಲಿತಾಂಶವನ್ನು ಸರ್ಕಾರಿ ವೆಬ್ ತಾಣಗಳಲ್ಲಿ ಬುಧವಾರವೇ ವೀಕ್ಷಣೆ ಮಾಡಬಹುದು. 26ರಂದು ಎಲ್ಲ ಕಾಲೇಜುಗಳಲ್ಲಿ ಪ್ರಕಟಣೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ರಾಮೇಗೌಡ ತಿಳಿಸಿದ್ದಾರೆ.












Click it and Unblock the Notifications