ಕರ್ನಾಟಕ ಬಜೆಟ್ 2017ರ 24 ಪ್ರಮುಖ ಅಂಶಗಳು..
ಬೆಂಗಳೂರು, ಮಾರ್ಚ್ 15: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017ನೇ ಸಾಲಿನ ಬಜೆಟ್ ಜನಪ್ರಿಯ ಬಜೆಟ್ ಎಂಬುದರಲ್ಲಿ ಅನುಮಾನವೇ ಇಲ್ಲ. ಕಳೆದ ಸಾಲಿನ ಬಜೆಟ್ ಗಾತ್ರಕ್ಕೆ ಹೋಲಿಸಿದರೆ ಈ ಬಾರಿ ಶೇ 14ರಷ್ಟು ಹೆಚ್ಚಾಗಿದೆ. ಆದರೆ ಬಂಡವಾಳ ವೆಚ್ಚ (33,630) ಅಂದರೆ ಆ ಖರ್ಚಿನಿಂದ ಮತ್ತೆ ಆದಾಯ ಬರುವಂಥದ್ದು ಕಡಿಮೆ ಅನಿಸುತ್ತದೆ.
ಕೃಷಿಗಾಗಿ ಮೀಸಲಿಟ್ಟಿರುವ ಹಣದ ಪ್ರಮಾಣ ಹೆಚ್ಚಿದೆ. ಇರಲಿ ಹೀಗೆ ಬಿಡಿಬಿಡಿಯಾಗಿ ಹೇಳುವ ಬದಲು ಸಿದ್ದರಾಮಯ್ಯ ಅವರ ಬಜೆಟ್ ನಲ್ಲಿ ತುಂಬ ಪ್ರಮುಖವಾದವು ಎನಿಸಿದ 24 ಅಂಶಗಳನ್ನು ಆರಿಸಿ, ನಿಮ್ಮ ಮುಂದೆ ಇಡುತ್ತಿದ್ದೇವೆ.

* ಕೃಷಿ ಕ್ಷೇತ್ರಕ್ಕೆ 5080 ಕೋಟಿ ರುಪಾಯಿ
* ಮೊದಲ ವರ್ಷದ ಎಂಜಿನಿಯರಿಂಗ್, ವೈದ್ಯಕೀಯ, ಪಾಲಿಟೆಕ್ನಿಕ್ ಮತ್ತು ಪ್ರಥಮ ದರ್ಜೆ ಕಾಲೇಜಿಗಳ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್
* ಕಡಿಮೆ ದರದಲ್ಲಿ ತಿಂಡಿ ಹಾಗೂ ಊಟ ಒದಗಿಸುವ ನಮ್ಮ ಕ್ಯಾಂಟಿನ್ ಬೆಂಗಳೂರಿನಲ್ಲಿ, ರಾಜ್ಯದ ಇತರ ಎಲ್ಲ ಜಿಲ್ಲೆಗಳಲ್ಲೂ ಸವಿರುಚಿ ಮೊಬೈಲ್ ಕ್ಯಾಂಟಿನ್
* ಮೈಸೂರಿನ ಹಿಮ್ಮಾವಿನಲ್ಲಿ ಫಿಲ್ಮ್ ಸಿಟಿ ಸ್ಥಾಪನೆ [ಬಜೆಟ್: ಸಾಲ ಮನ್ನಾ ಇಲ್ಲ, ನೀರಾಕ್ಕೆ ಲೈಸೆನ್ಸ್, ಕೃಷಿಗೆ ಸಿದ್ದು ನೀಡಿದ್ದೇನು?]

* ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರವೇಶ ಶುಲ್ಕ ಗರಿಷ್ಠ 200 ರುಪಾಯಿಗೆ ಮಿತಿ.
* ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ಅನುದಾನ. ಏಕೀಕರಣದ ಅರವತ್ತು ವರ್ಷಗಳ ನೆನಪಿಗಾಗಿ ವಿಶ್ವಕನ್ನಡ ಸಮ್ಮೇಳನ
* ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಏಳನೇ ವೇತನ ಆಯೋಗ

* ತಾಪಂ ಅಧ್ಯಕ್ಷರ ಗೌರವಧನ 6 ಸಾವಿರಕ್ಕೆ, ಜಿಪಂ ಸದಸ್ಯರದು 5 ಸಾವಿರಕ್ಕೆ, ತಾಪಂ ಸದಸ್ಯರದು 3 ಸಾವಿರಕ್ಕೆ ಹಾಗೂ ಗ್ರಾಪಂ ಸದಸ್ಯರ ಗೌರವಧನ 1 ಸಾವಿರಕ್ಕೆ ಏರಿಕೆ

* ನಿವೃತ್ತ ಪತ್ರಕರ್ತರ ಮಾಸಾಶನ 8ರಿಂದ 10 ಸಾವಿರಕ್ಕೆ ಏರಿಕೆ. ಜಿಲ್ಲಾ ಕೇಂದ್ರಗಳಲ್ಲಿನ ಪತ್ರಕರ್ತರಿಗೆ ಉಚಿತ ಬಸ್ ಪಾಸ್
* 2 ಸ್ಟ್ರೋಕ್ ಆಟೋಗಳ ರದ್ದತಿಗೆ ಕ್ರಮ. 4 ಸ್ಟ್ರೋಕ್ ಎಲ್ ಪಿಜಿಯ ಹತ್ತು ಸಾವಿರ ಆಟೋಗಳಿಗೆ 30 ಸಾವಿರ ಸಹಾಯಧನ
* ಎರಡು ಹಂತಗಳಲ್ಲಿ 1191 ಪಿಯು ಉಪನ್ಯಾಸಕರ ನೇಮಕ
* ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ವೈಫೈ. ಖಾಸಗಿ ಸಂಸ್ಥೆಗಳಲ್ಲಿ ನಿವೃತ್ತಿ ವಯಸ್ಸು 58ರಿಂದ 60ಕ್ಕೆ ಏರಿಕೆ

* 21 ಜಿಲ್ಲೆಗಳಲ್ಲಿ ಹೊಸ ತಾಲೂಕುಗಳ ಘೋಷಣೆ
* 25 ಲಕ್ಷ ರೈತರಿಗೆ 13,500 ಕೋಟಿ ಕೃಷಿ ಸಾಲ ನೀಡುವ ಗುರಿ
* ರಾಜ್ಯದ ಪ್ರತಿ ಮಾಂಸದ ಅಂಗಡಿಗೆ 1.25 ಲಕ್ಷ ಅನುದಾನ

* ರಾಜ್ಯದ ಎಲ್ಲ ಆಶಾ ಕಾರ್ಯಕರ್ತೆಯರಿಗೆ 1 ಸಾವಿರ ರುಪಾಯಿ ವಿಶೇಷ ಗೌರವಧನ
* ಭಾಗ್ಯಜ್ಯೋತಿ ಯೋಜನೆಯಡಿ ನೀಡುವ ಉಚಿತ ವಿದ್ಯುತ್ 18ರಿಂದ 40 ಯೂನಿಟ್ ಗೆ ಏರಿಕೆ

* ಜನೌಷಧಿ ಜೆನರಿಕ್ ಔಷಧಿ ಮಳಿಗೆ ಯೋಜನೆ ಅಡಿ 200 ಮೆಡಿಕಲ್ ಷಾಪ್
* ಸ್ವಾತಂತ್ರ್ಯ ಯೋಧರ ಮಾಸಾಶನ 10 ಸಾವಿರ, ಗೋವಾ ವಿಮೋಚನಾ ಹೋರಾಟಗಾರರ ಮಾಸಾಶನ 4 ಸಾವಿರಕ್ಕೆ ಹೆಚ್ಚಳ












Click it and Unblock the Notifications