ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಾಹಿತ್ಯ ಸಮ್ಮೇಳನ ಟ್ವಿಟ್ಟರಲ್ಲಿ ಟ್ರೆಂಡಿಂಗ್

By Mahesh
|
Google Oneindia Kannada News

Recommended Video

ಕನ್ನಡ ಸಾಹಿತ್ಯ ಸಮ್ಮೇಳನ ಟ್ವಿಟ್ಟರಲ್ಲಿ ಟ್ರೆಂಡಿಂಗ್ | Oneindia Kannada

ಬೆಂಗಳೂರು, ನವೆಂಬರ್ 24: 'ಭಾಷೆ ಬೆಳೆಯಲು ಸಾಹಿತ್ಯವೂ ಅತ್ಯಂತ ಮುಖ್ಯ. ಸಾಹಿತ್ಯ ಮತ್ತು ಸಾಹಿತಿಗಳನ್ನು ಪ್ರೋತ್ಸಾಹಿಸಿ,ಗೌರವಿಸುವುದು ಸರ್ಕಾರದ ಕರ್ತವ್ಯ ಎಂದು ಭಾವಿಸಿದ್ದೇವೆ. 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡದ ಕಂಪನ್ನು ನಾಡಿನ ಮೂಲೆಮೂಲೆಗೂ ಹರಡುವಲ್ಲಿ ಯಶಸ್ವಿಯಾಗಲಿ,ಕನ್ನಡ ನಾಡು-ನುಡಿ ಮತ್ತಷ್ಟು ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ' ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿದ್ದರಾಮಯ್ಯ ಭಾಷಣದ ಮುಖ್ಯಾಂಶಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿದ್ದರಾಮಯ್ಯ ಭಾಷಣದ ಮುಖ್ಯಾಂಶ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿದ್ದರಾಮಯ್ಯ ಭಾಷಣದ ಮುಖ್ಯಾಂಶಸಿದ್ದರಾಮಯ್ಯ ಅವರ ಟ್ವೀಟ್ ಸೇರಿದಂತೆ ಕನ್ನಡ ಭಾಷೆ, ಸಂಸ್ಕೃತಿ, ಸಮ್ಮೇಳನ ಚಿತ್ರ, ವಿಶೇಷಗಳ ಬಗ್ಗೆ ಸರಣಿ ಟ್ವೀಟ್ ಗಳು ಗುರುವಾರ ಬೆಳಗ್ಗೆನಿಂದಲೇ ಆರಂಭವಾಗಿವೆ. ಈ ಮೂಲಕ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನ ಬೆಂಗಳೂರಿನ ಟ್ರೆಂಡ್ ಮ್ಯಾಪ್ ನಲ್ಲಿ #kannadasahityasammelana ಟ್ರೆಂಡ್ ಆಗಲು ಶುರುವಾಗಿದೆ.

ಚಿತ್ರಗಳು : ಸಾಂಸ್ಕೃತಿಕ ನಗರಿಯಲ್ಲಿ ಅಕ್ಷರ ಜಾತ್ರೆ

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು. 83 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಶುಭಾಶಯಗಳು. ಕನ್ನಡ ನಮ್ಮ ಹೆಮ್ಮೆ ಎಂಬ ಟ್ವೀಟ್ ಗಳು ಹರಿದಾಡುತ್ತಿವೆ. ಹೆಮ್ಮೆಯ ಕನ್ನಡಿಗರೇ ನೀವು ಟ್ವೀಟ್ ಮಾಡಿ, ನುಡಿಹಬ್ಬದ ಬಗ್ಗೆ ನಮಗೂ ತಿಳಿಸಿ.

ಸಾಹಿತ್ಯ ಸಮ್ಮೇಳನದ ಬಗ್ಗೆ ಸಿಎಂ ಮೆಚ್ಚುಗೆ

ಸಾಹಿತ್ಯ ಸಮ್ಮೇಳನದ ಬಗ್ಗೆ ಸಿಎಂ ಮೆಚ್ಚುಗೆ

ಮಾತೃ ಭಾಷೆಯ ಶಿಕ್ಷಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಈಗ ಇರುವ ಕಾನೂನು ತೊಡಕನ್ನು ನಿವಾರಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ಹೇಳಿದರು.

ಸಮ್ಮೇಳನ ಚಿತ್ರಗಳನ್ನು ಹಂಚಿಕೊಂಡ ಸಾರ್ವಜನಿಕರು

ಸಮ್ಮೇಳನಕ್ಕಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಸಿದ್ಧತೆ ಬಗ್ಗೆ ಚಿತ್ರಗಳನ್ನು ಹಂಚಿಕೊಂಡ ಸಾರ್ವಜನಿಕರು

ಕನ್ನಡದ ಮೊದಲ ಶಾಸನದ ಬಗ್ಗೆ

ಹಲ್ಮಿಡಿ ಶಾಸನ 450 ಕ್ರಿ.ಶ. ಅವಧಿಯಲ್ಲಿ ಸಿಕ್ಕ ಕನ್ನಡದ ಮೊದಲ ಶಾಸನ. ಹೀಗೆ ಶಾಸನ, ಪಾರಂಪರಿಕ ಕಟ್ಟಡ, ಅರಸರ ಮನೆತನಗಳ ಬಗ್ಗೆ ವಿಷಯಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಸಮ್ಮೆಳನದ ಹಾರ್ದಿಕ ಶುಭಾಶಯಗಳು

'ಕನ್ನಡ ಸಾಹಿತ್ಯ ಸಮ್ಮೆಳನದ ಹಾರ್ದಿಕ ಶುಭಶಯಗಳು'- ವ್ಯಾಕರಣ ದೋಷ, ಸ್ಪೆಲ್ಲಿಂಗ್ ಮಿಸ್ಟೇಕು, ಭಾಷೆ ಮೀರಿ ಕನ್ನಡದ ಬಗ್ಗೆ ಟ್ವೀಟ್ ಮಾಡಬೇಕೆಂಬ ಭಾವ ಟ್ವಿಟ್ಟರ್ ನಲ್ಲಿ ಮೂಡಿದೆ.

ರಾಜಕೀಯ ಪಕ್ಷಗಳಿಂದಲೂ ಶುಭಹಾರೈಕೆ

ಸಿಎಂ ಸಿದ್ದರಾಮಯ್ಯ ಅವರ ನಂತರ ಆಮ್ ಆದ್ಮಿ ಪಕ್ಷದಿಂದ ಕೂಡಾ ಶುಭಹಾರೈಕೆ ಸಂದೇಶ ಬಂದಿದೆ.

ಸಮ್ಮೇಳನದಲ್ಲಿ ಕಂಡ ದೃಶ್ಯ

ಸಮ್ಮೇಳನದಲ್ಲಿ ಕಂಡ ದೃಶ್ಯ ಅಪರೂಪದ ಚಿತ್ರಗಳು ಈ ಟ್ರೆಂಡಿಂಗ್ ಟ್ಯಾಗ್ ನಲ್ಲಿ ಸಿಗುತ್ತಿವೆ.

English summary
83rd Kannada Sahitya Sammelana begins in Mysuru. #kannadasahityasammelana Trending today on Twitter
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X