ಕನ್ನಡ ರಾಜ್ಯೋತ್ಸವ 15 + ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ!
Karnataka Rajyotsava: ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು.. ಕಾಮನ ಬಿಲ್ಲನು ಕಾಣುವ ಕವಿಯೊಳು ತೆಕ್ಕನೆ ಮನ ಮೈ ಮರೆಯುವುದು.. ಕನ್ನಡ ಕನ್ನಡ ಹ ಸವಿಗನ್ನಡ.. ನವೆಂಬರ್ 1 ಕನ್ನಡ ರಾಜ್ಯೋತ್ಸವ. ಪ್ರತಿ ಕನ್ನಡಿಗನಿಗೂ ಇದು ವಿಶೇಷ ಹಬ್ಬ.
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು.. ಎನ್ನುವ ಸಾಲುಗಳನ್ನು ಕೇಳಿ ರೋಮಾಂಚಿತರಾಗದೆ ಇರುವ ಕನ್ನಡಿಗನೇ ಇಲ್ಲ. ನಿಮಗೆಲ್ಲ ಕನ್ನಡ ರಾಜ್ಯೋತ್ಸವ ಶುಭಾಶಯಗಳು. ಕನ್ನಡಿಗರಿಗೆ ವಾಟ್ಸಾಪ್, ಸಂದೇಶ ಹಾಗೂ ಫೇಸ್ಬುಕ್ ಸ್ಟೇಟಸ್ ಸೇರಿದಂತೆ ಎಲ್ಲಾ ಮಾದರಿಯ ಶುಭಾಶಯ ಸಾಲುಗಳು ಇಲ್ಲಿವೆ.

ಕನ್ನಡಿಗರಿಗೆ ವರ್ಷವೆಲ್ಲವೂ ಕನ್ನಡ ರಾಜ್ಯೋತ್ಸವವೇ. ನವೆಂಬರ್ 1 ಅದರ ಮೂರ್ತರೂಪ. ಈ ದಿನ ಕನ್ನಡಿಗರಿಗೆ ಶುಭಕೋರುವ ಸಂದೇಶಗಳು ಇಲ್ಲಿವೆ. ಕನ್ನಡದ ಪ್ರಖ್ಯಾತ ಕವಿಗಳ ಸಾಲುಗಳು ಸಹ ಇಲ್ಲಿವೆ.
ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು
- ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
--------------
ಪ್ರತಿಯೊಬ್ಬ ಕನ್ನಡಿಗನಿಗೂ ವಿಶೇಷ ಹಬ್ಬವಿದು. ಕನ್ನಡ ನಾಡಿನ ಎಲ್ಲರೂ ಸೇರಿ ಆಚರಿಸುವ ನಮ್ಮ ಹೆಮ್ಮೆಯ ಕರುನಾಡ ಜನ್ಮದಿನವಿದು. ಕನ್ನಡ ರಾಜ್ಯೋತ್ಸವದ ಆತ್ಮೀಯ ಶುಭಾಶಯಗಳು
ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ...
ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
--------------
ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ
ಬಾಯಿ ಒಲಿಸಾಕಿದ್ರೂನೆ
ಮೂಗ್ನಲ್ ಕನ್ನಡ ಪದವಾಡ್ತೀನಿ
ನನ್ ಮನಸ್ನ್ ನೀ ಕಾಣೆ!
--------------
ನವೆಂಬರ್ ಒಂದರಂದು ಮಾತ್ರವಲ್ಲ. ವರ್ಷ ಪೂರ್ತಿ ಕನ್ನಡ ರಾಜ್ಯೋತ್ಸವ ಆಚರಿಸೋಣ, ಕನ್ನಡಿಗರೆಲ್ಲರಿಗೂ ರಾಜ್ಯೋತ್ಸವದ ಶುಭಾಶಯ.
--------------
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಬಾರಿಸು ಕನ್ನಡ ಡಿಂಡಿಮವ
ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು
- ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ನಲ್ಮೆಯ ಶುಭಾಶಯಗಳು
--------------
ನನ್ನ ಕನ್ನಡ ನುಡಿಯೆ ನೀನೆಷ್ಟು ಚಂದ
ಏನು ಗೀಚಿದರು ಆಗುವುದು ಶ್ರೀಗಂಧ
- ಎಲ್ಲಾ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
--------------
ಕನ್ನಡದಲ್ಲಿ ನಾವಿದ್ರೆ ಸಾಕಾಗೊಲ್ಲ
ಕನ್ನಡ ನಮ್ಮೊಳಗೆ ಇದ್ದಾಗ ಮಾತ್ರವೇ ಜೀವನ
ಸಾರ್ಥಕವೆನ್ನಿಸೋದು...
--------------

ನೀ ಮೆಟ್ಟುವ ನೆಲ - ಅದೆ ಕರ್ನಾಟಕ;
ನೀನೇರುವ ಮಲೆ - ಸಹ್ಯಾದ್ರಿ.
ನೀ ಮುಟ್ಟುವ ಮರ - ಶ್ರೀಗಂಧದ ಮರ;
ನೀ ಕುಡಿಯುವ ನೀರ್ - ಕಾವೇರಿ.
ಪುಣ್ಯ ಭೂಮಿಯಲ್ಲಿ ಜನಿಸಿದ ನಾವೇ ಧನ್ಯರು. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..
--------------
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕ ಬಂಡಿ,
ಇದು ವಿಧಿ ಓಡಿಸುವ ಬಂಡಿ
--------------
ಕರುನಾಡಿಗೆ ಬಂದು ಕನ್ನಡ ಭಾಷೆಯನ್ನು ಗೌರವಿಸುವವರು, ಕನ್ನಡ ಕಲಿತವರೂ ನಮ್ಮವರೇ..
ಕರುನಾಡಿಗೆ ಋಣಿಯಾಗಿರುವ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ನಲ್ಮೆಯ ಶುಭಾಶಯಗಳು
--------------
ಭವ್ಯ ಇತಿಹಾಸ, ಪರಂಪರೆ ಕರುನಾಡಿಗಿದೆ. ವಿಶ್ವ ಲಿಪಿಗಳ ರಾಣಿ ಕನ್ನಡ
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
--------------
ಹಸಿರಾಗಲಿ ಕರ್ನಾಟಕ
ಉಸಿರಾಗಲಿ ಕನ್ನಡ
ಕನ್ನಡ ರಾಜ್ಯೋತ್ಸವದ ಸಂಭ್ರಮ ಇಂದು
--------------
ಗಗನ ಗಾಳಿಯಲಿ ಜಿಗಿದು ಜೀವಿಸಲಿ ಚೆಲುವ ಕನ್ನಡದ ಬಾವುಟ!
ಕನ್ನಡ ರಾಜ್ಯೋತ್ಸವದ ಶುಭಾಶಯ
--------------
ನಮ್ಮ ನುಡಿ ಕನ್ನಡ
ಸಿರಿನಾಡನು ಕಟ್ಟಲಿಕ್ಕೆ
ಬರ್ರಿ ನಮ್ಮ ಸಂಗಡ
ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ
--------------
ಸಾಧುಂಗೆ ಸಾಧು
ಮಾಧುರ್ಯಂಗೆ ಮಾಧುರ್ಯನ್
ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್
ಮಾಧವನೀತನ್ ಪೆರನಲ್ಲ...
ಎಲ್ಲಾ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
--------------
ಕಲಿಯೋಕೆ ಕೋಟಿ ಭಾಷೆ, ಆಡೂಕೇ ಒಂದೇ ಭಾಷೆ, ಕನ್ನಡ.. ಕನ್ನಡ.. ಕಸ್ತೂರಿ ಕನ್ನಡ ಎಲ್ಲರಿಗೂ ಕೂಡ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.












Click it and Unblock the Notifications