ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈಗ ಕಾಗದ ರಹಿತ ಕಚೇರಿ
ಬೆಂಗಳೂರು, ಜೂ.26 : ಇ-ಆಡಳಿತದ ಮೊದಲ ಭಾಗವಾಗಿ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾಗದ ರಹಿತ ಕಚೇರಿಯಾಗಿದೆ. ಸುಮಾರು 22 ಲಕ್ಷ ರೂ. ವೆಚ್ಚದಲ್ಲಿ ಕಚೇರಿಯನ್ನು ಇ-ಆಡಳಿತಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಕಚೇರಿಯ ಆನ್‌ಲೈನ್ ಸೇವೆಗಳಿಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಕಲಾವಿದರ ಸಂಭಾವನೆ, ಸಹಾಯಧನಗಳು ಇನ್ನು ಮುಂದೆ ನೇರವಾಗಿ ಬ್ಯಾಂಕ್ ಖಾತೆಗೆ ಜಮಾವಣೆಯಾಗಲಿದೆ. [ಸೇವೆ ಕನ್ನಡದಲ್ಲಿದ್ರೆ ಮಾತ್ರ 'ಎಂ ಆಡಳಿತ' ಸ್ವಾಗತಾರ್ಹ]

ಕನ್ನಡದ ಪುಸ್ತಕಗಳನ್ನು ಓದುವ ವ್ಯವಸ್ಥೆಯನ್ನು ಕಂಪ್ಯೂಟರ್ ಮತ್ತು ಮೊಬೈಲ್‌ಗೆ ಅಳವಡಿಸಲಾಗಿದೆ. ನ್ಯೂಸ್ ಹಂಟ್ ಅಪ್ಲಿಕೇಶನ್ ಮೂಲಕ ಪುಸ್ತಕಗಳನ್ನು ಓದಬಹುದಾಗಿದೆ. ಈ ಅಪ್ಲಿಕೇಶನ್‌ನಲ್ಲಿ ಸದ್ಯ 123 ಪುಸ್ತಕಗಳಿವೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. [ಕರ್ನಾಟಕ ಮೊಬೈಲ್ ಒನ್ ರಾಜ್ಯದ ಜನರಿಗೆ ಅರ್ಪಣೆ]
ಕೇಂದ್ರ ಸರ್ಕಾರದ ಇ-ಆಡಳಿತ ಇಲಾಖೆಯ ನೆರವಿನಿಂದ ಇಲಾಖೆಯನ್ನು ಕಾಗದ ರಹಿತವಾಗಿ ಮಾಡಲಾಗಿದೆ. ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಕರ್ನಾಟಕ ಮೊದಲ ಸರ್ಕಾರಿ ಕಚೇರಿ ಎಂಬ ಹೆಗ್ಗಳಿಕೆಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪಾತ್ರವಾಗಿದೆ.
ಹೇಗೆ ಕೆಲಸ ಮಾಡುತ್ತದೆ : ಕಾಗದ ರಹಿತವಾಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಪೂರ್ಣವಾಗಿ ಆನ್‌ಲೈನ್ ಸೇವೆಗಳ ಮೂಲಕವೇ ಕಾರ್ಯ ನಿರ್ವಹಣೆ ಮಾಡಲಿದೆ. ಕಲಾವಿದರೊಬ್ಬರು ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಿದರೆ, ಅದನ್ನು ಸ್ಕ್ಯಾನ್ ಮಾಡಲಾಗುತ್ತದೆ.
ಅರ್ಜಿಯನ್ನು ಸ್ವೀಕರಿಸಿದ ಬಗ್ಗೆ ಅರ್ಜಿದಾರರಿಗೆ ಎಸ್‌ಎಂಎಸ್ ಮತ್ತು ಇ-ಮೇಲ್ ಮೂಲಕ ಮಾಹಿತಿ ತಿಳಿಸಲಾಗುತ್ತದೆ. ಅವರು ಅರ್ಜಿಯು ಪ್ರತಿ ಹಂತ ದಾಟಿದಾಗಲೂ ಎಸ್‌ಎಂಎಸ್ ಮೂಲಕ ಮಾಹಿತಿಯನ್ನು ತಲುಪಿಸಲಾಗುತ್ತದೆ.












Click it and Unblock the Notifications