ವಿಧಾನ ಪರಿಷತ್‌ನ 24 ಮಂದಿ ಸದಸ್ಯರು ನಿವೃತ್ತಿ
ಬೆಂಗಳೂರು, ಜ. 05: ಕರ್ನಾಟಕ ವಿಧಾನ ಪರಿಷತ್‌ನ 25 ಮಂದಿ ಸದಸ್ಯರು ಮಂಗಳವಾರ (ಜನವರಿ 05) ನಿವೃತ್ತಿ ಹೊಂದಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ನ ಹನ್ನೆರಡು ಮಂದಿ, ಬಿಜೆಪಿಯ ಏಳು, ಜೆಡಿಎಸ್‌ನ ನಾಲ್ವರು ಹಾಗೂ ಒಬ್ಬ ಪಕ್ಷೇತರ ಸದಸ್ಯರು ಇಂದು ನಿವೃತ್ತರಾದರು. ಜೆಡಿಎಸ್ ಸದಸ್ಯರಾಗಿದ್ದ ಎಂ.ಆರ್.ಹುಲಿನಾಯ್ಕರ್ ಬಿಜೆಪಿಗೆ ಪಕ್ಷಾಂತರಗೊಳ್ಳುವ ಉದ್ದೇಶದಿಂದ ಈಗಾಗಲೇ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್‌ನ ಸದಸ್ಯರಾದ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್, ಅಲ್ಲಮ್‌ಪ್ರಭು ಪಾಟೀಲ್, ವೀರಕುಮಾರ್ ಪಾಟೀಲ್, ಘೋಟ್ನೇಕರ್ ಶ್ರೀಕಾಂತ್ ಲಕ್ಷ್ಮಣ್, ಶ್ರೀನಿವಾಸ್‌ಮಾನೆ, ಛಬ್ಬೀ ನಾಗರಾಜ್, ಕೆ.ಪ್ರತಾಪ್‌ಚಂದ್ರಶೆಟ್ಟಿ, ಎ.ವಿ.ಗಾಯತ್ರಿ ಶಾಂತೇಗೌಡ, ದಯಾನಂದ ರೆಡ್ಡಿ, ನಸೀರ್ ಅಹಮದ್, ಟಿ.ಜಾನ್ ಹಾಗೂ ಧರ್ಮಸೇನಾ ನಿವೃತ್ತಿಯಾದರು.
ಬಿಜೆಪಿ ಸದಸ್ಯರಾದ ಬಸವರಾಜ್ ಹಾವಗೆಪ್ಪ ಪಾಟೀಲ್, ಜಿ.ಎಸ್.ನ್ಯಾಮಗೌಡ, ಕವಟಗಿಮಠ್ ಮಹಂತೇಶ್ ಮಲ್ಲಿಕಾರ್ಜುನ್, ಆಚಾರ್ ಹಾಲಪ್ಪ ಬಸಪ್ಪ, ಮೃತ್ಯುಂಜಯ ಜಿನಗ, ಆರ್.ಕೆ.ಸಿದ್ದರಾಮಣ್ಣ, ಕೋಟಾ ಶ್ರೀನಿವಾಸ ಪೂಜಾರಿ ಅವರು ನಿವೃತ್ತಿ ಹೊಂದಿದ್ದಾರೆ.

ಜೆಡಿಎಸ್ ಸದಸ್ಯರಾದ ಪಟೇಲ್ ಶಿವರಾಮ್, ಜಿ.ರಾಮಕೃಷ್ಣ, ಇ.ಕೃಷ್ಣಪ್ಪ, ಎಸ್.ನಾಗರಾಜು ಅವರು ನಿವೃತ್ತಿಯಾಗಿದ್ದು, ಜೆಡಿಎಸ್ ಸದಸ್ಯರಾಗಿದ್ದ ಎಂ.ಆರ್.ಹುಲಿನಾಯ್ಕರ್ ಬಿಜೆಪಿಗೆ ಪಕ್ಷಾಂತರಗೊಳ್ಳುವ ಉದ್ದೇಶದಿಂದ ಈಗಾಗಲೇ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಇಪ್ಪತ್ತೈದು ಸದಸ್ಯರ ಪೈಕಿ ಒಂಭತ್ತು ಮಂದಿ ಮರು ಆಯ್ಕೆಯಾಗಿದ್ದು, ಐದು ಮಂದಿ ಪರಾಭವಗೊಂಡಿದ್ದಾರೆ. ಉಳಿದ ಕೆಲವರಿಗೆ ಟಿಕೆಟ್ ಸಿಗದೆ ಚುನಾವಣಾ ಸ್ಪರ್ಧೆಯಿಂದ ದೂರ ಸರಿದಿದ್ದರೆ ಇನ್ನೂ ಕೆಲವರು ಚುನಾವಣಾ ಸ್ಪರ್ಧೆಯಲ್ಲಿದ್ದರೂ ಕೊನೆ ಗಳಿಗೆಯಲ್ಲಿ ನಿವೃತ್ತರಾಗಿದ್ದರು. ಮತ್ತೆ ಕೆಲವರು ಬಂಡಾಯವಾಗಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ.
ಗೆದ್ದವರು: ಕಾಂಗ್ರೆಸ್‌ನ ಸಚಿವ ಎಸ್.ಆರ್.ಪಾಟೀಲ್, ಘೋಟ್ನೇಕರ್ ಶ್ರೀಕಾಂತ್ ಲಕ್ಷ್ಮಣ್, ಮಾನೇ ಶ್ರೀನಿವಾಸ್, ಕೆ.ಪ್ರತಾಪಚಂದ್ರ ಶೆಟ್ಟಿ, ರಘು ಆಚಾರ್, ಹಾಗೂ ಧರ್ಮಸೇನಾ, ಬಿಜೆಪಿಯಿಂದ ಕವಟಗಿಮಠ ಮಹಂತೇಶ್‌ಮಲ್ಲಿಕಾರ್ಜುನ, ಕೋಟಾ ಶ್ರೀನಿವಾಸ ಪೂಜಾರಿ, ಜೆಡಿಎಸ್‌ನ ಸಂದೇಶ್ ನಾಗರಾಜ್ ಅವರು ಸೇರಿದ್ದಾರೆ.
ಹೊಸದಾಗಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಇಪ್ಪತ್ತೈದು ಮಂದಿ ಅಭ್ಯರ್ಥಿಗಳು ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವುದು ಬಾಕಿ ಉಳಿದಿದೆ. ಕಾಂಗ್ರೆಸ್‌ನಿಂದ ಹದಿಮೂರು, ಬಿಜೆಪಿಯಿಂದ ಆರು ಹಾಗೂ ಜೆಡಿಎಸ್‌ನಿಂದ ನಾಲ್ಕು, ಪಕ್ಷೇತರರು ಇಬ್ಬರು ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.
ಕಾಂಗ್ರೆಸ್‌ನಿಂದ ವಿಜಯ್‌ಸಿಂಗ್, ಆರ್.ಪ್ರಸನ್ನಕುಮಾರ್, ಎಂ.ಎ.ಗೋಪಾಲಸ್ವಾಮಿ, ಎಂ.ನಾರಾಯಣಸ್ವಾಮಿ, ಎಸ್.ರವಿ, ಬಿಜೆಪಿಯಿಂದ ಬಿ.ಜಿ.ಪಾಟೀಲ್, ಪ್ರದೀಪ್ ಶೆಟ್ಟರ್, ಎಂ.ಕೆ.ಪ್ರಾಣೇಶ್, ಎಂ.ಪಿ.ಸುನೀಲ್ ಸುಬ್ರಮಣಿ, ಜೆಡಿಎಸ್‌ನಿಂದ ಸಿ.ಆರ್.ಮನೋಹರ್, ಎನ್.ಅಪ್ಪಾಜಿಗೌಡ, ಕಾಂತರಾಜ್ ಅವರು ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶ ಮಾಡಲಿದ್ದಾರೆ.
ಪಕ್ಷೇತರರಾದ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ವಿವೇಕ್‌ರಾವ್ ವಸಂತರಾವ್ ಕೂಡ ವಿಧಾನ ಪರಿಷತ್‌ಗೆ ಮೊದಲ ಬಾರಿಗೆ ಪ್ರವೇಶ ಮಾಡಲಿದ್ದಾರೆ. ( ಒನ್ ಇಂಡಿಯಾ ಸುದ್ದಿ)
-
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್‌ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ












Click it and Unblock the Notifications