ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಗರಿ ಬೊಮ್ಮನಹಳ್ಳಿಯಲ್ಲಿ ಕಮಲ ಜಾತ್ರೆ, ಸೆಲ್ಫಿ ಕ್ರೇಜ್!

By ಜಿಎಂ ರೋಹಿಣಿ, ಬಳ್ಳಾರಿ
|
Google Oneindia Kannada News

ಬಳ್ಳಾರಿ, ಮಾರ್ಚ್. 06 : ಅಲ್ಲಿ ನಡೆದದ್ದು 'ಕಮಲದ ಜಾತ್ರೆ' ಅರ್ಥಾತ್ ಬಿಜೆಪಿಯ ಜಾತ್ರೆ. ಕೇಂದ್ರ ಸರ್ಕಾರದ ಯೋಜನೆಗಳ ಪ್ರಚಾರದ ಅಬ್ಬರದ ಜಾತ್ರೆ. ಎಲ್ಲೆಲ್ಲೂ ಕಮಲ ಕಮಲ ಕಮಲ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ 'ಕಮಲ ಜಾತ್ರೆ - ಬಿಜೆಪಿ ಜಾತ್ರೆ'ಯ ಒಂದು ನೋಟ ಇದಾಗಿದೆ.

ಈ ಜಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಆಳೆತ್ತರದ ಸ್ಟ್ಯಾಚ್ಯುಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಎಲ್ಲರಿಗೂ ಮುಕ್ತ ಅವಕಾಶ. ಆಸಕ್ತಿ ಇದ್ದವರು ತಮ್ಮ ಅಧಿನಾಯಕರ ಜೊತೆ ನಿಂತು ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡಿದ್ದೇ ಹೆಚ್ಚು. ಮೂರು ದಿನಗಳ ಕಾಲ ಈ ಜಾತ್ರೆ ನಡೆಯಿತು.

ಅನಿಲ್ ಲಾಡ್ ಕಾರ್ಯಕ್ರಮದಲ್ಲಿ ಬಳೆ, ಸೀರೆಗೆ ಮುಗಿಬಿದ್ದ ಮಹಿಳೆಯರುಅನಿಲ್ ಲಾಡ್ ಕಾರ್ಯಕ್ರಮದಲ್ಲಿ ಬಳೆ, ಸೀರೆಗೆ ಮುಗಿಬಿದ್ದ ಮಹಿಳೆಯರು

ಜಿಲ್ಲಾ ಬಿಜೆಪಿ ಅಧ್ಯಕ್ಷ ಚೆನ್ನಬಸವನಗೌಡ ಅವರು ಮಾತನಾಡಿ, 'ಹರ ದೇವಸ್ಥಾನದ ಆವರಣದಲ್ಲಿ ಬಿಜೆಪಿಯ ಕಮಲ ಜಾತ್ರೆ ನಡೆದಿದೆ. ಆರಂಭದಲ್ಲಿ ಕಳಪೆಯಾಗಿತ್ತು. ಕ್ರಮೇಣ ಜನರು ಅಕ್ಷರಶಃ ಜಾತ್ರೆಯಿಂದ ಸಭೆ ಸೇರತೊಡಗಿದರು.

ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

ಪಕ್ಷ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಬಿಜೆಪಿ ಕೈಗೊಂಡಿರುವ ವಿನೂತನ ಪ್ರಚಾರತಂತ್ರ ಇದಾಗಿದೆ. ನಿಜಕ್ಕೂ ಆಸಕ್ತಿದಾಯಕ. ಮಕ್ಕಳು, ಗೃಹಿಣಿಯರು, ಯುವಶಕ್ತಿ ಜಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದೆ' ಎಂದರು.

'ಕಮಲದ ಜಾತ್ರೆ' ಅರ್ಥಾತ್ ಬಿಜೆಪಿಯ ಜಾತ್ರೆ.

'ಕಮಲದ ಜಾತ್ರೆ' ಅರ್ಥಾತ್ ಬಿಜೆಪಿಯ ಜಾತ್ರೆ.

ಅಲ್ಲಿ ನಡೆದದ್ದು 'ಕಮಲದ ಜಾತ್ರೆ' ಅರ್ಥಾತ್ ಬಿಜೆಪಿಯ ಜಾತ್ರೆ. ಕೇಂದ್ರ ಸರ್ಕಾರದ ಯೋಜನೆಗಳ ಪ್ರಚಾರದ ಅಬ್ಬರದ ಜಾತ್ರೆ. ಎಲ್ಲೆಲ್ಲೂ ಕಮಲ ಕಮಲ ಕಮಲ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ 'ಕಮಲ ಜಾತ್ರೆ - ಬಿಜೆಪಿ ಜಾತ್ರೆ'ಯ ಒಂದು ನೋಟ ಇದಾಗಿದೆ.

ಅರಿವು ಮೂಡಿಸುವ ಪ್ರಯತ್ನ ಇದಾಗಿದೆ

ಅರಿವು ಮೂಡಿಸುವ ಪ್ರಯತ್ನ ಇದಾಗಿದೆ

ಕ್ಷೇತ್ರದ ಮಾಜಿ ಶಾಸಕ ಕೆ. ನೇಮಿರಾಜನಾಯ್ಕ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಈ ಜಾತ್ರೆ ವಿಶೇಷ ಗಮನ ಸೆಳೆದಿದೆ. ಆಟ, ಹಾಸ್ಯ, ಸಂಗೀತ, ನಟನೆಯ ಜೊತೆ ಜೊತೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ, ಕೇಂದ್ರದ - ಬಿಜೆಪಿಯ ಜನಪರ ವಿಚಾರಗಳು - ಯೋಜನೆಗಳ ಕುರಿತು ಅರಿವು ಮೂಡಿಸುವ ಪ್ರಯತ್ನ ಇದಾಗಿದೆ. ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅನೇಕರು ಮನರಂಜನಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದಾರೆ ಎಂದರು.

ಮೋದಿ ಅವರ 'ಛಾಯ್ ಪರ್ ಚರ್ಚಾ'

ಮೋದಿ ಅವರ 'ಛಾಯ್ ಪರ್ ಚರ್ಚಾ'

ಪ್ರಧಾನಿ ನರೇಂದ್ರ ಮೋದಿ ಅವರ ಛಾಯ್ ಪರ್ ಚರ್ಚಾ' ಕೂಡ ಇಲ್ಲಿ ಜಾರಿಯಲ್ಲಿತ್ತು. ಅನೇಕರು ಬಿಜೆಪಿ ಚಿಹ್ನೆಯ ಗಾಂಧಿಟೋಪಿ ಹಾಕಿಕೊಂಡು ಕೈಯಲ್ಲಿ ಚಹಾದ ಕಪ್ಪನ್ನು ಹಿಡಿದುಕೊಂಡು, ಬಿಸಿಬಿಸಿಯಾದ ಘಮಘಮಿಸುವ ಚಹಾ ಚಪ್ಪರಿಸುತ್ತಲೇ ಹರಟೆ ಹೊಡೆದದ್ದು ವಿಶೇಷ. ಅಷ್ಟರಲ್ಲೇ, ನೆರೆದವರು ಗುಂಪಿನ ಮಧ್ಯದಿಂದ ಒಂದೆರೆಡು ಪ್ರಶ್ನೆಗಳನ್ನು ಹಾರಿಬಿಟ್ಟು ಮಾಜಿ ಶಾಸಕರಿಂದ ಉತ್ತರ ಪಡೆದದ್ದು ಅನೇಕರ ಗಮನ ಸೆಳೆದಿತ್ತು.

ಕಸರತ್ತಿನ ಪ್ರದರ್ಶನ ಜಾತ್ರೆ

ಕಸರತ್ತಿನ ಪ್ರದರ್ಶನ ಜಾತ್ರೆ

ರೋಪ್ ಕ್ಲೈಬಿಂಗ್, ಮಲ್ಲಕಂಬ, ಹುಬ್ಬಳ್ಳಿಯ ಮಲ್ಲರ ಮೈ ನವಿರೇಳಿಸುವ ಕಸರತ್ತಿನ ಪ್ರದರ್ಶನ ಜಾತ್ರೆಯಲ್ಲಿದ್ದವರ ಚಪ್ಪಾಳೆ, ಕೇಕೆಯ ಪ್ರಶಂಸೆಗಳ ಮಧ್ಯೆ ಅನೇಕರು ಕುಣಿದು ಕುಪ್ಪಳಿಸಿದದರು. ಹಲವರು ಮಲ್ಲರ ಪ್ರದರ್ಶನಕ್ಕೆ ಮನಸೋತು ನಗದು ಪ್ರಶಸ್ತಿಯನ್ನು ನೀಡಿ, ಫೋಟೋಗಳನ್ನು ಕ್ಲಿಕ್ಕಿಸಿದ್ದೇ ಹೆಚ್ಚು. ಜಾದೂ, ನೃತ್ಯಗಳು, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತು ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧಧ ವಿಡಂಬನಾತ್ಮಕ ಟೀಕೆಗಳು ಬಿಜೆಪಿಯ ಅಭಿಮಾನಿಗಳನ್ನು ರಂಜಿಸಿದವು.

ಬಳ್ಳಾರಿಯಿಂದ ಸ್ಪರ್ಧೆ, ಬಿಜೆಪಿಯಿಂದ ಅಚ್ಚರಿಯ ಹೆಸರುಬಳ್ಳಾರಿಯಿಂದ ಸ್ಪರ್ಧೆ, ಬಿಜೆಪಿಯಿಂದ ಅಚ್ಚರಿಯ ಹೆಸರು

English summary
Kamala Jatra -BJP Election campaign at Hagari Bommanahalli enthralls public. Apart from achievements of BJP tenure 2008-2013, public seen taking selfie with statues of state and central leaders
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X