ಪ್ರಧಾನಿ ನರೇಂದ್ರ ಮೋದಿಗೆ ಕನ್ನಡಿಗರ ಬೇಡಿಕೆಗಳು

ಬೆಂಗಳೂರು, ನವೆಂಬರ್ 01: 65ನೇ ಕನ್ನಡ ರಾಜ್ಯೋತ್ಸವದಕ್ಕೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಜನರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಕನ್ನಡದಲ್ಲಿಯೇ ಟ್ವೀಟ್ ಮಾಡುವ ಮೂಲಕ ಅವರು, "ಕರ್ನಾಟಕದ ಜನತೆಯ ಸಂತಸ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ.

ಭಾನುವಾರ ಪ್ರಧಾನಿ ಮೋದಿ, "ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ ಜನ ಶಕ್ತಿ ಮತ್ತು ಕೌಶಲ್ಯದಿಂದ ಕರ್ನಾಟಕ ಪ್ರಗತಿಯ ಉತ್ತುಂಗಕ್ಕೇರುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್‌ಗೆ ಕರ್ನಾಟಕದ ಹಲವಾರು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಇದುವರೆಗೂ ಈ ಟ್ವೀಟ್‌ಗೆ 14.8 ಜನರು ಲೈಕ್ ಮಾಡಿದ್ದಾರೆ. 605 ಜನರು ಕಮೆಂಟ್ ಮಾಡಿದ್ದಾರೆ. ತಮ್ಮ ಬೇಡಿಕೆಗಳನ್ನು ಇಟ್ಟಿದ್ದಾರೆ.

ಮೋದಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕನ್ನಡಿಗರು ರಾಜ್ಯದ ಹಲವಾರು ಪ್ರಸ್ತುತ ವಿದ್ಯಮಾನಗಳನ್ನು ತಿಳಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ. ಅಂತಹ ಟ್ವೀಟ್‌ಗಳು ಇಲ್ಲಿವೆ....

ಮೋದಿ ಯವರಿಗೆ ಧನ್ಯವಾದಗಳು

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಸಮೂಹ ಸಂಸ್ಥೆಗೆ ಹಸ್ತಾಂತರ ಮಾಡಲಾಗಿದೆ. ಇದನ್ನು ನರೇಂದ್ರ ಮೋದಿ ಅವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಹಾಕಲಾಗಿದೆ.

ಬ್ಯಾಂಕಿಂಗ್ ಪರೀಕ್ಷೆ ಕನ್ನಡದಲ್ಲಿ

ಈ ನಿಮ್ಮ ಒಂದು ದಿನದ ಶುಭ ಕೋರಿಕೆಯ ಬದಲು ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಎಲ್ಲಾ ಭಾಷೆಗಳಲ್ಲಿಯೂ ಬರೆಯುವ ಅವಕಾಶ ಮೊದಲು ನೀಡಿ ಎಂದು ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂಬ ಬಗ್ಗೆ ಗಮನ ಸೆಳೆಯಲಾಗಿದೆ.

ಜಿಎಸ್‌ಟಿ ಪರಿಹಾರ ಕೊಡಲಿಲ್ಲ

ನೆರೆ ಪರಿಹಾರ ಕೊಡ್ಲಿಲ್ಲ, GST ಬಾಕಿ ಕೊಡ್ಲಿಲ್ಲ, IBPS ನಿಯಮ ತಿದ್ದುಪಡಿ ಮಾಡಿ ಕನ್ನಡಿಗರ ಉದ್ಯೋಗವನ್ನು ಕಿತ್ತು ಕೊಂಡ್ರಿ, ಕೇಂದ್ರ ಸರಕಾರದ ಸೇವೆಗಳು ಕನ್ನಡದಲ್ಲಿ ಸಿಗುತ್ತಿಲ್ಲ ಎಂದು ಮೋದಿಗೆ ಪ್ರತಿಕ್ರಿಯೆ ನೀಡಲಾಗಿದೆ.

ಹಿಂದಿ ಹೇರಿಕೆ ಬಗ್ಗೆ ಮಾತು

ಕರುನಾಡಿನ ಪ್ರಗತಿ ಹಿಂದಿ, ಹಿಂದುತ್ವದ ಹೇರಿಕೆ ತೆರಿಗೆ ಹಂಚಿಕೆ ಅನ್ಯಾಯ,ನಿರಂತರ ತೆರಿಗೆ ಲೂಟಿಯಿಂದ ಕಡಿಮೆಯಾಗಿದೆ. ನಾಡಿನಿಂದ ಕೇಂದ್ರ ಪಡೆಯುವುದು ಹೆಚ್ಚು ವಾಪಸ್ ಕೊಡೋದು ಕಮ್ಮಿ ಎಂದು ಗಮನ ಸೆಳೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+