ಮಸೂದೆ ಪಾಸ್.. ಕಂಬಳ ಉಳಿಸಿ ಚಳುವಳಿಗಾರರಿಗೆ ಜೈ

Subscribe to Oneindia Kannada

ಬೆಂಗಳೂರು, ಫೆಬ್ರವರಿ 13: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ 'ಪ್ರಾಣಿ ಹಿಂಸಾಚಾರ ತಡೆ ತಿದ್ದುಪಡಿ ವಿಧೇಯಕ - 2017 ಪಾಸ್' ಆಗಿದೆ. ಇದರಿಂದ ಕಂಬಳ ನಡೆಸಲು ಹಾದಿ ಸುಗಮವಾದಂತಾಗಿದೆ. ಕಂಬಳದ ಜತೆ ಎತ್ತಿನ ಓಟ ಮತ್ತು ಎತ್ತಿನಗಾಡಿ ಓಟಕ್ಕೂ ಸರಕಾರ ಕಾನೂನಿನ ಮೂಲಕ ಅನುವು ಮಾಡಿಕೊಟ್ಟಿದೆ.

ಇಂದು (ಫೆ. 13) ವಿಧಾನಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಪಶುಸಂಗೋಪನಾ ಸಚಿವ ಎ ಮಂಜು ಮನವಿಗೆ ಸ್ಪಂದಿಸಿ 'ಪ್ರಾಣಿಗಳಿಗೆ ಹಿಂಸಾಚಾರ ಮಾಡುವುದನ್ನು ತಡೆಗಟ್ಟುವ (ಕರ್ನಾಟಕ ತಿದ್ದುಪಡಿ) ವಿಧೇಯಕ, 2017'ನ್ನು ಒಕ್ಕೊರಲಿನಿಂದ ಬೆಂಬಲಿಸಿದರು. ಇದರಿಂದ ಮಸೂದೆಗೆ ಸದನದಲ್ಲಿ ಅಂಗೀಕಾರ ಸಿಕ್ಕಿತು. ಇದಕ್ಕಿನ್ನು ರಾಜ್ಯಪಾಲರ ಅಂಕಿತ ಬೀಳಬೇಕಾಗಿದ್ದು ನಂತರ ಮಸೂದೆ ಕಾನೂನಾಗಲಿದೆ.[ವಿಧೇಯಕ ಮಂಡನೆ: ಕಂಬಳ ನಡೆಸಲು ಇನ್ನೊಂದೇ ಹೆಜ್ಜೆ ಬಾಕಿ..]

 Kambala: Amendment bill passed in the legislative house

ತಮಿಳುನಾಡಿನಲ್ಲಿ ಜನವರಿಯಲ್ಲಿ ಜಲ್ಲಿಕಟ್ಟಿಗಾಗಿ ಭಾರೀ ಹೋರಾಟ ನಡೆದಿತ್ತು. ಇದೇ ವೇಳೆ ಕರ್ನಾಟಕದಲ್ಲೂ ಕಂಬಳಕ್ಕಾಗಿ ಒತ್ತಾಯಿಸಿ ಹೋರಾಟಗಳು ನಡೆದಿದ್ದವು. ನಂತರ ಕರ್ನಾಟಕ ಸರಕಾರ ಕಾನೂನಿಗೆ ತಿದ್ದುಪಡಿ ತಂದು ಕಂಬಳ ನಡೆಸಲು ಅನುವು ಮಾಡಿಕೊಡುವುದಾಗಿ ಭರವಸೆ ನೀಡಿತ್ತು. ಅದರಂತೆ ಫೆಬ್ರವರಿ 10ರಂದು ವಿಧಾನ ಸಭೆಯಲ್ಲಿ ಪಶು ಸಂಗೋಪನೆ ಸಚಿವ ಎ. ಮಂಜು ಈ ವಿಧೇಯಕ ಮಂಡಿಸಿದ್ದರು. ಇದೀಗ ವಿಧೇಯಕ ಧ್ವನಿ ಮತದ ಮೂಲಕ ಅಂಗೀಕಾರವಾಗಿದೆ.[ಇದು ಕಂಬಳದ ಅನಭಿಷಕ್ತ ದೊರೆಯ ಇಂಟೆರೆಸ್ಟಿಂಗ್ ಕಥೆ..!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka assembly session passed ‘Karnataka Prevention of Cruelty to Animals (Amendment) Bill -2017’. Which will allow the animal races like Kambala, bull race and bullock cart race.
Please Wait while comments are loading...