ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಪ್ರಕಟ: ಏಪ್ರಿಲ್ 16 ರಿಂದ ಮೇ. 6 ಕ್ಕೆ ಪಿಯುಸಿ ಮುಖ್ಯ ಪರೀಕ್ಷೆ
ಬೆಂಗಳೂರು, ಫೆ. 08: ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಏಪ್ರಿಲ್ 16 ರಿಂದ ಮೇ 06 ರ ವರೆಗೆ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ತಾತ್ಕಾಲಿಕ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಮೂರನೇ ಅಲೆ ಸೋಂಕು ಗಣನೀಯವಾಗಿ ಇಳಿಕೆಯಾಗಿದೆ. ಇದರ ಬೆನ್ನಲ್ಲೇ ಮಾ. 28 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಅಂತಿಮಗೊಳಿಸಲಾಗಿದೆ. ಅದರಂತೆ ಏಪ್ರಿಲ್ 16, 2022 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದೆ.

ವೇಳಾಪಟ್ಟಿ ಹೀಗಿದೆ
16, ಏಪ್ರಿಲ್ 2022 ಗಣಿತ, ಶಿಕ್ಷಣ, ಬೇಸಿಕ್ ಗಣಿತ,
18, ಏಪ್ರಿಲ್ 2022 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
19, ಏಪ್ರಿಲ್ 2022 ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ ನೆಸ್
20,ಏಪ್ರಿಲ್ 2022 ಇತಿಹಾಸ ಮತ್ತು ಭೌತಶಾಸ್ತ್ರ,
21, ಏಪ್ರಿಲ್ 2022 ತಮಿಳು, ಮರಾಠಿ, ತೆಲಗು, ಮಲಯಾಳಮ್ ಉರ್ದು, ಸಂಸ್ಕೃತ, ಅರೇಬಿಕ್, ಫ್ರೆಂಚ್,
22, ಏಪ್ರಿಲ್ 2022 ಲಾಜಿಕ್, ಬಿಜಿನೆಸ್ ಸ್ಟಡೀಸ್,
23 ಏಪ್ರಿಲ್ 2022 ಕರ್ನಾಟಿಕ್ ಸಂಗೀತ ಹಿಂದೂಸ್ತಾನಿ ಸಂಗೀತ, ಸೈಕಾಲಜಿ, ರಸಾಯನಶಾಸ್ತ್ರ,
25, ಏಪ್ರಿಲ್ 2022 ಅರ್ಥಶಾಸ್ತ್ರ,
26 ಏಪ್ರಿಲ್ 2022 ಹಿಂದಿ,
28 ಏಪ್ರಿಲ್ 2022 ಕನ್ನಡ
30 ಏಪ್ರಿಲ್ 2022 ಸಮಾಜ ಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್,
02, ಮೇ 2022 ಭೂಗೋಳ ಶಾಸ್ತ್ರ, ಜೀವಶಾಸ್ತ್ರ,
04, ಮೇ 2022 ಇಂಗ್ಲಿಷ್,
06, ಮೇ. 2022 ಅಕೌಂಟೆನ್ಸಿ, ಜಿಯೋಲಜಿ, ಹೋಮ್ ಸೈನ್ಸ್, ಕನ್ನಡ ( ಐಶ್ಚಿಕ )












Click it and Unblock the Notifications