Karnataka 2nd PU Exam 2023 ಸುಸೂತ್ರ, ದಾಖಲೆ ಮಟ್ಟದಲ್ಲಿ ವಿದ್ಯಾರ್ಥಿಗಳ ಹಾಜರಾತಿ, ಯಾವ ಜಿಲ್ಲೆ ಪ್ರಥಮ? ತಿಳಿಯಿರಿ
ಬೆಂಗಳೂರು, ಮಾರ್ಚ್ 10: ರಾಜ್ಯದಲ್ಲಿ ದ್ವಿತೀಯ ಪದವಿ ಪೂರ್ವ (ಪಿಯು 2nd) ಪರೀಕ್ಷೆಯು ಗುರುವಾರ ಮಾರ್ಚ್ 9 ಸುಸೂತ್ರವಾಗಿ ಆರಂಭವಾಗಿದೆ. ಶೇಕಡಾ 96 ಪ್ರತಿಶತದಷ್ಟು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿರುವುದು ಖುಷಿಯ ಸಂಗತಿ. ತುಮಕೂರು ಜಿಲ್ಲೆಯಲ್ಲಿ ತಿಪಟೂರಿನ ಶಾಲೆಯೊಂದರಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೇ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ ಸ್ವಾಗತಿಸಿ ಹಾರೈಸಿದರು.
ಈ ನಡುವೆ ರಾಜ್ಯದ ಬಳ್ಳಾರಿ ಜಿಲ್ಲೆ ಮತ್ತು ಯಾದಗಿರಿಯ ಎರಡು ಕಡೆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಪರಾಧ ಬಿಟ್ಟರೆ ಬೇರೆಲ್ಲೂ ಆ ಬಗ್ಗೆ ವರದಿಯಾಗಿಲ್ಲ. ಮೊದಲ ದಿನವೇ ಒಟ್ಟು 5.1 ಲಕ್ಷ ವಿದ್ಯಾರ್ಥಿಗಳು ಪ್ರಥಮ ಭಾಷೆಯ ಕನ್ನಡ ಮತ್ತು ಅರೇಬಿಕ್ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನೀರ್ಣಯ ಮಂಡಳಿ ಮೂಲಗಳು ತಿಳಿಸಿವೆ.

ಗುರುವಾರ ಆರಂಭವಾದ ಪ್ರಥಮ ಭಾಷಾ ಪರೀಕ್ಷೆಯನ್ನು ರಾಜ್ಯದೆಲ್ಲೆಡೆ ಸುಮಾರು 5.3 ಲಕ್ಷ ವಿದ್ಯಾರ್ಥಿಗಳು ಎದುರಿಸುವ ನಿರೀಕ್ಷೆ ಇತ್ತು. ಆದರೆ ಹಾಗಾಗದೇ 23,771 ಗೈರಾದರು. ಪರಿಣಾಮ ಮೊದಲ ದಿನ ಶೇ. 96% ರಷ್ಟು ಪರೀಕ್ಷಾ ಹಾಜರಾತಿ ದಾಖಲಾಯಿತು. ಈ ಪೈಕಿ ಕರಾವಳಿ ಭಾಗವಾದ ಉಡುಪಿ ಜಿಲ್ಲೆಯಲ್ಲೇ ಅತೀ ಹೆಚ್ಚು ಹಾಜರಾತಿ (99%) ಕಂಡು ಬರುವ ಮೂಲಕ ಆ ಜಿಲ್ಲೆ ಅಗ್ರ ಸ್ಥಾನದಲ್ಲಿದೆ. ಕೊನೆಯ ಸ್ಥಾನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಿಲ್ಲೆಯಾದ ಯಾದಗಿರಿ (93%) ಅತೀ ಕಡಿಮೆ ಇದೆ.
ಈ ವರ್ಷ ಬಹು ಆಯ್ಕೆಯ ಪ್ರಶ್ನೆಗಳನ್ನು (MCQ) ಸೇರಿಸಿರುವುದರಿಂದ ಪರೀಕ್ಷೆ ತುಸು ಸುಲಭಯಕ ಅನ್ನಿಸಿತು ಎಂದು ವಿದ್ಯಾರ್ಥಿಗಳು ಪರೀಕ್ಷಾ ನಂತರ ಪ್ರತಿಕ್ರಿಯಸಿದ್ದಾರೆ. ಪಟೂರಿನ ಶಾಲೆಯೊಂದರಲ್ಲಿ ಶಿಕ್ಷನ ಸಚಿವ ಬಿ.ಸಿ.ನಾಗೇಶ್ ಅವರೇ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ ಸ್ವಾಗತಿಸಿ ಹಾರೈಸಿದರು. ಬಳಿಕ ಮಾತನಾಡಿದ ಅವರು, ಮೇ ಮೊದಲ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ. ಈ ಸಂಬಂಧ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ರಾಜ್ಯಾದ್ಯಂತ 1,109 ಕೇಂದ್ರಗಳಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

'ವಿದ್ಯಾರ್ಥಿ ಸ್ನೇಹಿ ಪರೀಕ್ಷೆ'
ಈ ಶೈಕ್ಷಣಿಕ ವರ್ಷದಲ್ಲಿ ತರಗತಿಗಳನ್ನು ನಡೆಸಿದ್ದರೂ ಸಹ ಈ ಹಿಂದಿನ ಕೋವಿಡ್ ಕಾಲದಲ್ಲಿ ಶಿಕ್ಷಣದ ಮೇಲೆ ಉಂಟಾಗಿ ಪರಿಣಾಮದ ಛಾತೆ ಮಕ್ಕಳನ್ನು ಆವರಿಸಿದಂತಿದೆ. ಸಾಂಕ್ರಾಮಿಕ ರೋಗ ಮತ್ತು ನಂತರದ ಎರಡು ವರ್ಷಗಳ ಲಾಕ್‌ಡೌನ್‌ಗಳಿಂದಾಗಿ ಕಲಿಕೆಯಲ್ಲಿ ಹಿನ್ನಡೆಯನ್ನು ಪರಿಗಣಿಸಿ, ಪರೀಕ್ಷೆಗಳು ವಿದ್ಯಾರ್ಥಿ ಸ್ನೇಹಿಯಾಗಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಪರೀಕ್ಷೆ ಬರೆಯಲು ನೀಡಿದ ಸಮಯ ಸಾಕಾಗುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲ್ಲೆಯಲ್ಲಿ ಸರ್ಕಾರ ಈ ವರ್ಷ ನಾವು 20 ಅಂಕಗಳಿಗೆ MCQ ಅನ್ನು ಪರಿಚಯಿಸಿದೆ. ಅದು ಅವರಿಗೆ ಸಮರ್ಥ ಸಮಯ ನಿರ್ವಹಣೆಗೆ ಸಹಕಾರಿಯಾಗಿದೆ. ಅಲ್ಲದೇ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಓದಲು ಮತ್ತು ಉತ್ತರಗಳನ್ನು ಬರೆಯಲು ಆರಂಭಿಸುವ ಮುನ್ನವೇ ಹೆಚ್ಚುವರಿ 15 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು.
ಅಗತ್ಯ ಭದ್ರತೆ : ಪರೀಕ್ಷಾ ಕೇಂದ್ರಗಳಲ್ಲಿ ಅತ್ಯಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಸಹಿ ತೆಗೆದ ನಂತರ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡ ಮುಚ್ಚಿದ ಕವರ್ ಅನ್ನು ವಿದ್ಯಾರ್ಥಿಗಳ ಮುಂದೆಯೇ ತೆರೆಯಲಾಗುತ್ತದೆ. ಪ್ರಶ್ನೆಪತ್ರಿಕೆಗಳನ್ನು ಇಡುವ ಸ್ಥಳದಲ್ಲಿ ಬಿಗಿ ಭದ್ರತೆ ಮತ್ತು ಸಿಸಿಟಿವಿ ಕವರೇಜ್ 24 ಗಂಟೆಗಳ ಕಾಲ ಒದಗಿಸಲಾಗಿದೆ ಎಂದು ಸಚಿವರು ವಿವರಿಸಿದರು.











Click it and Unblock the Notifications