2ನೇ ಪಿಯುಸಿ ಫಲಿತಾಂಶ: ಯಾವ ಜಿಲ್ಲೆ ಯಾವ ಸ್ಥಾನದಲ್ಲಿದೆ?

ಬೆಂಗಳೂರು, ಮೇ 25: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ(ಮೇ 25) ಬೆಳಗ್ಗೆ ಪ್ರಕಟಗೊಂಡಿದೆ. ದಕ್ಷಿಣ ಕನ್ನಡ ಪ್ರಥಮ ಸ್ಥಾನ ಪಡೆದುಕೊಂಡರೆ, ಯಾದಗಿರಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಎಂದಿನಂತೆ ಬಾಲಕಿಯರು ಮೇಲುಗೈ ಪಡೆದುಕೊಂಡಿದ್ದಾರೆ.

ಮಾರ್ಚ್ 12ರಿಂದ ಮಾ.28ರ ತನಕ 1032 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. 6,36,368 ವಿದ್ಯಾರ್ಥಿಗಳ ಪೈಕಿ 3,64,013 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಈ ಬಾರಿ ಒಟ್ಟಾರೆ ಶೇ.57.20 ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ 60.54 ರಷ್ಟು ಫಲಿತಾಂಶ ಬಂದಿತ್ತು. [2016ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಈಗ ಲಭ್ಯ]

Karnataka 2nd PUC Exam Results 2016 District wise Statistics

ದಕ್ಷಿಣ ಕನ್ನಡ ಸತತ ಎರಡನೇ ಬಾರಿಗೆ ಪ್ರಥಮ ಸ್ಥಾನ ಗಳಿಸಿದೆ. ಕಳೆದ ವರ್ಷ ಶೇ.93.09 ರಷ್ಟು ಫಲಿತಾಂಶ ಪಡೆದಿತ್ತು. ಈ ಬಾರಿ 90.48ರಷ್ಟು ಫಲಿತಾಂಶ ಕಂಡಿದೆ. ಉಡುಪಿ 90.35% (2015ರಲ್ಲಿ ಶೇ. 92.32) ನೊಂದಿಗೆ ಎರಡನೇ ಸ್ಥಾನ ಉಳಿಸಿಕೊಂಡಿದೆ.

ಕಳೆದ ಬಾರಿ ಮೂರನೇ ಸ್ಥಾನದಲ್ಲಿದ್ದ ಉತ್ತರ ಕನ್ನಡ (2016: 76.34%) ಈ ಬಾರಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಕೊಡಗು 79.35% ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ. [ಬಾಳೆಹಣ್ಣು ವ್ಯಾಪಾರಿಯ ಮಗಳು ರಾಜ್ಯಕ್ಕೆ ಪ್ರಥಮ]

ಶೈಕ್ಷಣಿಕ ಜಿಲ್ಲೆ ಮಾರ್ಚ್ 2016 ಫಲಿತಾಂಶ ಮಾರ್ಚ್ 2015 ಫಲಿತಾಂಶ
ಶೇಕಡಾ ಸ್ಥಾನ ಶೇಕಡಾ ಸ್ಥಾನ
ದಕ್ಷಿಣ ಕನ್ನಡ 90.48 1 93.09 1
ಉಡುಪಿ 90.35 2 92.32 2
ಕೊಡಗು
79.35 3 79.84
4
ಉತ್ತರ ಕನ್ನಡ 76.44 4 81.19
3
ಬೆಂಗಳೂರು ದಕ್ಷಿಣ 70.88 5 73.04
7
ಬೆಂಗಳೂರು ಉತ್ತರ 70.83 6 72.80 8
ಶಿವಮೊಗ್ಗ
69.28 7 74.41
6
ಚಿಕ್ಕಮಗಳೂರು
67.34 8 75.18
5
ಬೆಂಗಳೂರು ಗ್ರಾಮಾಂತರ
66.38 9 69.40
12
ಬಾಗಲಕೋಟೆ 65.91 10 70.40
11
ಮೈಸೂರು
65.53 11 65.73
16
ಹಾಸನ
65.47 12 66.64
16
ಚಾಮರಾಜನಗರ
64.86 13 72.16 09
ಚಿಕ್ಕಬಳ್ಳಾಪುರ 63.64
14 68.14 13
ಧಾರವಾಡ
62.86 15 67.25
14
ಬೆಳಗಾವಿ
62.05
16 64.87
17
ಕೋಲಾರ
61.76 17 63.68
18
ಹಾವೇರಿ
60.54 18 71.58
10
ವಿಜಯಪುರ 60.39 19 60.65 25
ಬಳ್ಳಾರಿ 59.09 20 63.48 20
ದಾವಣಗೆರೆ 58.01 21 62.71 21
ಕಲಬುರಗಿ
57.05 22 61.06 23
ತುಮಕೂರು
56.63 23 61.02
24
ಮಂಡ್ಯ
56.52 24 58.57
26
ರಾಮನಗರ 56.36 25 63.60
19
ಕೊಪ್ಪಳ
54.32 26 58.35
27
ಬೀದರ್
52.07 27 54.40 30
ರಾಯಚೂರು
49.61 28 54.88 29
ಗದಗ
49.28 29 51.02
31
ಚಿತ್ರದುರ್ಗ
47.55 30 56.67 28
ಯಾದಗಿರಿ
44.16 31 62.09
22

(ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+