ನೆರೆ ರಾಜ್ಯಗಳೇ ಡೇಂಜರ್: ಕರ್ನಾಟಕದಲ್ಲಿ 1987 ಕೊರೊನಾ ಸೋಂಕು ಪತ್ತೆ

ಬೆಂಗಳೂರು, ಜುಲೈ 31: ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬರುವಂತೆ ಕಾಣುತ್ತಿಲ್ಲ. ಕೊರೊನಾ ಮೂರನೇ ಅಲೆ ಭೀತಿಯ ನಡುವೆ ಕೇರಳ ಹಾಗೂ ತಮಿಳುನಾಡಿನಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 1987 ಕೊರೊನಾ ಸೋಂಕು ಪತ್ತೆಯಾಗಿದ್ದು, 1632 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 37 ಆಗಿದೆ.

ರಾಜ್ಯದಲ್ಲಿ ಈವರೆಗೆ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 29,05,124ಕ್ಕೆ ಏರಿಕೆಯಾಗಿದ್ದು, ಒಟ್ಟು ಸಾವಿನ ಪ್ರಕರಣಗಳ ಸಂಖ್ಯೆ- 36,562 ಆಗಿದೆ. ಇಲ್ಲಿಯವರೆಗೆ ಒಟ್ಟು 28,44,742 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Karnataka: 1957 New Covid- 19 Positive Cases Reported In Karnataka On July 31

ರಾಜ್ಯದ ಪಾಸಿಟಿವಿಟಿ ದರ ಶೇ. 1.43ರಷ್ಟಿದ್ದು, ಕೋವಿಡ್ ಡೆತ್ ರೇಟ್ ಶೇ.1.86 ಇದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ವರದಿ ಮಾಡಿದೆ.

ವಿವಿಧ ಜಿಲ್ಲೆಗಳ ಕೋವಿಡ್ ವರದಿ
ಬೆಂಗಳೂರು ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 450 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 12,27,339 ಏರಿದ್ದರೆ, ಸಕ್ರಿಯ ಪ್ರಕರಣಗಳು 8529 ಇವೆ.

ಇನ್ನು ಕೇರಳ ಗಡಿ ಹಂಚಿಕೊಂಡಿರುವ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ 365 ಪ್ರಕರಣಗಳು, ಮೈಸೂರು ಜಿಲ್ಲೆಯಲ್ಲಿ 177 ಪ್ರಕರಣಗಳು, ಉಡುಪಿ ಜಿಲ್ಲೆಯಲ್ಲಿ 148 ಪ್ರಕರಣಗಳು, ತುಮಕೂರು ಜಿಲ್ಲೆಯಲ್ಲಿ 108 ಪ್ರಕರಣಗಳು, ಬೆಳಗಾವಿ 56, ಶಿವಮೊಗ್ಗ 40 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ.

ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 44, ಚಿಕ್ಕಮಗಳೂರು 55, ಹಾಸನ 105, ಕೊಡಗು 132, ಕೋಲಾರ 51, ಮಂಡ್ಯ ಜಿಲ್ಲೆಯಲ್ಲಿ 47 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.

Karnataka: 1957 New Covid- 19 Positive Cases Reported In Karnataka On July 31

ಬಾಗಲಕೋಟೆ 4, ಬಳ್ಳಾರಿ 15, ಬೀದರ್ 0 ಪ್ರಕರಣ ಸಾಧಿಸಿದೆ, ಚಾಮರಾಜನಗರ 23, ಚಿಕ್ಕಬಳ್ಳಾಪುರ 4, ಚಿತ್ರದುರ್ಗ 26, ಧಾರವಾಡ 19, ಗದಗ 3. ಹಾವೇರಿ 3, ಕಲಬುರಗಿ 6, ಕೊಪ್ಪಳ 7, ದಾವಣಗೆರೆಯಲ್ಲಿ 14 ಹೊಸ ಕೋವಿಡ್ ಪ್ರಕರಣ ದಾಖಲಾಗಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 75 ಸೋಂಕು ಪ್ರಕರಣಗಳು, ಯಾದಗಿರಿಯಲ್ಲಿ 1, ರಾಯಚೂರು ಜಿಲ್ಲೆಯಲ್ಲಿ 1 ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಸಾರ್ವಜನಿಕರಿಗೆ ಮನವಿ:
ಕೋವಿಡ್-19 ಸೋಂಕಿತ ವ್ಯಕ್ತಿಯೊಂದಿಗೆ ವೈಯಕ್ತಿಕ ಸಂಪರ್ಕ ಹೊಂದಿದ್ದಲ್ಲಿ, ರೋಗ ಲಕ್ಷಣಗಳು ಇರಲಿ ಅಥವಾ ಇಲ್ಲದಿರಲಿ ಮನೆಯಲ್ಲಿ ಪ್ರತ್ಯೇಕವಾಗಿರುವುದು ಹಾಗೂ ರೋಗ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ವರದಿ ಮಾಡಿಕೊಳ್ಳುವುದು ಅಥವಾ
14410 "ಆಪ್ತಮಿತ್ರ ಆರೋಗ್ಯ ಸಹಾಯವಾಣಿ" ಗೆ ಕರೆಮಾಡುವುದು.

ಕೋವಿಡ್‍ನ ಸೂಕ್ತ ನಡವಳಿಕೆಗಳಾದ, ವೈಯ್ಯಕ್ತಿಕ ನೈರ್ಮಲ್ಯ, ಮೂಗು ಮತ್ತು ಬಾಯಿ ಎರಡನ್ನೂ ಆವರಿಸುವ ಮುಖಕವಚವನ್ನು ಧರಿಸಿ, ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ / ಟಿಶ್ಯೂ ಪೇಪರನ್ನು ಬಳಸಿ, ಆಗಾಗ ಸಾಬೂನು ಮತ್ತು ನೀರಿನಿಂದ ಕೈಗಳನ್ನು ತೊಳೆದುಕೊಳ್ಳಿ.

ಕೈ ಸ್ವಚ್ಛಗೊಳಿಸುವ ದ್ರಾವಣ (ಸ್ಯಾನಿಟೈಸರ್) ಬಳಸುವುದರೊಂದಿಗೆ, ದೈಹಿಕ ಅಂತರವನ್ನು ಪಾಲಿಸಿ, ಸಾಮೂಹಿಕ ಸಾಮಾಜಿಕ ಗುಂಪು-ಕೂಟಗಳಿಗೆ ಹಾಜರಾಗುವುದನ್ನು ನಿಷೇಧಿಸುವುದರ ಮೂಲಕ ಕೋವಿಡ್- 19ರ ನಡವಳಿಕೆಗಳನ್ನು ಅನುಸರಿಸಬೇಕು ಎಂದು ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಶನಿವಾರದ ಅಂಕಿ- ಸಂಖ್ಯೆ ಪ್ರಕಾರ, ಇದುವರೆಗೂ ಭಾರತ ದೇಶದಲ್ಲಿ ಒಟ್ಟು 3,16,13,993 ಕೊರೊನಾ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷ ದಾಟಿದ್ದು, ಸದ್ಯ 4,08,920 ಪ್ರಕರಣಗಳಿವೆ.

Recommended Video

      ನೀವು ಏನ್ ಮಾಡಿದ್ರೂ ಅಷ್ಟೆ ನಾವಂತೂ ಮೇಕೆದಾಟು ಮಾಡೇ ಮಾಡ್ತೀವಿ | Oneindia Kannada

      ಕರ್ನಾಟಕದ ನೆರೆಯ ರಾಜ್ಯಗಳಾದ ಕೇರಳ ಮತ್ತು ಮಹಾರಾಷ್ಟ್ರದಲ್ಲಿಯೂ ಕೊರೊನಾ ಸೋಂಕು ಪ್ರಕರಣಗಳು ಏರಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ನೆರೆಯ ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಪ್ರವೇಶಿಸುವವರಿಗೆ ಆರ್‌ಟಿಪಿಸಿಆರ್ ಕೋವಿಡ್‌ ನೆಗೆಟಿವ್‌ ಫಲಿತಾಂಶವು ಕಡ್ಡಾಯ ಮಾಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+